ಶ್ರೀ ಗಣೇಶ, ಶ್ರೀ ಅಂಬಾಭವಾನಿ, ಶ್ರೀ ಶಿರಡಿ ಸಾಯಿಬಾಬಾ ಹಾಗೂ ನವಗ್ರಹ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ಶ್ರೀ ಗಣೇಶ, ಶ್ರೀ ಅಂಬಾಭವಾನಿ, ಶ್ರೀ ಶಿರಡಿ ಸಾಯಿಬಾಬಾ ಹಾಗೂ ನವಗ್ರಹ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ Religious programs at the Sri Ganesha, Sri Ambabhavani, Sri Shirdi Saibaba, and Navagraha temples

ಹಾವೇರಿಯಲ್ಲಿ ಜುಲೈ 29ರಂದು ಗುರುಪೂರ್ಣಿಮಾ ವಿಶೇಷ ಕಾರ್ಯಕ್ರಮ  

 ಹಾವೇರಿ 27:  ನಗರದ ಹಾನಗಲ್ ರಸ್ತೆಯ ಶ್ರೀ ವೈಭವಲಕ್ಷ್ಮೀ ಪಾರ್ಕ್‌ ಸಮೀಪದಲ್ಲಿರುವ ಶ್ರೀ ಗಣೇಶ, ಶ್ರೀ ಅಂಬಾಭವಾನಿ, ಶ್ರೀ ಶಿರಡಿ ಸಾಯಿಬಾಬಾ ಹಾಗೂ ನವಗ್ರಹ ದೇವಾಲಯದಲ್ಲಿ ಜುಲೈ 29ರಂದು ಬುಧವಾರ ಗುರುಪೂರ್ಣಿಮಾ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  

ಕಾರ್ಯಕ್ರಮವು ಬೆಳಿಗ್ಗೆ 6 ಗಂಟೆಗೆ ಶ್ರೀ ಶಿರಡಿ ಸಾಯಿಬಾಬಾ ದೇವರ ಕಾಕಡ ಆರತಿಯೊಂದಿಗೆ ಆರಂಭವಾಗಲಿದೆ. ನಂತರ ಬೆಳಿಗ್ಗೆ 7.30ಕ್ಕೆ ಶ್ರೀ ಗಣೇಶ ದೇವರಿಗೆ ಅಷ್ಟೋತ್ತರ ಪೂಜೆ ನಡೆಯಲಿದೆ.  

ಬೆಳಿಗ್ಗೆ 9 ಗಂಟೆಗೆ ಶ್ರೀ ಸಾಯಿ ಸತ್ಯವ್ರತ ಪೂಜೆ, ಮಧ್ಯಾಹ್ನ 1 ಗಂಟೆಗೆ ಆರತಿ ಬಳಿಕ ಅನ್ನಪ್ರಸಾದ ಸೇವೆ ನಡೆಯಲಿದೆ.  ಸಂಜೆ 4 ಗಂಟೆಗೆ ಶ್ರೀ ಚಕ್ರ ಪೂಜೆ, ಸಂಜೆ 6 ಗಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ರಾತ್ರಿ 8.30ಕ್ಕೆ ಶೇಜಾರತಿ ನೆರವೇರಲಿದೆ.  

ಗುರುಪೂರ್ಣಿಮಾ ಅಂಗವಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾವೇರಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಅಂಬಾಭವಾನಿ ದೇವಸ್ಥಾನ ಟ್ರಸ್ಟ್‌ (ರಿ.) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.