ದೇವಾಂಗ ಕ್ರಿಶ್ಚಿನ ಧರ್ಮಕ್ಕೆ ಸಂಬಂಧ: ಸ್ಪಷ್ಟೀಕರಿಸಲು ಬಸವರಾಜ ಆಗ್ರಹ
Relationship to Devanga Christianity: Basavaraja demands clarification
ದೇವಾಂಗ ಕ್ರಿಶ್ಚಿನ ಧರ್ಮಕ್ಕೆ ಸಂಬಂಧ: ಸ್ಪಷ್ಟೀಕರಿಸಲು ಬಸವರಾಜ ಆಗ್ರಹ
ರಾಣೇಬೆನ್ನೂರು 12 : ಕರ್ನಾಟಕ ರಾಜ್ಯದಲ್ಲಿ ಸನಾತನ ಧರ್ಮದಲ್ಲಿರುವ ದೇವಾಂಗ ಜಾತಿಯು ಕ್ರಿಶ್ಚಿಯ ಧರ್ಮಕ್ಕೆ ಸಂಬಂಧಪಟ್ಟಿಲ್ಲ ಮಾಧ್ಯಮದಲ್ಲಿ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ ಕೂಡಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರಕಟಣೆ ನೀಡಿ ಸ್ಪಷ್ಟೀಕರಿಸಬೇಕು ಎಂದು ತಾಲೂಕಾ ದೇವಾಂಗ ಸೇವಾ ಸಂಘದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅವರು ಆಗ್ರಹಿಸಿದ್ದಾರೆ. ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಮುದಾಯದ ಸಹಯೋಗದೊಂದಿಗೆ ಮೌನ ಪ್ರತಿಭಟಿಸಿದ ಅವರು, ದೇವಾಂಗ ಕ್ರಿಶ್ಚಿಯನ್ ಎಂಬ ಜಾತಿಯ ಹೆಸರನ್ನು ಜಾತಿವಾರು ಪಟ್ಟಿಯಿಂದ ತೆಗೆದು ಹಾಕಬೇಕು ಆಗ್ರಹಿಸಿದರು. ದೇವಾಂಗ ಸಮುದಾಯವು ಸನಾತನ ಹಿಂದು ಧರ್ಮದಲ್ಲಿದಲ್ಲಿರುವ ಜಾತಿ ಇದ್ದು ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಪಟ್ಟಿರುವುದಿಲ್ಲ. ಎಂದು ಸಲ್ಲಿಸಿರುವ ಮನವಿಯಲ್ಲಿ ಸಮುದಾಯದ ಇತಿಹಾಸ ಕುರಿತು ವಿವರಣೆ ನೀಡಿದ್ದಾರೆ. ಕೆಲವು ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡಂತೆ ಅಂತಹ ಜಾತಿಯು ಎಲ್ಲಿಯೂ ಕಂಡುಬಂದಿರುವುದಿಲ್ಲ ಆದ್ದರಿಂದ ದೇವಾಂಗ ಕ್ರಿಶ್ಚಿಯನ್ ಇದನ್ನು ಯಾವುದೇ ಜಾತಿಯಂದು ಪುರಸ್ಕರಿಸಲು ಕಡ್ಡಾಯವಾಗಿ ಬರುವುದಿಲ್ಲ ಕಾರಣ ಅನುಕ್ರಮ ಸಂಖ್ಯೆ301 ರಲ್ಲಿ ಬರುವ ಈ ಹೆಸರನ್ನು ಜಾತಿ ಪಟ್ಟಿಯಿಂದ ತೆಗೆದು ಹಾಕಬೇಕು ಒತ್ತಾಯಿಸಿರುವ ಬಸವರಾಜ ಲಕ್ಷ್ಮೇಶ್ವರ್ ಅವರು ಒಂದು ವೇಳೆ ಆಯೋಗ ಆಯೋಗವು ನಮ್ಮ ಮನವಿಯನ್ನು ನಿರಾಕರಿಸಿ, ತಿರಸ್ಕರಿಸಿದಲ್ಲಿ ರಾಜ್ಯದಾದ್ಯಂತ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸಂಕಪ್ಪ ಮಾರನಾಳ ನಾಗರಾಜ ಲಕ್ಷ್ಮೇಶ್ವರಗುಡ್ಡದಯ್ಯ ನೀಲಗುಂದ ಸುರೇಶ ಮಾರನಾಳ ಮನೋಹರ ಲಕ್ಷ್ಮೇಶ್ವರಚಂದ್ರ್ಪ ಉದಗಟ್ಟಿ ಕರಬಸಪ್ಪ ನೀಲಗುಂದ ಗೀರೀಶ್ ಗುಳೇದಗುಡ್ಡ ಭೋಜರಾಜ ಗುಲಗಂಜಿ ಮಂಜುನಾಥ್ ಅಸುಂಡಿ ಗಣೇಶ್ ಹಳ್ಳಿಯವರ ಪ್ರಶಾಂತ್ ಶಿರಗೂರು ಶಂಕ್ರ್ಪ ಕೊಪ್ಪದ್ ಎಂ. ಬಿ. ಹರಿಹರ ಸೇರಿದಂತೆ ಮತ್ತಿತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 