ಕ್ಷೇತ್ರದ ಜನರೊಂದಿಗೆ ಇರುವ ಸಂಬಂಧಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ : ಬೊಮ್ಮಾಯಿ

ಕ್ಷೇತ್ರದ ಜನರೊಂದಿಗೆ ಇರುವ ಸಂಬಂಧಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ : ಬೊಮ್ಮಾಯಿ Relationships with the people of the constituency cannot be valued: Bommai

           ಶಿಗ್ಗಾವಿ 28 : ರಾಜಕಾರಣದಲ್ಲಿ ಚುನಾವಣೆಗಳು ಬರುತ್ತವೆ ಹೋಗುತ್ತವೆ, ಜನರ ಪ್ರೀತಿ ವಿಶ್ವಾಸ ಗಳಿಸುವತ್ತ ನಮ್ಮ ಚಿತ್ತವಿರಬೇಕು ಅಂದಾಗ ಮಾತ್ರ ನಾವು ಜನರೊಂದಿಗೆ ನಿರಂತರವಾಗಿರಲು ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿರವರ ಮನೆಯ ಸಭಾಭವನದಲ್ಲಿ ನಡೆದ ಮಾಜಿ ಸಿಎಂ ಸಂಸದ ಬಸವರಾಜ ಬೊಮ್ಮಾಯಿ ಅವರ 66 ನೇಯ ಜನ್ಮದಿನೋತ್ಸವದ ಅಂಗವಾಗಿ ಪೌರ ಕಾರ್ಮಿಕರಿಗೆ ಏರಿ​‍್ಡಸಲಾದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದ ಜನರೊಂದಿಗೆ ಇರುವ ಸಂಬಂಧಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಈ ಕ್ಷೇತ್ರದ ಜನರ ಋಣ ತೀರಿಸಲು ಜೀವನದ ಕೊನೆಯ ಉಸಿರಿರುವರೆಗೂ ಪ್ರಾಮಾಣಿಕವಾಗಿ ಕೆಲಸ ಮಾಡುವೆರಾಜಕೀಯದಲ್ಲಿ ಅಧಿಕಾರ ಎಂದಿಗೂ ಶಾಶ್ವತವಲ್ಲ ಮತ್ತು ಮಾನವೀಯತೆಯಿಂದ ಮಾಡುವ ಒಳ್ಳೆಯ ಕೆಲಸಗಳಿಗೆ ಯಾವುದೇ ರೀತಿಯ ಜಾತಿ, ಧರ್ಮ, ಅಡೆ ತಡೆಗಳು ಅನ್ವಯವಾಗುವುದಿಲ್ಲ.

          ನಮ್ಮ ತಂದೆ ತಾಯಿ ನನಗೆ ಹೇಳಿಕೊಟ್ಟ ನೀತಿ ಪಾಠ ಮತ್ತು ಈ ಕ್ಷೇತ್ರದ ಜನತೆಯು ಕೊಟ್ಟ ರಾಜಕೀಯ ಶಕ್ತಿಯಿಂದ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಜನರು ಅಧಿಕಾರ ಕೊಟ್ಟಾಗ ಆ ಅಧಿಕಾರ ಅವಧಿಯಲ್ಲಿ ಮಾಡಿದಂತಹ ಕೆಲಸಗಳು ಜನಮಾನಸದಲ್ಲಿ ಉಳಿಯುತ್ತವೆ.ನನ್ನ ಆಡಳಿತ ಅವಧಿಯಲ್ಲಿ ಸಾಮಾಜಿಕವಾಗಿ ಹಲವಾರು ನಿರ್ಣಯ ತೆಗೆದುಕೊಂಡಿದ್ದೇನೆ. ಸುಮಾರು 45 ಸಾವಿರ ಪೌರ ಕಾರ್ಮಿಕರನ್ನು ಕಾಯಂ ನೇಮಕ ಮಾಡಿ, ನನ್ನ ಕಾಲದಲ್ಲಿಯೇ ಸುಮಾರು 3 ಸಾವಿರ ಪೌರ ಕಾರ್ಮಿಕರಿಗೆ ಆದೇಶ ಮಾಡಿ ಎಲ್ಲ ರೀತಿಯ ಸೌಕರ್ಯ ಕೊಡುವ ವ್ಯವಸ್ಥೆ ಮಾಡಿದ್ದು, ರೈತ ವಿದ್ಯಾನಿಧಿ ಸೇರಿದಂತೆ ಹಲವಾರು ಜನಪರ ಯೋಜನೆಗಳು ನನಗೆ ಬಹಳ ಸಮಾಧಾನ ಕೊಡುವ ಕೆಲಸ ಎಂದು ಹೇಳಿದರು.ಈ ಸಂದರ್ಭದಲ್ಲಿ ಭರತ ಬೊಮ್ಮಾಯಿ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.