25-26 ನೇ ಸಾಲಿನ ಬಜೆಟ್ ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಣ ಮೀಸಲಿಡುವ ವಿಚರ ಕುರಿತು

Regarding the provision of funds for the development of gender minorities in the 25th-26th budget

25-26 ನೇ ಸಾಲಿನ ಬಜೆಟ್ ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಣ ಮೀಸಲಿಡುವ ವಿಚರ ಕುರಿತು

ಗದಗ 01 :ನಮ್ಮ ಸಮುದಾಯದಲ್ಲಿ ಸಾಕಷ್ಟು ಬಿನ್ನಾಭಿಪ್ರಾಯವಿದ್ದು, 46 ಸಾವಿರ ಲಿಂಗತ್ವ ಅಲ್ಪಸಂಖ್ಯಾತರರು ರಾಜ್ಯದಲ್ಲಿದ್ದು,ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ 25-26 ನೇ ಸಾಲಿನ ಬಜೆಟ್ ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಣ ಮೀಸಲಿಡುವ ಬಗ್ಗೆ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಪರವಾಗಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ ರೂ. 200 ಕೋಟಿಯನ್ನು ಮೀಸಲಿಡುವುದಾಗಿ ತಿಳಿಸಿದೆ ಆದರೇ ಅದನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವ ಚಳುವಳಿಯ ರಾಜ್ಯ ಸಹ ಸಂಚಾಲಕರಾದ ವೈಶಾಲಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲಿಂಗತ್ವ ಅಲ್ಪಸಂಖ್ಯಾತರರ ನಿಗಮ ಮಂಡಳಿ ನಿರ್ಮಾಣವಾಗಬೇಕಿದೆ.ಲಿಂಗ ಪರಿವರ್ತನೆ ಗಂಡಾಗಿ ಹುಟ್ಟಿ ಹೆಣ್ಣಾಗಿದ್ದು ಮತ್ತು ಹೆಣ್ಣಾಗಿ ಹುಟ್ಟಿ ಗಂಡಾಗಿದ್ದು ಇವರ ಆರೈಕೆಗೆ ಸರಕಾರ ಬೆಂಬಲ ಸಹಾಯ ಮಾಡಬೇಕು.ಯಾರೋ ಒಬ್ಬರಿಂದ ಕೆಟ್ಟದ್ದು ಆದಾಗ ನಮ್ಮ ಈಡಿ ಸಮುದಾಯವನ್ನ ದ್ವೇಷಿಸಬೇಡಿ ಎಂದರು. ಗದಗ ಜಿಲ್ಲೆಯಲ್ಲಿ ಒಟ್ಟು 1550 ಜನ ಲಿಂಗತ್ವ ಅಲ್ಪಸಂಖ್ಯಾತರಿದ್ದು,ಮಂಗಳಮುಖಿ ಎಂಬ ಪದದ ಬದಲಾಗಿ ಲಿಂಗತ್ವ ಅಲ್ಪಸಂಖ್ಯಾತರೆಂದು ಸರಕಾರ ಆದೇಶ ಹೊರಡಿಸಬೇಕೆಂದರು. ಹಕ್ಕೋತ್ತಾಯಗಳು: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ ನೀಡಬೇಕು, ನಮ್ಮ ಸಮುದಾಯದ ವಸತಿಗಾಗಿ ಪ್ರತ್ಯೇಕವಾದ ಯೋಜನೆ ರೂಪಿಸಬೇಕು, ಲಿಂಗತ್ವ ಅಲ್ಪಸಂಖ್ಯಾತರು ಉದ್ಯಮ ಶೀಲತೆಯಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಬೇಕು,ಇದಕ್ಕಾಗಿ ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ರೂ. 2,00,000 ಆರ್ಥಿಕ ನೆರವು ನೀಡಬೇಕು ಮೀಸಲಿಡಬೇಕು. ಉಚಿತ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ (ಖಜಥ ಡಿಜಛಿರಟಿಟಜಟಿಣ ಣಡಿರಜಡಿಥಿ) ಮತ್ತು ಶಸ್ತ್ರಚಿಕಿತ್ಸೆಯ ನಂತರ 6 ತಿಂಗಳ ಆರೈಕೆಯ ಬೆಂಬಲ ನೀಡಲು ಬಜೆಟ್ ಮೀಸಲಿಡಬೇಕು. 1ಅ ಮೀಸಲಾತಿಯಲ್ಲಿ ಉದ್ಯೋಗವನ್ನು ಪಡೆಯಲು ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ಮತ್ತು ಕೋಚಿಂಗ್ ನೀಡಲು ಬಜೆಟ್ ಮೀಸಲಿಡಬೇಕು.ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗಾಗಿ ವಾರ್ಷಿಕ ರೂ. 200 ಕೋಟಿಯನ್ನು ಮೀಸಲಿಡಬೇಕು, ಇದಕ್ಕಾಗಿ ಪ್ರತ್ಯೇಕ ನಿಯಮವನ್ನು ಸ್ಥಾಪಿಸಬೇಕೆಂದು ವೈಶಾಲಿ ತಿಳಿಸಿದ್ದಾರೆ.  ಪತ್ರಿಕಾ ಗೋಷ್ಠಿ ವೇಳೆ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹಾಯಕರಾದ ಭಗತ್ ಬಾಂಡಗೆ,ಪುಷ್ಪ ಬಿಜಾಪುರ್,ಆರಾಧನಾ ಬಣಕಾರ್ ಇದ್ದರು.