ಗಾಯರಾಣ ಜಮೀನದಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡಗಳ ತೆರವು
Removal of unauthorized buildings constructed on Gayarana land
ರಾಯಬಾಗ 29: ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಗಾಯರಾಣ ಜಮೀನದಲ್ಲಿ ಹಠವಾದಿ ಲೋಕೇಶ್ವರ ಸ್ವಾಮಿ ಎನ್ನುವ ವ್ಯಕ್ತಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಗುರುವಾರ ಮುಂಜಾನೆ ತಹಶೀಲ್ದಾರ ಸುರೇಶ ಮುಂಜೆ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತದೊಂದಿಗೆ ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ಮೇಖಳಿ ಗ್ರಾಮದ ಗಾಯರಾಣ ರಿ.ಸ.ನಂ.225 ರ ಒಟ್ಟು 21 ಎಕರೆ 23 ಗುಂಟೆ ಪೈಕಿ 8 ಎಕರೆಯಲ್ಲಿ ಅತಿಕ್ರಮವಾಗಿ ಕಾಮಿ ಸ್ವಾಮಿ ಲೋಕೇಶ್ವರ ನಿರ್ಮಿಸಿದ್ದ ಮಠ ಮತ್ತು ಅನ್ನದಾಸೋಹ ಭವನವನ್ನು ಮುಂಜಾನೆ ಜೆಸಿಬಿ ಮೂಲಕ ನಿಯಮಾನುಸಾರ ತೆರವು ಕಾರ್ಯಾಚಣೆ ಮಾಡಿ, ಜಮೀನವನ್ನು ಇಲಾಖೆ ಸುಪರ್ದಿಗೆ ಪಡೆಯಲಾಗಿದೆ. ಸರ್ಕಾರ ಅನುದಾನ ನೀಡಿದ ನಂತರ ಗಾಯರಾಣ ಜಮೀನಿಗೆ ತಂತಿ ಬೇಲಿ ಹಾಕಲಾಗುವುದು ಎಂದು ತಹಶೀಲ್ದಾರ ಮುಂಜೆ ತಿಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಎಸ್.ಮಂಟೂರ, ಕಂದಾಯ ನೀರೀಕ್ಷಕ ಸೋಮಶೇಖರ ಜೋರೆ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 