ಯೂರಿಯಾ ಗೊಬ್ಬರ ಅಭಾವ ಕುರಿತು ಮತ್ತು ಗೊಬ್ಬರ ಬೆಲೆ ಏರಿಕೆ ಕುರಿತು ಮತ್ತು ಎಫ್.ಐ.ಡಿ. ರದ್ದು ಮಾಡಬೇಕಾಗಿ ಮನವಿ
Regarding the shortage of urea fertilizer and the increase in fertilizer prices and requesting the c
ಲೋಕದರ್ಶನ ವರದಿ
ಹೊಸಪೇಟೆ, ವಿಜಯನಗರ 21: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ ವತಿಯಿಂದ ಮಾನ್ಯ ಸಚಿವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈಗಾಗಲೇ ಗೊಬ್ಬರ ಡಿ.ಎ.ಪಿ 20.20.0.13 ಮತ್ತು 10.26 ಪಟಾಸ್ ಅಮೋನಿಯಂ ಸಲ್ಫೇಟ್ ಮತ್ತು ಪಾಸ್‌ಪೇಟ್ ಇನ್ನಿತರೆ ಗೊಬ್ಬರಗಳ ಗಗನಕ್ಕೆ ಏರಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿಸಿದೆ. ಗೊಬ್ಬರದ ಬೆಲೆ ಏರಿಕೆ ಆದಮೇಲೆ ರೈತರ ಬೆಳೆದಂತ ಬೆಳೆಗಳು ಸಹ ಏರಿಕೆ ಆಗಬೇಕಾಗಿತ್ತು. ಇವತ್ತು ರೈತರು ಬಹಳಷ್ಟು ಸಂಕಷ್ಟದಲ್ಲಿದ್ದು ಸರಿಯಾದ ಬೆಲೆಯನ್ನು ಸಿಗದೇ ಮತ್ತು ದಳ್ಳಾಳಿಗಳ ಹಾವಳಿಯಿಂದ ರೈತರು ಕಂಗಲಾಗಿರುತ್ತಾರೆ.
ಆದಕಾರಣ ರೈತರಲ್ಲಿ ಗೊಬ್ಬರದ ಬೆಲೆಯನ್ನು ಕಡಿಮೆ ಮಾಡಬೇಕು ಮತ್ತು ರೈತರಿಗೆ ಸಮರ್ಕವಾಗಿ ಯೂರಿಯಾ ಗೊಬ್ಬರವನ್ನು ಮತ್ತೆ ಈಗಾಗಲೇ ಫಾರ್ಮರ್ ಐಡಿ (ಫಾರ್ಮರ್ ಐಡೆಂಟಿಫಿಕೇಷನ್) ಯನ್ನು ರದ್ದು ಪಡಿಸಬೇಕು. ಇದರಿಂದ ಸರ್ಕಾರಿ ಭೂಮಿ, ಹಳ್ಳ ಪರಂಪೋಕು, ಮತ್ತು ಅರಣ್ಯ ಭೂಮಿಗಳು ಮಾಡುವಂತಹ ರೈತರು ಸುಮಾರು 60-70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಎಫ್.ಐ.ಡಿ.ಯಿಂದ ಯುರಿಯಾ ಗೊಬ್ಬರ ಸಿಗುವುದಿಲ್ಲ. ಏಕೆಂದರೆ ಅವರ ಹೆಸರಿನಲ್ಲಿ ಪಹಣಿ ಪಟ್ಟಾ ಜಾಗದಲ್ಲಿ ಸರ್ಕಾರಿ ಎಂದು ನಮೂದಾಗಿರುತ್ತಾದೆ. ಇಂತಹ ರೈತರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದ್ದು ಇವತ್ತು ಭೂಮಿಯನ್ನು ಉಳಿಮೆ ಮಾಡಿ ಖರ್ಚು ಮಾಡಿದ ಹಣವನ್ನು ಸಹ ವಾಪಸ್ ಬರದಂತೆ ರೈತರ ಅದೋಗತಿಗೆ ಬಂದು ನಿಂತಿದೆ.
ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ 2010ರಲ್ಲಿ ಡಿಎಪಿ ದರ 450 ಇತ್ತು ಆದರೆ 2025-26ನೇ ಸಾಲಿನಲ್ಲಿ ಡಿಎಪಿ ದರ ಮೂರು ಪಟ್ಟು ಧರವು ಹೆಚ್ಚಾಗಿರುತ್ತದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿ ಬರುವಂತಹ ನೀರಾವರಿ ಪ್ರದೇಶವಾಗಿದ್ದು ಇಲ್ಲಿ ಬಹಳಷ್ಟು ರೈತರು ಕಬ್ಬು, ಬಾಳೆ, ಭತ್ತ್ತ, ಅತೀ ಹೆಚ್ಚಾಗಿ ಬೆಳೆಯುತ್ತಿದ್ದು ಫಾರ್ಮರ್ ಐಡಿ ಪ್ರಕಾರ ಒಂದು ಎಕರೆಗೆ ಒಂದು ಚೀಲ ಯೂರಿಯ ಗೊಬ್ಬರವು ಸಾಕಾಗುವುದಿಲ್ಲ ಆದಕಾರಣ ರೈತರಿಗೆ ಯೂರಿಯ ಗೊಬ್ಬರವನ್ನು ಸಮರ್ಕವಾಗಿ ನೀಡಬೇಕು. ಹಿಂದೆ ಬಿಜೆಪಿ ಸರ್ಕಾರ ಪಿಎಂ ಕಿಸಾನ್ ಅಡಿಯಲ್ಲಿ ಬರುವಂತಹ ಕೇಂದ್ರ ಸರ್ಕಾರವು 6000 ರಾಜ್ಯ ಸರ್ಕಾರವು 4,000 ಗಳನ್ನು ನೀಡುತ್ತಿದ್ದು ವರ್ಷಕ್ಕೆ 10,000 ನೀಡುತ್ತಿರುತ್ತಾರೆ.
2023-2024ನೇ ಸಾಲಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯ ಸರ್ಕಾರದಿಂದ ಬರುವಂತಹ ವರ್ಷಕ್ಕೆ 4000 ರೂಪಾಯಿಗಳನ್ನು ನಿಲ್ಲಿಸಿರುತ್ತಾರೆ ದಯಮಾಡಿ ರೈತರ ಹಿತ ದೃಷ್ಟಿಯಿಂದ 4000 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರ ವತಿಯಿಂದ ರೈತರಿಗೆ ನೀಡಬೇಕು ಮತ್ತು ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ತಾಲೂಕಿನಲ್ಲಿ ಮಣ್ಣು ಪರೀಕ್ಷೆ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಮತ್ತು ಭತ್ತ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು.
ಹೊಸಪೇಟೆ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿಗಳು ಕೊರತೆಯಿತ್ತು ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತದೆ. ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕಿನಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಬರಬೇಕಾದಂತಹ ಸೆಣಬು ಹಸಿರಲೆ ಗೊಬ್ಬರ ಬಂದಿರುವುದಿಲ್ಲ ಹಲವಾರು ಬಾರಿ ಜಂಟಿ ಕೃಷಿ ನಿರ್ದೇಶಕರ ಗಮನಕ್ಕೆ ತಂದರು ಸಹ ಸರ್ಕಾರದಿಂದ ಸಬ್ಸಿಡಿಯನ್ನು ನೀಡುತ್ತಿಲ್ಲ ಎಂದು ಹೇಳಿದರು ಆದರೆ ಆ ಹಸಿರೆಲೆ ಗೊಬ್ಬರದಿಂದ ಭೂಮಿಯು ಫಲವತ್ಯಕ್ಕೆ ಹೆಚ್ಚಾಗುತ್ತದೆ ಪ್ರತಿ ವರ್ಷದಂತೆ ಈ ವರ್ಷ ತರಿಸಬೇಕಾದಂತಹ ಸೆಣಬು (ಹಸಿರೆಲೆ ಬೀಜ) ನೀಡುವುದಿಲ್ಲ ಇದರಿಂದ ಗೊಬ್ಬರದ ಅಭಾವವನ್ನು ಹೆಚ್ಚಿಸುತ್ತದೆ.
ಮತ್ತು ಭತ್ತದ ಬೀಜವನ್ನು ಏಪ್ರಿಲ್ ತಿಂಗಳ ಒಳಗೆನೇ ಪೂರೈಸಬೇಕು ಇಲ್ಲವಾದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತಿದ್ದೇವೆ. ಈ ಮೇಲ್ಕಾಣಿಸಿದ ಎಲ್ಲಾ ಬೇಡಿಕೆಗಳನ್ನು ಕೂಡಲೇ ಸರ್ಕಾರ ಬಗೆಹರಿಸಬೇಕೆಂದು ಸಣ್ಣಕ್ಕಿ ರುದ್ರ್ಪ ತಾಲೂಕು ಅಧ್ಯಕ್ಷರು ಎಲ್ಲಾ ರೈತರ ಪರವಾಗಿ ನಿಂತು ಮನವಿ ಪತ್ರವನ್ನು ಓದಿ ವಿಷಯದ ಕುರಿತು ಸ್ಪಷ್ಠನೆ ನೀಡಿದರು ನಂತರ ಟಿ.ನಾಗರಾಜ ಇವರು ಸಹ ಇದೇ ವಿಚಾರವಾಗಿ ಆದಷ್ಟು ತುರ್ತು ಗತಿಯಲ್ಲಿ ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಎಲ್ಲಾ ಮಾಧ್ಯಮ ಮಿತ್ರರ ಮುಖಾಂತರ ಈ ವರದಿಯು ಕೃಷಿ ಸಚಿವರಿಗೆ ತಲುಪುವಂತೆ ಮಾಡಬೇಕೆಂದು ಆಗ್ರಹಿಸಿ ಮನವಿ ಪತ್ರವನ್ನು ವಿಜಯನಗರ ಜಿಲ್ಲೆಯ ಎಲ್ಲಾ ರೈತರ ಪರವಾಗಿ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ವಿಜಯನಗರ ಜಿಲ್ಲೆ ಇವರ ಪರವಾಗಿ ಡಾಽಽ ನಯೀಮ್‌ಬಾಷ ಮತ್ತು (ಎ.ಡಿ.ಎ.) ಮನೋಹರ್ ಗೌಡ ಇವರ ಸಮಕ್ಷಮದಲ್ಲಿ ಮನವಿ ಪತ್ರ ನೀಡಲಾಯಿತು ಮತ್ತು ಸದ್ರಿ ಮನವಿ ಪತ್ರವನ್ನು (ಕೋಡಿಹಳ್ಳಿ ಚಂದ್ರಶೇಖರ ಬಣ) ಸಣ್ಣಕ್ಕಿರುದ್ರ್ಪ, ಟಿ.ನಾಗರಾಜ್, ದೊಡ್ಡಗಾಳೇಪ್ಪ, ಸುರೇಶ್, ಭುವನಹಳ್ಳಿ ಬಸವರಾಜ್, ಜಾಕೀರ್ ಹುಸೇನ್, ಗಂಟೆ ಮಂಜುನಾಥ, ಮಂಜುನಾಥಸಿಂಗ್, ಜಾನಕಿರಾಮ್, ರಾಮಾಂಜಿನಿ, ಸತೀಶ, ಹಾಗೂ ಇನ್ನಿತರೆ ರೈತ ಮುಖಂಡರು ಭಾಗಿಯಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 