ಬಸವ ಪಂಚಮಿ ಆಚರಣೆ
Celebration of Basava Panchami
ಲೋಕದರ್ಶನ ವರದಿ
ಮಾಂಜರಿ 17 : ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ ಇದನ್ನು ಹೋಗಲಾಡಿಸಲು ನಾಗರ ಪಂಚಮಿಯಂದು ಮಾಂಜರಿ ಗ್ರಾಮದ ಹಳೆ ಬಸ್ಸ ನಿಲ್ದಾಣದಲ್ಲಿ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತದೆ ಎಂದು ಸಾಮಾಜಿಕ ಚಿಂತಕ ಸಿದ್ದಾರ್ಥ್ ಗಾಯಗೋಳ ಹೇಳಿದರು ಮಾಂಜರಿ ಗ್ರಾಮದಲ್ಲಿ ಕಳೆಂದ ದಿನಾಂಕ 17 ರಂದು ಮಾನವ ಬಂದತ್ವ ವೇದಿಕೆ. ಅಂಬೇಡ್ಕರ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ ಮಾಂಜರಿ ಇವರ ಸಹಯೋಗದಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ಯ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತಾರೆ ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ ನಮ್ಮ ರಾಜ್ಯವೂಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವೀಗೀಡಾಗುತ್ತಿದಾರೆ ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಮಕ್ಕಳಿಗೆ ಮತ್ತು ಬಡವರಿಗೆ ಹಾಲು ಕೊಟ್ಟರೆ ಅದು ಅವಶ್ಯಕವಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ರವಿಂದ್ರ ವಡವಡೆ ರಾಹುಲ ಗಾಯಗೋಳ ಅಪ್ಪಾಸಾಬ ಕಾಸಾಯಿ ಶಿವರಾಜ ಮಾಂಜ್ರೆಕರ. ರವಿ ಈರಾಯಿ. ರೋಹಣ ಕಾಸಾಯಿ ಹನಮಂತ ಮಾಯನ್ನವಯರ ನಾಗಪ್ಪಾ ವಡವಡೆ ರಾಜು ವಡವಡೆ ಕಲ್ಲಪ್ಪಾ ನಾಂದ್ರೆ ಸಂಜಯ ನಾಂದ್ರೆ ಸೇರಿದಂತೆ ಯುವಕ ಮಂಡಳದ ಸಧಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ ರಾಘವೇಂದ್ರ ಲಂಬುಗೋಳ ನಿರೂಪಿಸಿ ಸ್ವಾಗತಿಸಿ ವಂದಿಸಿದರು ನಂತರ ಮಕ್ಕಳಿಗೆ ಹಾಲು ವಿತರಣೆ ಮಾಡಲಾಯಿತು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 