ಧಾರ್ಮಿಕ ಕಾರ್ಯಕ್ರಮ, ಜಾತ್ರೆಗಳು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗ: ಡಾ.ಕೈಲಾಸನಾಥಶ್ರೀ
Religious programs, fairs are an integral part of Sanatan culture: Dr. Kailasanathsri
ಧಾರ್ಮಿಕ ಕಾರ್ಯಕ್ರಮ, ಜಾತ್ರೆಗಳು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗ: ಡಾ.ಕೈಲಾಸನಾಥಶ್ರೀ
ಕೊಲ್ಹಾರ 18: ಧಾರ್ಮಿಕ ಕಾರ್ಯಕ್ರಮಗಳು, ಜಾತ್ರಾ ಮಹೋತ್ಸವಗಳು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ ಎಂದು ಶೀಲವಂತ ಮಠದ ಧರ್ಮರತ್ನ ಡಾ.ಕೈಲಾಸನಾಥ ಶ್ರೀಗಳು ಹೇಳಿದರು. ಪಟ್ಟಣದ ರಾಜಗುರು ಹಿರೇಪಟ್ಟದೇವರ ಶೀಲವಂತ ಹಿರೇಮಠದ ಜಾತ್ರಾ ಮಹೋತ್ಸವ ರಾಜಗುರು ಹಿರೇಪಟ್ಟದೇವರು, ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ಸಹಸ್ರ ಮುತೈದೆಯರ ಕುಂಭಮೇಳ, ಪುರವಂತರ ಸೇವೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಜಾಗತಿಕ ಚರಿತ್ರೆಯಲ್ಲಿ ಸನಾತನ ಸಂಸ್ಕೃತಿಯ ಹಿರಿಮೆ ಅಪಾರವಾಗಿದೆ. ಹಬ್ಬ, ಹರಿದಿನಗಳು, ಜಾತ್ರಾ ಮಹೋತ್ಸವಗಳು ನಮ್ಮ ಪರಂಪರೆಯ ಕುರುಹುಗಳಾಗಿವೆ ಜೊತೆಗೆ ಕೊಲ್ಹಾರ ಪಟ್ಟಣದ ಶೀಲವಂತ ಹಿರೇಮಠವು ಭಾವೈಕ್ಯತೆಯ ಪ್ರತೀಕವಾಗಿದ್ದು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಶ್ರದ್ಧಾ ಭಕ್ತಿಯ ತಾಣವಾಗಿರುವುದು ನಮಗೆಲ್ಲರಿಗೂ ಹರ್ಷವೆನಿಸುತ್ತದೆ ಎಂದರು.
ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ ಮಠ, ಮಾನ್ಯಗಳು ಮನುಷ್ಯನಲ್ಲಿ ಮಾನವಿಯ ಮೌಲ್ಯಗಳನ್ನು ಜೊತೆಗೆ ಧಾರ್ಮಿಕ ಭಾವನೆಗಳನ್ನು ಬಿತ್ತುತ್ತವೆ. ಜಾತ್ರಾ ಮಹೋತ್ಸವಗಳು ಸನಾತನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸುವುದರಿಂದ ಆಧ್ಯಾತ್ಮಿಕತೆಯ ಒಲವು ಹೆಚ್ಚುತ್ತದೆ ಜೊತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದರು.
ಜಾತ್ರಾ ವಿಶೇಷತೆಗಳು: ರಾಜಗುರು ಹಿರೇಪಟ್ಟದೇವರು ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಜರುಗಿತು. ಸಹಸ್ರ ಮುತೈದೆಯರು ಕುಂಭಮೇಳ, ಪುರವಂತರ ಸೇವೆ ನಡೆಯುವದು, 1008 ಶಿವಲಿಂಗಗಳ ದರ್ಶನ, ಸಹಸ್ರ ಮುತ್ತೈದೆಯರ ಉಡಿತುಂಬವ ಕಾರ್ಯಕ್ರಮ, ಜನಜಾಗೃತಿ ಧರ್ಮಸಭೆ, ಹಾಗೂ ಮಹಾರಥೋತ್ಸವ ಜರಗಿತು. ಮಹಾರಥೋತ್ಸವದ ವಿಶೇಷತೆಗಳು: ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಾರಥೋತ್ಸವದ ಅಲಂಕಾರದಲ್ಲಿ ಸರ್ವಧರ್ಮ ಸದ್ಭಾವನೆ ಸಾರುವ ಹಿಂದೂ, ಮುಸ್ಲಿಂ, ಕ್ರೈಸ್ತ ಸಹಿತ ವಿವಿಧ ಧರ್ಮಗಳ ಧಾರ್ಮಿಕ ಚಿನ್ಹೆಗಳನ್ನು ಅಳವಡಿಸಿ ತೇರು ಎಳೆದಿದ್ದು ವಿಶೇಷವಾಗಿತ್ತು. ಶಿವಪ್ರಕಾಶ ಶಿವಾಚಾರ್ಯರು ಹಿರೇಮಠ ಬಾಗೇವಾಡಿ, ಗವಿಸಿದ್ದೇಶ್ವರ ಶಿವಾಚಾರ್ಯರು ಹಿಪ್ಪರಗಿ, ಸಿದ್ಧ ರೇಣುಕ ಶಿವಾಚಾರ್ಯರು ಅರಬೇಲೆ ಹಿರೇಮಠ ಚಿಮ್ಮಲಗಿ, ಸಿದ್ಧಲಿಂಗ ಶಿವಾಚಾರ್ಯರು ಹಿರೇಮದ ಮುಳವಾಡ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ಟಿ.ಟಿ ಹಗೇದಾಳ, ಕಲ್ಲಪ್ಪ ಸೊನ್ನದ, ಸತ್ಯಜೀತ ಪಾಟೀಲ, ಸಿ.ಎಂ ಗಣಕುಮಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಬಾಬು ಬಜಂತ್ರಿ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 