ಮೂಡಲಗಿ 26: ಹೊಸ ತಾಲೂಕಾ ಕೆಂದ್ರವಾದ ಮೂಡಲಗಿಯಲ್ಲಿ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ವಿದ್ಯಾಲಯವನ್ನು ಮಂಜೂರಾತಿ ನೀಡಬೇಕೆಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬುಧವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರಿಗೆ ಮನವಿ ಸಲ್ಲಿಸಿದರು.
ಮೂಡಲಗಿಯಲ್ಲಿರುವ ಸರಕಾರಿ ಹಾಗೂ ಖಾಸಗಿ ಪೌಢ ಶಾಲೆಗಳಲ್ಲಿ ಪ್ರತಿ ವರ್ಷ ಸೂಮಾರು 1000 ಸಾವಿರಕ್ಕೂ ಹೆಚ್ಚು ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾಥರ್ಿಗಳ ಒಂಳಗೊಂಡರೆ ಒಟ್ಟು 2000 ಸಾವಿರ ಮೇಲ್ಪಟ್ಟು ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಕುಳಿತು ಉತೀರ್ಣರಾಗಿರುತ್ತಾರೆ. ಆದರೆ ಮೂಡಲಗಿ ಮತ್ತು ಸುತ್ತಲಿನ 10 ಕಿ.ಮೀ ವ್ಯಾತ್ತಿಯಲ್ಲಿ ಸಕರ್ಾರಿ ಪದವಿ ಪೂರ್ವ ಕಾಲೇಜು ಸೌಲಭ್ಯ ಇಲ್ಲದಿರುವದರಿಂದ ಎಸ್.ಎಸ್.ಎಲ್.ಸಿ ವಿದ್ಯಾಭ್ಯಸವನ್ನು ಮುಗಿಸಿದ ವಿದ್ಯಾಥರ್ಿಗಳು ಪದವಿ ಪೂರ್ವ ಶಿಕ್ಷಣದಿಂದ ವಂಚಿತರಾಗಿರುತ್ತಾರೆ.
ಮೂಡಲಗಿಯಲ್ಲಿ ಪದವಿ ಪೂರ್ವ ವಿದ್ಯಾಲಯವನ್ನು ಪ್ರಾರಂಭಿಸಲು ನಮ್ಮ ಜನ ಪ್ರತಿ ನಿಧಿಗಳಿಗೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬರದೇ ಇರುವದು ನಾಚಿಕೆಗೇಡಿತನದ ಸಂಗತಿಯಾಗಿದೆ. ಯಾವ ಉದ್ದೇಶಕ್ಕಾಗಿ ಮೂಡಲಗಿಯಲ್ಲಿ ಯಾವ ಉದ್ದೇಶಕ್ಕಾಗಿ ಸಕರ್ಾರಿ ಪದವಿ ಪೂರ್ವ ಮಹಾವಿದ್ಯಾಲಯ ಮಂಜೂರಾತಿಗೆ ಕ್ರಮ ಕೈಗೊಂಡಿರುವದಿಲ್ಲಾ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಪದವಿ ಪೂರ್ವ ಕಾಲೇಜ ಪ್ರಾರಂಭಿಸಲು ಕೊಠಡಿಗಳು ಲಭ್ಯವಿರುತ್ತವೆ. ಕಾರಣ ವಿದ್ಯಾಥರ್ಿಗಳ ಹಿತದೃಷ್ಟಿಯಿಂದ ಮೂಡಲಗಿಯಲ್ಲಿ ಸಕರ್ಾರಿ ಪದವಿ ಪೂರ್ವ ಕಾಲೇಜು ಮಂಜೂರಾತಿ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆಯಲ್ಲಿ ಶಿವಬಸು ಹಂದಿಗುಂದ, ಚನ್ನಪ್ಪ ಅಥಣಿ, ಮಲ್ಲಪ್ಪ ತೇರದಾಳ ಉಪಸ್ಥಿತರಿದ್ದರು.