ಗೌಡಗೆರೆಯಲ್ಲಿ ದೇವಗಿರಿ ಯಾದವ ರಾಜರ ಗಜಪಡೆಯ ಉಬ್ಬು ಶಿಲ್ಪ ಪತ್ತೆ
Relief sculpture of the Gajapada of the Devagiri Yadava kings discovered in Gowdagere
ವಿಜಯಪುರ 25 : ವಿಜಯಪುರದ ಗೌಡಗೆರೆ ಹಳ್ಳಿಯಲ್ಲಿ ಎದುರು -ಬದುರು ನಿಂತು ಕಾಳಗ ಮಾಡುವ ಮದಗಜಗಳ ಅಪರೂಪದ ಉಬ್ಬು ಶಿಲ್ಪ ಪತ್ತೆಯಾಗಿದ್ದು,ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಉಬ್ಬು ಶಿಲ್ಪವನ್ನು ಸಂಶೋಧಿಸಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಶಿಲ್ಪ ಪತ್ತೆಯಾಗಿದ್ದು, ಇದನ್ನು ಇತಿಹಾಸ ಸಂಶೋಧಕ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಗುರುತಿಸಿದ್ದಾರೆ.
ದೇವಗಿರಿ ಯಾದವರು ಎಂದು ಹೆಸರುವಾಸಿಯಾದ ಸೇವುಣರ ರಾಜ್ಯಧಾನಿ ಗೌಡಗೆರೆ ಹಳ್ಳಿಗೆ ಸೇರಿದ ಕೋಟೆಯಲ್ಲಿ ಕೆತ್ತಲಾದ ಮದಗಜಗಳ ಉಬ್ಬು ಶಿಲ್ಪವು ರಾಜಧಾನಿ ರಕ್ಷಣೆಗೆ ಶಕ್ತಿಶಾಲಿ ಗಜಪಡೆ, ಮತ್ತು ರಕ್ಷಣಾ ವ್ಯವಸ್ಥೆ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಎಂದು ಇತಿಹಾಸಕಾರ ಲಾಯಪ್ಪ ಇಂಗಳೆ ಅವರು ತಿಳಿಸಿದ್ದಾರೆ.ಕ್ಷೇತ್ರಕಾರ್ಯದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಪ್ರಮುಖರಾದ ಬಸವರಾಜ ಕುಬಕಡ್ಡಿ, ಉಮೇಶ ಶಿವಶರಣ ಭೀಮರಾಯ ಕುಂಟೋಜಿ ಪ್ರಶಾಂತಗೌಡ ಪಾಟೀಲ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 