ರೆಡ್ಡಿ ವೀರಣ್ಣ ಪದವಿ ಪೂರ್ವ ಕಾಲೇಜು 100 ಫಲಿತಾಂಶ

ರೆಡ್ಡಿ ವೀರಣ್ಣ ಪದವಿ ಪೂರ್ವ ಕಾಲೇಜು 100 ಫಲಿತಾಂಶ   Reddy Veeranna Pre-Graduate College 100 Result

ಕಾರಟಗಿ ನವನಗರ್ 09 :  ಕಮ್ಮವಾರಿ ಶಿಕ್ಷಣ ಸಂಸ್ಥೆ (ರಿ.) ರೆಡ್ಡಿ ವೀರಣ್ಣ ಸಂಜೀವಪ್ಪ ಪದವಿ ಪೂರ್ವ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ - ಐತಿಹಾಸಿಕ ಸಾಧನೆ.ನಮ್ಮ ಹೆಮ್ಮೆಯ ಶಿಕ್ಷಣ ಸಂಸ್ಥೆಯು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು (100ಅ) ಫಲಿತಾಂಶವನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 62 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಡಿಸ್ಟಿಂಕ್ಷನ್ 47, ಪ್ರಥಮ ದರ್ಜೆ 15, ವಾಣಿಜ್ಯ  ವಿಭಾಗದಲ್ಲಿ ಒಟ್ಟು 41 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದು ಡಿಸ್ಟಿಂಕ್ಷನ್ 20 ಪ್ರಥಮ ದರ್ಜೆ 21  ಪಡೆದು ಅತ್ಯುತ್ತಮ ಅಂಕಗಳನ್ನು ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳ ವಿವರ:ಸಂಗೀತ ಗೈನ್ ವಿಜ್ಞಾನ 594/600ಸೈಯದ್ ಫಾತಿಮಾ ಜೋಹರ ವಿಜ್ಞಾನ 594/600ಶೀರೀಷ ವಿಜ್ಞಾನ 590/600ಎನ್‌. ಸ್ನೇಹ ವಿಜ್ಞಾನ 588/600ತೇಜಸ್ವಿನಿ ಪಿ. ವಾಣಿಜ್ಯ 593/600ಗಾಯತ್ರಿ ವಾಣಿಜ್ಯ 589/600.ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್ ಅವರು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮನ್ ನಾರಾಯಣ, ಕಾರ್ಯದರ್ಶಿಗಳಾದ  ಎಲ್‌. ವೀರಭದ್ರ ರಾವ್, ಪ್ರಾಚಾರ್ಯರಾದ ಡಾ. ಮಹಮ್ಮದ್ ರಫೀಕ್, ಋಖಇ ವಿಭಾಗದ ಪ್ರಾಂಶುಪಾಲರಾದ ಶ್ರೀದೇವಿ ಕೊಲ್ಲಾ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.