ಆಂಥಾಲಜಿ ಚಿತ್ರ 'ನೆನಪುಗಳ ಮಾತು ಮಧುರ'
Red & White Seven Raj starring and produced movie is releasing today
ಇಂದು ರೆಡ್ & ವೈಟ್ ಸೆವೆನ್ ರಾಜ್ ನಟನೆ, ನಿರ್ಮಾಣದ ಸಿನಿಮಾ ತೆರೆಗೆ
ಈ ಮೊದಲು 'ಚಡ್ಡಿ ದೋಸ್ಸ್ ಕಡ್ಡಿ ಅಲ್ಲಾಡುಸ್ಬುಟ್ಟ' ಸಿನಿಮಾ ನಿರ್ಮಾಣ ಮಾಡಿದ್ದ ರೆಡ್ ್ಘ ವೈಟ್ ಸೆವೆನ್ ರಾಜ್ ಇದೀಗ 'ನೆನಪುಗಳ ಮಾತು ಮಧುರ' ಚಿತ್ರ ನಿರ್ಮಿಸಿದ್ದಾರೆ. ಜೊತೆಗೆ ಮುಖ್ಯವಾದ ಪಾತ್ರವೊಂದಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ. ಇಂದು (ಫೆ. 6) ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ಗೆ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನೀರೀಕ್ಷೆ ಹೆಚ್ಚಾಗಿದೆ.
ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಕಮ್ ನಟ ರೆಡ್ ್ಘ ವೈಟ್ ಸೆವೆನ್ ರಾಜ್ 'ನನಗೂ ಚಿತ್ರರಂಗಕ್ಕೂ ಮೂವತ್ತೈದು ವರ್ಷಗಳ ನಂಟು. 'ರುದ್ರ ತಾಂಡವ', 'ಮತ್ಸರ', 'ಅನುಕೂಲಕೊಬ್ಬ ಗಂಡ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ. ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. 'ನೆನಪುಗಳ ಮಾತು ಮಧುರ' ನನ್ನ ನಿರ್ಮಾಣದ ಮೂರನೇ ಚಿತ್ರ. ಈ ಚಿತ್ರದಲ್ಲೂ ಅಭಿನಯಿಸಿದ್ದೇನೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ' ಎಂದು ಹೇಳಿದ್ದಾರೆ.
ಇದೊಂದು ಆಂಥಾಲಜಿ ಚಿತ್ರವಾವಾಗಿದ್ದು, ನಾಲ್ಕು ಕಥೆಗಳನ್ನು ಒಳಗೊಂಡಿದೆ. ಕಥೆಯ ಬಗ್ಗೆ ಹೇಳುವುದಾದರೆ, 'ನಾಲ್ಕು ಜನ ಗೆಳೆಯರು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿರುತ್ತಾರೆ. ಹಲವು ವರ್ಷಗಳ ನಂತರ ಅವರೆಲ್ಲಾ ರೆಸಾರ್ಟ್‌ನಲ್ಲಿ ಭೇಟಿಯಾಗುತ್ತಾರೆ. ಪಾರ್ಟಿಯನ್ನು ಆನಂದಿಸುತ್ತಿರುವಾಗ, ಅವರು ತಮ್ಮ ಜೀವನದಲ್ಲಿ ನಡೆದ ಕೆಲವು ಅಪರೂಪದ ಮತ್ತು ಮರೆಯಲಾಗದ ಘಟನೆಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಎಲ್ಲರೂ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರೂ, ಈ ನೆನಪುಗಳು ಸಿಹಿಯಾಗಿರುತ್ತವೆ ಏಕೆಂದರೆ ಅವು ವಿಭಿನ್ನ, ಪ್ರಣಯ, ಹಾಸ್ಯಮಯ ಮತ್ತು ರೋಮಾಂಚಕಾರಿ ಕಥೆಗಳ ಸರಣಿಯಾಗಿರುತ್ತವೆ'.
ರಾಜು ಎಮ್ಮಿಗಾನೂರು ಸಂಗೀತವಿರುವ ಈ ಚಿತ್ರಕ್ಕೆ ಮೈಸೂರು ಸ್ವಾಮಿ ಛಾಯಾಗ್ರಹಣ, ಕಾರ್ತಿಕ್ ಈಶ್ವರಾಚಾರಿ ಸಂಕಲನವಿದೆ. ಚಿತ್ರದ ತಾರಾಗಣದಲ್ಲಿ ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್, ವಿನಯ್ ಕುಮಾರ್, ರಣವಿತಾ ಚನ್ನಪ್ಪ, ರಾಣಿ ಎಂ ಅಂಗಡಿ, ವಾಧ್ಯ, ಶುಭಾ ತೀರ್ಥೇಗೌಡ ಮುಂತಾದವರು ಇದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 