ಸಾಲ ಮರುಪಾವತಿಸಿ ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಿ: ಕುಲಗುಡೆ
Repay loans and contribute to bank growth: Kulgude
ಲೋಕದರ್ಶನ ವರದಿ
ಸಾಲ ಮರುಪಾವತಿಸಿ ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಿ: ಕುಲಗುಡೆ
ರಾಯಬಾಗ 21: ಬಿಡಿಸಿಸಿ ಬ್ಯಾಂಕ್‌ದಿಂದ ಸಾಲ ಪಡೆದ ರೈತರು ಮತ್ತು ಗ್ರಾಹಕರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ, ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಬೇಕೆಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ ಹೇಳಿದರು.
ಬುಧವಾರ ಪಟ್ಟಣದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್‌ನ 116 ರೈತರಿಗೆ 62 ಲಕ್ಷ ರೂ. ಬೆಳೆ ಸಾಲ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ತಮ್ಮ ಕಬ್ಬಿನ ಬಿಲ್ ಬಿಡಿಸಿಸಿ ಬ್ಯಾಂಕ್‌ಗೆ ಜಮೆ ಮಾಡುವಂತೆ ನೋಡಿಕೊಳ್ಳಬೇಕು. ಪಿಕೆಪಿಎಸ್‌ದಿಂದ ಟ್ರ್ಯಾಕ್ಟರ್ ಸಾಲ ನೀಡಲಾಗುತ್ತಿದೆ ಎಂದರು. ಶೀಘ್ರದಲ್ಲಿ ರಾಯಬಾಗ ತಾಲೂಕಿನ ನಿಪನಾಳ ಮತ್ತು ನಸಲಾಪೂರ ಗ್ರಾಮದಲ್ಲಿ ಬ್ಯಾಂಕ್ ಶಾಖೆಗಳು ಪ್ರಾರಂಭಗೊಳ್ಳಲಿವೆ ಎಂದು ತಿಳಿಸಿದರು.
ತಾಲೂಕಾ ನಿಯಂತ್ರಣಾಧಿಕಾರಿ ಎಸ್.ಬಿ.ಪಾಟೀಲ, ಶಾಖೆ ವ್ಯವಸ್ಥಾಪಕ ಬಿ.ಪಿ.ರಾಯಣ್ಣವರ, ಬಿಐಗಳಾದ ಮಂಜುನಾಥ ಜಂಬಗಿ, ಸುಧೀರ ನಂದಗಾಂವ, ಚಿದಾನಂದ ಬನಶಂಕರಿ, ಮಾವಿನಹೊಂಡ ರೇವಣಸಿದ್ದೇಶ್ವರ ಪಿಕೆಪಿಎಸ್ ಅಧ್ಯಕ್ಷ ವಿ.ಎಸ್.ಪೂಜಾರಿ, ಮಹೇಶ ಕೊರವಿ, ಮಹಾದೇವ ಲಕ್ಷ್ಮೇಶ್ವರ, ಚಂದ್ರಕಾಂತ ದೇಸಾಯಿ, ರೇವಪ್ಪ ಪೂಜಾರಿ, ಕಲ್ಲಪ್ಪ ಕಗ್ಗೂಡೆ, ಮಹಾದೇವ ಸಾರಾಪೂರೆ, ಮಲ್ಲಿಕಾರ್ಜುನ ಜಿರಲೆ, ವಿನೋದ ಪೂಜಾರಿ, ಅಲಗೊಂಡ ತಟ್ಟಿಮನಿ, ಮಹಾಂತೇಶ ಬೆಳಕೂಡೆ, ಮಹಾದೇವ ನಾಯಿಕ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 