ಶಾಲಾ ಶಿಕ್ಷಕರ ಆದಾಯ ತೆರಿಗೆ ಫಾರ್ಮುಗಳ ಬಿಡುಗಡೆ

ಶಾಲಾ ಶಿಕ್ಷಕರ ಆದಾಯ ತೆರಿಗೆ ಫಾರ್ಮುಗಳ ಬಿಡುಗಡೆ Release of income tax forms for school teachers

ದೇವರಹಿಪ್ಪರಗಿ 22 : ನಿರಂತರತೆ,ಸೃಜನಾತ್ಮಕ ಚಿಂತನೆ, ಸೇವಾತತ್ಪರತೆ ಹಾಗೂ ಕ್ರಿಯಾಶೀಲ ವಿಚಾರಧಾರೆಗಳನ್ನು ಒಳಗೊಂಡಿರುವ ಯಾವುದೇ ಸಂಘಟನೆಯು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್‌.ಟಕ್ಕೆ ಹೇಳಿದರು. ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಾಲೂಕಿನ ಶಿಕ್ಷಕರಿಗೆ ಉಚಿತವಾಗಿ ಒದಗಿಸಲಾಗುವ  ಆದಾಯ ತೆರಿಗೆ ಫಾರ್ಮುಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್‌.ವಾಲೀಕಾರ ಅವರು ಮಾತನಾಡುತ್ತಾ ನಮ್ಮ ಸಂಘವು ನಿರಂತರವಾಗಿ ಶಿಕ್ಷಕರ ಪರವಾದ ಕಾರ್ಯಚಟುವಟಿಕೆಗಳನ್ನು  ನಿರಂತರವಾಗಿ ಮಾಡಿಕೊಂಡು ಬಂದಿದ್ದು ಪ್ರತಿವರ್ಷ ಪ್ರತಿಯೊಬ್ಬ ಶಿಕ್ಷಕಕರಿಗೆ ಉಚಿತ ತೆರಿಗೆ ಫಾರ್ಮುಗಳ ವಿತರಣೆ,ಎರಡು ಬಾರಿ ಗುರುಸ್ಪಂದನಾ ಕಾರ್ಯಕ್ರಮದ ಆಯೋಜನೆ, ಸಭಾಭವನ ನಿರ್ಮಾಣಕ್ಕೆ ಶಾಸಕರಿಂದ 20 ಲಕ್ಷ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಕ್ಕೆ ನಿರಂತರ ಒತ್ತಾಯ,ಸಕಾಲಕ್ಕೆ ವೇತನ,ವೈದ್ಯಕೀಯ ಬಿಲ್ಲುಗಳು,ಹಬ್ಬದ ಮುಂಗಡ ಹಣ,ಗಣತಿದಾರರಿಗೆ ಗೌರವ ಸಂಭಾವನೆ ಒದಗಿಸುವಿಕೆ ಹಾಗೂ ಗಳಿಕೆ ರಜೆಗೆ ಮನವಿ,ಎನ್‌.ಪಿ.ಎಸ್‌.ರದ್ದತಿ,ಸಿ ಮತ್ತು ಆರ್ ತಿದ್ದುಪಡಿ,ಆರೋಗ್ಯ ಸಂಜೀವಿನಿ ಸರಿಪಡಿಸುವಿಕೆ ಹಾಗೂ ಟಿ.ಇ.ಟಿ ರದ್ದತಿ ಸೇರಿದಂತೆ ವಿವಿಧ ಅಂಶಗಳ ನಮ್ಮ ಶಿಕ್ಷಕರ ಸಂಘ ನಿರಂತರವಾಗಿ ಶ್ರಮ ವಹಿಸುತ್ತಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯಗುರುಗಳಿಗೆ ಆದಾಯ ತೆರಿಗೆ ಫಾರ್ಮುಗಳನ್ನು ಶಾಲಾವಾರು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ಎಸ್‌.ಬೇವನೂರ,ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಸಿ.ತಳಕೇರಿ, ಎಸ್‌.ಡಿ.ಮುಳಸಾವಳಗಿ,ಎಸ್‌.ವಿ.ಕೊಟೀನ,ಆರ್‌.ಎಸ್‌.ಇಂಡಿ,ದಾನು ರಾಠೋಡ, ಎಂ.ಜಿ.ಯಂಕಂಚಿ, ಜೆ.ಎಸ್‌.ನಾಯಕ,ರಮೇಶ ಜನಗೊಂಡ, ಆರ್‌.ಎಮ್‌.ಕುಲಕರ್ಣಿ,ಬಿ.ವಿ.ಚಂಡಕಿ,ನಾಗಯ್ಯ ಹಿರೇಮಠ,ಜಾಕೀರ ಬಗಲಿ,ಬಸವರಾಜ ನಾಗರಾಳ,ಅಣ್ಣು ಭಜಂತ್ರಿ,ಆಶಾ ರಾಠೋಡ, ಎಸ್‌.ಎಮ್‌.ರಾಠೋಡ ಸೇರಿದಂತೆ ಸಿ.ಆರಿ​‍್ಪ.ಗಳು,ಮುಖ್ಯಗುರುಗಳು,ಶಿಕ್ಷಕರು ಉಪಸ್ಥಿತರಿದ್ದರು.ಫೋಟೋ 22ಡಿಎಚಪಿ1