ಗಣರಾಜ್ಯೋತ್ಸವ ಯೋಗ ಸಾಧಕಿ ಎಸ್ ಪೂಜಾ ಸನ್ಮಾನ

ಗಣರಾಜ್ಯೋತ್ಸವ ಯೋಗ ಸಾಧಕಿ ಎಸ್ ಪೂಜಾ ಸನ್ಮಾನ  Republic Day Yoga practitioner S Pooja felicitated

  ಕಂಪ್ಲಿ 27 : ಬಳ್ಳಾರಿಯ ಬಿ.ಎಂ.ಸಿ.ಆರ್‌.ಸಿ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸೋಮವಾರ ನಡೆಯಿತು ಗಣರಾಜ್ಯೋತ್ಸವವನ್ನು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ಧ್ವಜಾರೋಹಣವನ್ನು ನೇರವೇರಿಸಿದರು ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನಿಸಿದರು ಗಣರಾಜ್ಯೋತ್ಸವದಲ್ಲಿ ಮೈಸೂರು ದಸಾರ ಉತ್ಸವ ಮತ್ತು ಕಲಬುರ್ಗಿ ವಿಭಾಗ ಮಟ್ಟದಲ್ಲಿ ಯೋಗದಲ್ಲಿ ಪ್ರಥಮ ಸ್ಥಾನ  ಜೊತೆಗೆ ಬಂಗಾರ ಪದಕ ಪಡೆದ ಯೋಗ ಸಾಧಕಿ ಕಂಪ್ಲಿಯ ಎಸ್ ಪೂಜಾ 7ನೇತರಗತಿ ಎ.ಪಿ.ಜಿ.ಅಬ್ದುಲ್ ಕಲಾಂ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಎಸ್ ಪೂಜಾರವರನ್ನು  ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ಮತ್ತು ಲೋಕಸಭೆ ಸಂಸದರಾದ ಈ ತುಕಾರಾಮ್ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು ಈಸಂದರ್ಭದಲ್ಲಿ ಮಹಾಪೌರ ಮಹಾನಗರ ಪಾಲಿಕೆ ಪಿ ಗಾದೆಪ್ಪ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿ ಹೆಚ್ ಲಕ್ಷ್ಮಣ ಡಾ ಬಾಬು  ಜಗಜೀವನರಾಮ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಮುಂಡರಗಿ ನಾಗಾರಾಜ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ ಪೋಲಿಸ್ ಮಹಾ ನೀರಿಕ್ಷಕರು ಡಾ.ಪಿ.ಹರ್ಷ ಜಿಲ್ಲಾ ಪಂಚಾಯಿತಿ ಸಿ.ಓ ಮಹಮ್ಮದ್ ಹ್ಯಾರಿಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಸೇರಿ ಅನೇಕ ಎಲ್ಲಾ ಇಲಾಖೆಯ  ಅಧಿಕಾರಿಗಳು ಇದ್ದರು ಶಾಲೆಯ ಮುಖ್ಯ ಗುರುಗಳು ಮತ್ತು ಸಹಶಿಕ್ಷಕರು ಮತ್ತು ಕುಟುಂಬದವರು ಹರ್ಷ ವ್ಯಕ್ತ ಪಡಿಸಿದರು