ಧಾರ್ಮಿಕ ಕಾರ್ಯಗಳಿಂದ ಧರ್ಮ ಜಾಗೃತಿ: ಶಿರಶ್ಯಾಡದ ಶ್ರೀಗಳು
Religious awareness through religious activities: Unshaven saints
ಇಂಡಿ 24 : ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಧರ್ಮ ಜಾಗೃತಿ ಮಾಡಿದಂತಾಗುತ್ತದೆ. ಧಾರ್ಮಿಕ ಮುಖಂಡರು, ಧಾರ್ಮಿಕ ಸ್ವಾಮೀಜಿಗಳ ಮಾತು ಆಲಿಸುವುದರಿಂದ ಮನಸ್ಸಿಗೆ ಸಮಾಧಾನದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಅವರು ಸೋಮವಾರ ರಾತ್ರಿ ತಾಲೂಕಿನ ಇಂಗಳಗಿ ಗ್ರಾಮದ ಮರುಳಸಿಧ್ಧೇಶ್ವರ (ಧರ್ಮರದೇವರ) ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.ಆದಿ ಕಾಲದಿಂದಲೂ ಇಂಗಳಗಿ ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತ ಬಂದಿದೆ.
ಈ ದೇವರು ಬೇಡಿದ ಭಕ್ತರಿಗೆ ಬೇಡಿದ್ದನ್ನು ಕರುಣಿಸುವ ಕರುಣಾಮಯಿಯಾಗಿದ್ದಾನೆ ಎಂದರು.ಇಂದಿನ ಯುವ ಜನಾಂಗ ದ್ವೀಚಕ್ರ ವಾಹನ, ಕಾರ್ಗಳನ್ನು ವೇಗವಾಗಿ ಚಲಾವಣೆ ಮಾಡಿ ಅಪಘಾತ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗಾಡಿಯ ಮೇಲೆ ಕುಳಿತು ನಿಮ್ಮ ತಂದೆ-ತಾಯಿಗಳನ್ನೊಮ್ಮೆ ನೆನಪು ಮಾಡಿಕೊಂಡು ವಾಹನ ಚಲಾಯಿಸಿ ಅವರು ಎಷ್ಟು ಕಷ್ಟಪಟ್ಟು ನಿಮ್ಮನ್ನು ಬೆಳೆಸಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬಂದಾಗ ನೀವು ಜಾಗೃತರಾಗುತ್ತೀರಿ ಎಂದರು.ಸಾರವಾಡ-ಚಿಕ್ಕಬೇವನೂರ ಮಠದ ಓಕಾರಯ್ಯ ಶ್ರೀಗಳು ಕಾರಣಿಕ ನುಡಿಗಳನ್ನಾಡಿ, ಈ ಬಾರಿ ಅಪಘಾತಗಳು ಹೆಚ್ಚಾಗಲಿವೆ, ಕಾಡ್ಗಿಚ್ಚು ಹೆಚ್ಚಲಿದೆ,
ಸಾಕಷ್ಟು ಜೀವಹಾನಿಯಾಗಲಿವೆ ಆದರೆ ರೈತರಿಗೆ ಈ ಬಾರಿ ಸಂತಸದ ದಿನಗಳಿಗೆ, ಅತ್ಯುತ್ತಮ ಮಳೆಯಾಗಿ ಉತ್ತಮ ಬೆಳೆ ಬರಲಿದೆ ಎಂದರು.ಧರ್ಮರ ದೇವರ ಧರ್ಮಾಧಿಕಾರಿ ಅಶೋಕ ಬಳಬಟ್ಟಿ ಅವರಿಂದ ತೆಂಗಿನಕಾಯಿ ಮುಖಾಂತರ ಕಾರಣಿಕ ನುಡಿಗಳು ನಡೆದವು.ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಗಳು ಸಮೃಧ್ಧವಾಗಲಿವೆ ಎಂದು ತೆಂಗಿನಕಾಯಿ ಮುಖಾಂತರ ತಿಳಿಸಲಾಯಿತು.ಮಲ್ಲೇಶಪ್ಪ ಬಳಬಟ್ಟಿ, ಬಸವರಾಜ ಜಾಧವ, ಭೀಮ ವಾಲೀಕಾರ, ಶ್ರೀಶೈಲ ಸೀತಿಮನಿ, ಭೀಮರಾಯ ಸೀತಿಮನಿ, ಮಹಾದೇವ ಬಳಬಟ್ಟಿ, ಅರ್ಜುನ ಸೀತಿಮನಿ, ಜಗದೇವ ಬಳಬಟ್ಟಿ, ಕಾಶಿನಾಥ ಗಳೆದ, ಉಮೇಶ ಬೆನಕನಳ್ಳಿ, ಸದಾಶಿವ ಬಳಬಟ್ಟಿ, ಅಶೋಕ ಥೋರಾತ, ಶಿವಪ್ಪ ಸೀತಿಮನಿ, ಸುಭಾಸ ಥೋರಾತ, ಪ್ರಭು ಹೊಸಮನಿ, ಆನಂದ ಪವಾರ, ಅಣ್ಣಪ್ಪ ಅಹಿರಸಂಗ, ಉಮೇಶ ಚವ್ಹಾಣ, ಈರಣ್ಣ ಸೀತಿಮನಿ, ತಾನಾಜಿ ಸೋಲಂಕಾರ, ಸೈಪನ್ ಮುಲ್ಲಾ, ಮುತ್ತಪ್ಪ ಪೂಜಾರಿ, ಚಿಮ್ಮಾಜಿ ಥೋರಾತ, ಮಹಾದೇವ ಥೋರಾತ, ಸಚಿನ್ ಕುಂಬಾರ, ರಾಜಕುಮಾರ ಚಾಬುಕಸವಾರ ಸೇರಿದಂತೆ ಇನ್ನಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 