ರೆಡ್ಡಿಗಳು ವೀರಶೈವರಲ್ಲ: ಮುಖಂಡ ಪ್ರಭುಗೌಡ
Reddys are not Veerashaivas: Leader Prabhuguwa
ರೆಡ್ಡಿಗಳು ವೀರಶೈವರಲ್ಲ: ಮುಖಂಡ ಪ್ರಭುಗೌಡ
ತಾಳಿಕೋಟಿ 30: ರೆಡ್ಡಿ ಸಮಾಜದ ಜನರು ಲಿಂಗಾಯತರು ಅಲ್ಲ, ವೀರಶೈವರೂ ಅಲ್ಲ ನಾವು ಹಿಂದು ರೆಡ್ಡಿಗಳು ಆದ್ದರಿಂದ ಬರುವ ಜಾತಿಗಣತಿಯಲ್ಲಿ ಹಿಂದೂ ರೆಡ್ಡಿ ಅಂತಾ ಬರೆಯಿಸುವಂತೆ ಸಮಾಜದ ಮುಖಂಡ ಪ್ರಭುಗೌಡ ನಾಡಗೌಡ(ಶಳ್ಳಗಿ) ತಿಳಿಸಿದ್ದಾರೆ. ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಷ್ಟ್ರಕೂಟರ ಕಾಲದಿಂದಲೂ ಹಾಗೂ ಅದಕ್ಕಿಂತ ಹಿಂದಿನಿಂದ ನಮ್ಮ ರೆಡ್ಡಿ ಸಮುದಾಯದ ಇತಿಹಾಸವಿದೆ. ಆದರೆ ನಮ್ಮದೇ ಸಮಾಜದ ಕೆಲವರು ಯಾವುದೋ ಆಸೆ ಆಮಿಷಕ್ಕೆ ಒಳಗಾಗಿ ಕೆಲವರು ಲಿಂಗಾಯತರು ಎಂದು ಹೇಳಿಕೊಂಡರೆ ಇನ್ನೂ ಕೆಲವರು ವೀರಶೈವರೆಂದು ಹೇಳುತ್ತಾ ಹೊರಟಿದ್ದಾರೆ, ಹಿಂದು ರೆಡ್ಡಿ ಎಂದು ಜಾತಿಗಣತಿಯಲ್ಲಿ ನಮೂದಿಸಿದರೆ ಮಾತ್ರ ನಮಗೆ "ಥರ್ಡ್ ಎ" ಸೌಲಭ್ಯ ಮುಂದುವರಿಯುತ್ತದೆ. ಇದನ್ನು ಬಿಟ್ಟು ಬೇರೆಯದನ್ನು ಬರೆಯಿಸಿದರೆ ಥರ್ಡ್ ಬಿ ಸೌಲಭ್ಯಕ್ಕೆ ಹೋಗಬೇಕಾಗುತ್ತದೆ ಈ ರೀತಿ ಆಗುವುದು ಬೇಡ ಎಂದು ಸಮಾಜ ಬಾಂಧವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 