ಖ್ಯಾತ ವೈದ್ಯ ಡಾ. ಜಿ ಆರ್ ತಮಗೊಂಡ ನಿಧನ: ಸಂತಾಪ
Renowned doctor Dr. G R Tamgonda passes away: Condolences
ಹುಬ್ಬಳ್ಳಿ 07: ಖ್ಯಾತ ವೈದ್ಯರಾದ ಡಾ. ಜಿ ಆರ್ ತಮಗೊಂಡ (ಡಾ. ಗುರುಪಾದಪ್ಪ ರಾವತಪ್ಪ ತಮಗೊಂಡ) ಅವರು ಲಿಂಗೈಕ್ಯರಾಗಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಡಾ ಜಿ ಆರ್ ತಮಗೊಂಡ ಅವರ ಹೆಸರು ಹುಬ್ಬಳ್ಳಿ ಧಾರವಾಡದಲ್ಲಿ ಚಿರಪರಿಚಿತವಾದದ್ದು. ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿ ನಿವೃತ್ ರಾದವರು. ನಿವೃತ್ ನಂತರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಜೋತೆ ಸೇರಿ ಸಮಾಜ ಮುಖಿ ಕಾಯ9ಗಳಲ್ಲಿ ಸಕ್ರೀಯವಾಗಿ ತೊಡಗಿಸಿಗೊಂಡಿದ್ದರು. ಸದಾ ಹಸನ್ಮುಖಿ, ಸಮಾಜ ಪರ ಚಿಂತನೆ, ವೈದ್ಯರಿಗೆ ಸಲಹೆ ಸೂಚನೆ, ವೈದ್ಯರಿಂದ ಜನರಿಗೆ ತಿಳುವಳಿಕೆ ನೀಡಿಸುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದವರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳಲ್ಲಿ ಡಾ. ಜಿ ಆರ್ ತಮಗೊಂಡ ಅವರು ಸದಾ ಉತ್ಸಾಹದಿಂದ ಭಾಗವಹಿಸುತ್ತಿದ್ದರು ಅಲ್ಲದೆ ನಮಗೆಲ್ಲ ಪ್ರೋತ್ಸಾಹಿಸುತ್ತಿದ್ದರು. ನನಗೆ ಸದಾ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿಸುವುದರ ಜೊತೆಗೆ ಬೆನ್ನು ತಟ್ಟಿ ಹರಸುತ್ತಿದ್ದರು ಎಂದು ಸ್ಮರಣೆ ಮಾಡುತ್ತಾ ಡಾ. ತಮಗೊಂಡ ಅವರ ಅಗಲಿಕೆ ತುಂಬಾ ನೋವು ತಂದಿದೆ ಎಂದು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಐಎಂಎದ ಮಾಜಿ ಅಧ್ಯಕ್ಷ ಡಾ.ವಿ.ಬಿ.ನಿಟಾಲಿ, ಡಾ.ಪಿ.ಎನ್.ಬಿರಾದಾರ, ಡಾ. ಎಸ್.ಪಿ.ಬಳಿಗಾರ, ಡಾ. ಕೆ.ಎಫ್.ಕಮ್ಮಾರ, ಡಾ. ಸುನೀಲ ಗೋಖಲೆ, ಡಾ. ಮಂಜುನಾಥ ನೇಕಾರ, ಡಾ. ಧನಪಾಲ ಹೆಗಡೆ, ಡಾ. ಲಿಂಗರಾಜ ಡಿ. ಹೊರಕೇರಿ ಪ್ರೊ ಎಸ್.ಎಂ.ಸಾತ್ಮಾರ, ಡಾ. ಮಹೇಶ ಡಿ. ಹೊರಕೇರಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಡಾ. ಸರ್ವಮಂಗಳಾ ಕುದರಿ, ಶಾಂತಪ್ಪ ವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಬಸವರಾಜ ಡಿ. ಅಳ್ಳಗಿ, ಸಿದ್ದಯ್ಯ ಹಿರೇಮಠ, ಮೃತ್ಯುಂಜಯ ಮಟ್ಟಿ, ಚನಬಸಪ್ಪ ಧಾರವಾಡಶೆಟ್ಟರ, ವಿರುಪಾಕ್ಷ ಕಟ್ಟಿಮನಿ, ಎಸ್.ಐ.ನೇಕಾರ, ಶಿವಯೋಗಿ ಮುಗಬಸ್ತ, ಸುನಂದಾ ಮುಗಭಸ್ತ, ಎಂಟಿ.ರಾಥೋಡ, ಸುಭಾಸ ಚವ್ಹಾಣ, ಡಾ. ವಂದನಾ ಕರಾಳೆ, ಪ್ರೊ ಎಸ್.ಆರ್.ಆಶಿ, ವೀರಣ್ಣ ಹೂಲಿ, ಭಾರತಿ ವಾಲಿ, ಡಾ. ಬಸವಕುಮಾರತಲವಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 