ಕಾರಹುಣ್ಣಿಮೆ ಅಂಗವಾಗಿ ಹುಲಿಗೆಮ್ಮ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
Religious programs at Huligemma Sannidhana on the occasion of Karahunnime
ಕಂಪ್ಲಿ 11: ಪಟ್ಟಣದ 22ನೇ ವಾರ್ಡಿನ ವಾಲ್ಮೀಕಿ ನಗರದಲ್ಲಿರುವ ಭಕ್ತರ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಕಾರಹುಣ್ಣಿಮೆ ಅಂಗವಾಗಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿದವು.
ಇಲ್ಲಿನ ದೇವಸ್ಥಾನದ ಸನ್ನಿಧಾನದಲ್ಲಿ ಪೂಜಾರಿಗಳಾದ ಎರೆ್ರಮ್ಮ, ರಾಮಾಂಜಿನೆಮ್ಮ ಇವರ ನೇತೃತ್ವದಲ್ಲಿ ಹುಲಿಗೆಮ್ಮ ದೇವಿಗೆ ಎಲೆಚೆಟ್ಟು ಏರಿಸಿರುವುದು, ಹೂವಿನ ಅಲಂಕಾರ, ಮಹಾಮಂಗಳಾರತಿ, ಜೋಗ್ ಪಂಥಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಸ್ರವಾಗಿ ನೆರವೇರಿದವು.
ಸಾಕಷ್ಟು ಭಕ್ತರು ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ, ಕಾಯಿ, ಕರ್ೂರ ಅರ್ಿಸಿ, ದರ್ಶನ ಪಡೆದರು. ನಂತರ ಅನ್ನಸಂತಾರೆ್ಣ ಜರುಗಿತು. ಮಂಗಳವಾರದಂದು ಕಂಪ್ಲಿ-ಕೋಟೆಯಿಂದ ವಾಲ್ಮೀಕಿ ನಗರದ ದೇವಸ್ಥಾನದವರೆಗೆ ದೇವಿಯ ಕುಂಭಾ ಮೆರವಣಿಗೆ ನಡೆಸಲಾಯಿತು.
ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ ಹಾಗೂ ಮಂಗಳವಾದ್ಯ ಪಾಲ್ಗೊಂಡಿದ್ದವು. ರಾತ್ರಿ ಭಜನೆ ಜರುಗಿತು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡ ಹೊನ್ನೂರಸ್ವಾಮಿ, ಗೋವಿಂದ, ಅಂಜಿನಿ, ಈ.ಹೊನ್ನೂರಸ್ವಾಮಿ, ಓಬಳೇಶ, ಶೀನಪ್ಪ, ರಾಮಾಂಜಿನಿ, ಪಿ.ವಿರೇಶ ಸೇರಿದಂತೆ ವಾಲ್ಮೀಕಿ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 