ಜಿಲ್ಲಾ ಕೇಂದ್ರಗಳಲ್ಲಿ ಪಿಯುಸಿ ಮೌಲ್ಯಮಾಪನ ನಡೆಸಲು ಆಗ್ರಹ
ವಿಜಯಪುರ೦೩: ದ್ವಿತೀಯ ಪಿಯುಸಿ ಮೌಲ್ಯಮಾಪನ ಕುರಿತಂತೆ ಜೂನ್ 2ರಂದು ವಿಜಯಪುರದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ಸಭೆ ನಡೆಸಿ ಬಳಿಕ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಉಪನ್ಯಾಸಕರು ವಿದ್ಯಾಥರ್ಿಗಳ ಹಿತ ಕಾಪಾಡುವಲ್ಲಿ ಬದ್ಧರಾಗಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಬಂದು ಮೌಲ್ಯಮಾಪನ ಮಾಡಿದಲ್ಲಿ ಉಪನ್ಯಾಸಕರ ಆರೋಗ್ಯದ ಹೆದರಿಕೆ ಇರುವುದರಿಂದ ಮೌಲ್ಯಮಾಪನ ಕಾರ್ಯ ಸರಿಯಾಗಿ ಆಗಲ್ಲ.
ಇಂಗ್ಲಿಷ್ ಭಾಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಜಿಲ್ಲಾ ಕೇಂದ್ರದಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲು ತೀಮರ್ಾನಿಸಿದ್ದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಅದೇ ತೀಮರ್ಾನವನ್ನು ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗೆ ವಿಸ್ತರಿಸಬೇಕು.
ವಿಜ್ಞಾನ ವಿಷಯದ ಪ್ರಾಯೋಗಿಕ ಪರೀಕ್ಷೆಗಳನ್ನು ತಾಲೂಕು ಹಂತದಲ್ಲಿ ಹಾಗೂ ಜಿ ಹಂತದಲ್ಲಿಯೇ ನೆರವೇರಿಸಲಾಗಿದೆ. ಅವುಗಳ ಅಂಕಗಳನ್ನು ಆನ್ಲೈನ್ನಲ್ಲಿಯೇ ಎಂಟ್ರಿ ಮಾಡಲಾಗಿದೆ. ಈಗಲೂ ಅದೇ ವಿಧಾನವನ್ನು ಅನುಸರಿಸಲು ಯಾವ ತೊಂದರೆಯೂ ಇಲ್ಲ. ಆದ್ದರಿಂದ ಜಿಲ್ಲಾ ಹಂತದಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಸ್ಥಾಪಿಸಬೇಕು.ಮೌಲ್ಯಮಾಪನ ಮಾಡಲು ನಾವು ಯಾವಾಗಲೂ ಸಿದ್ಧರಾಗಿದ್ದೇವೆ. ಮಕ್ಕಳ ಬಗ್ಗೆ ನಮಗೆ ಸಾಕಷ್ಟು ಕಾಳಜಿ ಇದೆ. ಆದ್ದರಿಂದ ನಮ್ಮ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ಮೌಲ್ಯಮಾಪನ ಮಾಡಲು ನಾವು ಸಿದ್ಧರಿಲ್ಲ ಎಂಬುವದನ್ನು ಜಿಲ್ಲೆಯ ವಿಜ್ಞಾನ ವಿಷಯದ ಎಲ್ಲ ಉಪನ್ಯಾಸಕರ ಒಕ್ಕೊರಲು ಅಭಿಪ್ರಾಯವಾಗಿದೆ.ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಅನುವು ಮಾಡಿಕೊಟ್ಟಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದೇವೆ ಎಂದು ಪಿಯುಡಿಡಿಪಿಐ, ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಭೌತಶಾಸ್ತ್ರ ವೇದಿಕೆಯ ಅಧ್ಯಕರಾದ ಎಸ್.ಐ. ಸುರಪುರ, ಎಂ.ಬಿ. ಯಾದವಾಡ, ರಸಾಯನಶಾಸ್ತ್ರ ವೇದಿಕೆಯ ಅಧ್ಯಕ್ಷ ಎಸ್. ಎಸ್. ಗೌರಿ ಹಾಗೂ ಸಿ. ಎಸ್. ಹೊಸಮನಿ, ಗಣಿತ ವೇದಿಕೆಯ ಅಧ್ಯಕರಾದ ಟಿ.ಆರ್. ಕುಲಕಣರ್ಿ, ಎಸ್.ಆರ್. ಬೆನಕಟ್ಟಿ, ಜೀವಶಾಸ್ತ್ರ ವೇದಿಕೆ ಅಧ್ಯಕರಾದ ಚವ್ಹಾಣ, ಎಂ. ಎಸ್. ಬಿರಾದಾರ, ಉಪನ್ಯಾಸಕರಾದ ಪಿ.ಜಿ. ಜೋಷಿ, ಸಿ.ಬಿ. ನಾಟಿಕಾರ, ಎಲ್.ಐ. ಹುಣಶಿಕಟ್ಟಿ, ಬಿ.ಎಸ್. ಗೌರಿ, ಸಂತೋಷ ಉಮಜರ್ಿ, ರಾಜಕುಮಾರ ಮುರಗೋಡ, ಮಲ್ಲಿಕ ಖಾನಾಪೂರ, ಮಹೆಬೂಬ ಗುರಡಿ, ಎಸ್.ಎಸ್. ಬಣಗಾರ ಬಿ.ಕೆ. ಉಂಬರಜೆ, ಸಂಜೀವ ಕುಲಕಣರ್ಿ, ಶಿವನಂದ ಕಲ್ಯಾಣಿ ಉಪನ್ಯಾಸಕಿಯರಾದ ಆರ್.ಜಿ. ದರಬಾರ, ಇನಾಮದಾರ ಹಾಗೂ ಅನೇಕ ಉಪನ್ಯಾಸಕರು ಭಾಗವಹಿಸಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 