ವೃದ್ಧಾಶ್ರಮಗಳು ಕಡಿಮೆಯಾಗಲಿ: ಪ್ರೊ.ಉದಯಸಿಂಗ ರಜಪೂತ
Reduce the number of old age homes: Prof. Udayasingh Rajput
ಬೆಳಗಾವಿ 27: ಸಮಾಜದಲ್ಲಿ ವೃದ್ಧಾಶ್ರಮಗಳು ಕಡಿಮೆಯಾಗಬೇಕು. ಕುಟುಂಬ ಸದಸ್ಯರು ವೃದ್ಧ ತಂದೆತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸದೆ ಮನೆಯಲ್ಲಿಯೇ ಅವರ ಆರೈಕೆ ಮಾಡಬೇಕು. ಅವರ ಸೇವೆಯೇ ಭಗವಂತನ ಸೇವೆ ಎಂದರಿತಾಗ ಮಾತ್ರ ತಂದೆ ತಾಯಿಯ ಋಣ ತೀರಿಸಬಹುದಾಗಿದೆ. ಅವರಿಂದ ಪಡೆದ ನಮ್ಮ ಜನ್ಮ ಸಾರ್ಥಕವಾಗುವದು ಅಂತಾ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅದ್ಯಕ್ಷ ಪ್ರೊ.ಉದಯಸಿಂಗ ರಜಪೂತ ಹೇಳಿದರು.
ಬಸವನಕುಡಚಿಯಲ್ಲಿರುವ ನಾಗನೂರ ಶಿವಬಸವ ಟ್ರಸ್ಟಿನ ಚಿನ್ನಮ್ಮ ಹಿರೆಮಠ ವೃದ್ಧಾಶ್ರಮಕ್ಕೆ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ವತಿಯಿಂದ ಸುಮಾರು 50,000 ರೂಪಾಯಿ ಮೌಲ್ಯದ ದಿನನಿತ್ಯದ ಅವಶ್ಯಕ ವಸ್ತುಗಳನ್ನು ನೀಡಿದರು.
ರೊ.ಅಶೋಕ ಮಳಗಲಿ ಅವರು ಹಾಸ್ಯ ಕಾರ್ಯಕ್ರಮ ನೀಡಿ ರಂಜಿಸಿದರು. ನಂದನ ಬಾಗಿ, ರಾಜೀವ ದೇಶಪಾಂಡೆ, ರೂಪಾ ದೇಶಪಾಂಡೆ, ಅನಿಲ ಬಾಗಿ, ಅಶೋಕ ಬದಾಮಿ, ರಾಮ ಸಾಂಗಲೆ, ಸತೀಶ ಮಿಠಾರೆ, ಸತೀಶ ನಾಯಿಕ, ಡಾ.ವಿಜಯ ಪೂಜಾರ, ಪ್ರೊ.ಕೊಲ್ಹಾಪುರೆ, ಮಹಿಳಾ ಸಾಂತ್ವನ ಕೇಂದ್ರದ ಮಧು, ಆಶ್ರಮದ ಆಡಳಿತಾಧಿಕಾರಿ ಚೌಗಲಾ ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 