ಧಾರ್ಮಿಕ ಆಚರಣೆ, ಸಾತ್ವಿಕ ಚಿಂತನೆಗಳಿಂದ ಬದುಕಿಗೆ ಸಾರ್ಥಕತೆ : ಮಲ್ಲೇಶ ಶರಣರು
Religious practices and virtuous thoughts bring fulfillment to life: Mallesha Sharanu
ಲೋಕದರ್ಶನ ವರದಿ,
ಜಮಖಂಡಿ 21: ಭಕ್ತಿ, ಧಾರ್ಮಿಕ ಆಚರಣೆ ಹಾಗೂ ಸಾತ್ವಿಕ ಚಿಂತನೆಗಳು ಮನುಷ್ಯನ ಬದುಕಿಗೆ ಸಾರ್ಥಕತೆ ನೀಡುತ್ತವೆ ಎಂದು ಹುಲ್ಯಾಳದ ಪ್ರವಚನಕಾರ ಮಲ್ಲೇಶ ಶರಣರು ಹೇಳಿದರು. ತಾಲೂಕಿನ ಮೈಗೂರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಗುಡ್ಡಾಪುರ ದಾನಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತಿ ಹಾಗೂ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು.
ಪ್ರವಚನ, ಭಜನೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಸಮಾಜದಲ್ಲಿ ಸದ್ಭಾವನೆ ಮತ್ತು ಸೌಹಾರ್ದತೆ ಮೂಡಿಸಲು ಸಹಕಾರಿಯಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂಸ್ಕಾರ ಬೆಳೆಸುತ್ತವೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದರು. ರಾಮನಗೌಡ ಪಾಟೀಲ, ಸದಾಶಿವ ಪಾಟೀಲ, ಮಹಾದೇವ ಕೋಳಿ, ಶ್ರೀಕಾಂತ ಹಲಕಿ, ಲಕ್ಕಪ್ಪ ಕೋಳಿ, ಶ್ರೀಮಂತ ಹಜೇರಿ, ವಿರುಪಾಕ್ಷ ಶೇಡಬಾಳ ಸೇರಿದಂತೆ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 