ಕಂಪ್ಯೂಟರ್ ಆಪರೇಟರಗಳ ಕಾನೂನು ಬದ್ಧವಾಗಿಯೇ ನೇಮಕಾತಿ: ಪಿ.ಕೆ.ಪಿ.ಎಸ್ ಅಧ್ಯಕ್ಷ ರುದ್ರಗೌಡ ಪಾಟೀಲ
Recruitment of computer operators is done in accordance with the law: PKPS President Rudragowda Pati
ಅಥಣಿ 13 : ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಅವಶ್ಯವಾಗಿ ಬೇಕಾಗಿದ್ದ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಕಾನೂನು ಬದ್ಧವಾಗಿಯೇ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಇದನ್ನು ಸಹಿಸದ ಕೆಲವರು ವಿನಾಕಾರಣ ಅಪ ಪ್ರಚಾರ, ಆರೋಪ ಮಾಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ ಹೇಳಿದರು. ಅವರು ಸಹಕಾರಿ ಸಂಘದ ಆಡಳಿತ ಮಂಡಳಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನೇಮಕಾತಿ ಪೂರ್ವದಲ್ಲಿ ಆಡಳಿತ ಮಂಡಳಿಯಲ್ಲಿ ಠರಾವ್ ಪಾಸ್ ಮಾಡಿ ನಂತರ ದಿನ ಪತ್ರಿಕೆಯಲ್ಲಿ ಜಾಹಿರಾತು ಪ್ರಕಟಿಸಲಾಗಿತ್ತು ಜೊತೆಗೆ ಸಂಘದ ನೋಟಿಸ್ ಬೋರ್ಡ ಮೇಲೆ ಕೂಡ ಅಂಟಿಸಲಾಗಿತ್ತು ಎಂದ ಅವರು ಕೇವಲ ಒಬ್ಬ ಅಭ್ಯರ್ಥಿಯಿಂದ ಅರ್ಜಿ ಬಂದಿರುವುದರಿಂದ ಅನಿವಾರ್ಯವಾಗಿ ಅದೇ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ನೇಮಕಾತಿ ಮಾಡಿಕೊಳ್ಳಲು ಅವಶ್ಯವಾಗಿ ಬೇಕಾದ ಪಿ.ಯು.ಸಿ ಶಿಕ್ಷಣ ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜಮೆಂಟ್ ಶೈಕ್ಷಣಿಕ ಅರ್ಹತೆಯನ್ನೂ ಸಹ ಪರಿಗಣಿಸಲಾಗಿದೆ ಮತ್ತು ಸಹಕಾರ ಇಲಾಖೆಯ ನಿಯಮಗಳ ಅನುಸಾರ ಸ್ಥಳೀಯ ಅಭ್ಯರ್ಥಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಡಳಿತ ಮಂಡಳಿ ಸದಸ್ಯ ರಮೇಶ ಪಾಟೀಲ ಮಾತನಾಡಿ, ಕಾನೂನು ಬದ್ಧವಾಗಿ ಮಾಡಿಕೊಂಡಿರುವ ನೇಮಕಾತಿಯಾಗಿರುವುದನ್ನು ಸಹಿಸದ ಕೆಲವರು ವಿನಾಕಾರಣ ಗೊಂದಲ ಸೃಷ್ಠಿ ಮಾಡಿ ಸಹಕಾರ ಸಂಘದ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದ ಅವರು ಆಡಳಿತ ಮಂಡಳಿಯ ಎಲ್ಲ 12 ಜನ ಸದಸ್ಯರು ಸಹಿ ಮಾಡಿ ಠರಾವ್ ಪಾಸ್ ಮಾಡಿ ನಿರಂಜನ ಬಸಪ್ಪಾ ಮಸರಗುಪ್ಪಿ ಇವರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಆಡಳಿತ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ದಳವಾಯಿ ಮಾತನಾಡಿ, ನೇಮಕಾತಿಯಲ್ಲಿ ಅವ್ಯವಹಾರವಾಗಿರುವ ಬಗೆಗೆ ಸಂಶಯ ಇದ್ದಲ್ಲಿ ನೇರವಾಗಿ ಸಹಕಾರ ಇಲಾಖೆಗೆ ದೂರು ನೀಡಿ ಎಂದ ಅವರು ಮುಂದಿನ ದಿನಗಳಲ್ಲಿ ಮತ್ತೆ ಯಾರಾದರೂ ಸಹಕಾರಿ ಸಂಘದ ಕಛೇರಿ ಎದುರು ಪ್ರತಿಭಟನೆ ಮಾಡುವ ಪ್ರಯತ್ನ ಮಾಡಿದಲ್ಲಿ ಅಂತವರ ವಿರುದ್ಧ ನಾವು ಕೂಡ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪಾಂಡುರಂಗ ಕಾಂಬಳೆ, ಆಡಳಿತ ಮಂಡಳಿಯ ಸದಸ್ಯರಾದ ನಿಂಗಪ್ಪ ಮಾಲಗಾಂವಿ, ರುದ್ರಗೌಡ ಪಾಟೀಲ, ಭೀಮಣ್ಣಾ ತಳವಾರ, ರಮೇಶ ಕುಂಬಾರ, ಭಾಹುಸಾಹೇಬ ಶಿಂಧೆ, ಮಾರೂತಿ ನಾಯಿಕ ಕಾರ್ಯದರ್ಶಿ ಬಸಪ್ಪ ಮಸರಗುಪ್ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 