ಸಕಾಲಕ್ಕೆ ಸಾಲ ಮರುಪಾವತಿಸಿ : ಕ್ಷೇತ್ರಾಧಿಕಾರಿ ಗುರಿಕಾರ

ಸಕಾಲಕ್ಕೆ ಸಾಲ ಮರುಪಾವತಿಸಿ : ಕ್ಷೇತ್ರಾಧಿಕಾರಿ ಗುರಿಕಾರ  Repay loans on time: Field Officer Gurikar


ತಾಳಿಕೋಟಿ 22 : ರೈತಾಪಿ ಜನರು ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿಡಿಸಿಸಿ ಬ್ಯಾಂಕ್ ತಾಳಿಕೋಟಿ ಶಾಖೆ, ಕ್ಷೇತ್ರಾಧಿಕಾರಿ ಆರ್‌ಎಂ ಗುರಿಕಾರ ಹೇಳಿದರು. ಸೋಮವಾರ ತಾಲೂಕಿನ ಹೊರನಾಡ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಇದರ 63ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರವು ಹಲವಾರು ಯೋಜನೆಗಳನ್ನು ಹೊರತಂದಿದ್ದು ಇದಕ್ಕಾಗಿ ಸಾಕಷ್ಟು ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕು ಎಂದು ತಿಳಿಸಿ ನನ್ನ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು ಎಂಟು ಸಹಕಾರಿ ಸಂಘಗಳಲ್ಲಿ ಹರನಾಳ ಸಂಘವು ಒಳ್ಳೆಯ ಸ್ಥಿತಿಯಲ್ಲಿದೆ.

ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಕೆ.ಹೆಚ್‌.ಪಾಟೀಲ ಅವರು ಮಾತನಾಡಿ ಇಂದಿನ ಸಭೆಯಲ್ಲಿ ಶೇರುದಾರರು ಸಂಘದ ಅಭಿವೃದ್ಧಿ ದೃಷ್ಟಿಯಿಂದ ನೀಡಿದ ಸಲಹೆ ನೀಡಿದ ಸಲಹೆ ಸೂಚನೆಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ನಿಂಗಪ್ಪ ನಾಗೂರ, ಹಣಮಂತ್ರಾಯ ಹೂಗಾರ, ಬಸವರಾಜ ಅಂಗಡಿ, ಅಲ್ಲಿಪಟೇಲ ಮಕಾಶಿ, ಮಲ್ಲಣ್ಣ ಗಬಸಾವಳಗಿ, ದುರ್ಗಪ್ಪ ದೊಡ್ಮನಿ, ಮಲ್ಲಣ್ಣ ಚಳ್ಳಗಿ, ಗಣ್ಯರಾದ ಬಿ.ಎಸ್‌. ಇಸಾಂಪೂರ, ಸಾಹೇಬಗೌಡ ಮಕಾಶಿ, ಶಿವರಾಜ ಗುಂಡಕನಾಳ,ದೇವರಾಜ ನಾಗೂರ, ಮೊಹಮ್ಮದ್ ಮಕಾಶಿ, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.