ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನೇಮಕಾತಿ
Recruitment at Jamkhandi Urban Co-operative Bank
ಲೋಕದರ್ಶನ ವರದಿ,
ಜಮಖಂಡಿ 7 : ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ನಡೆಸಲಾಗಿದ್ದು. ಅದರಲ್ಲಿ ವಿಕಲಚೇತನರ ಹುದ್ದೆಗಳನ್ನು ತುಂಬದೆ ಬಾರಿ ಅನ್ಯಾಯವನ್ನು ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಗೀರಮಲ್ಲಪ್ಪ ಕಡಪಟ್ಟಿ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025 ನೇ ಸಾಲಿನಲ್ಲಿ 45 ಹುದ್ದೆಗಳನ್ನು ತುಂಬಲಾಗಿದೆ. ವಿಕಲಚೇತನರ ಕುರಿತು ಯಾವುದೇ ಪ್ರಕಟನೆ ಹೊರಡಿಸದೆ ಉಳಿದ ಎಲ್ಲ ಹುದ್ದೆಗಳನ್ನು ತುಂಬಿದ್ದು. ಅದರಲ್ಲಿ ವಿಕಲಚೇತರನಿಗೆ ಅನ್ಯಾಯವನ್ನು ಮಾಡಿದ್ದಾರೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ದೂರನ್ನು ಸಲಿಸಲಾಗಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ನಿಯಮಗಳು 1960 ಪ್ರಕಾರದ ಮೇರೆಗೆ ದಾವಾ ದಾಖಲಿಸಿ ನ್ಯಾಯವನ್ನು ಪಡೆದುಕೊಳ್ಳಬಹುದೆಂದು ಆದೇಶವನ್ನು ನೀಡಿದ್ದಾರೆ.
ರಾಜ್ಯದಲ್ಲಿ ಸಹಕಾರಿ ಸಂಘಗಳಲ್ಲಿ ನೇಮಕಾತಿಯಲ್ಲಿ ವಿಕಲಚೇತನರಿಗೆ ಮಿಸಲಾತಿಯಲ್ಲಿ ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಬೇಕೆಂದು ಆದೇಶ ಇದ್ದರು ಸಹ ಅದನ್ನು ಗಾಳಿಗೆ ತೂರಿದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ. ಸಹಕಾರಿ ಸಂಘಗಳ ನಿಬಂಧಕರು ಬೆಂಗಳೂರು, ಜಂಟಿ ನಿಬಂಧಕರು ಸಹಕಾರಿ ಸಂಘಗಳು ಬೆಳಗಾವಿಗೆ ದೂರನ್ನು ನೀಡಲಾಗಿದೆ. ಅದಕ್ಕೆ ಮರಳಿ ಉತ್ತರವನ್ನು ಸಹ ಕಳಿಸಿದ್ದಾರೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದ 45 ಹುದ್ದೆಗಳನ್ನು ತುಂಬಿರುವ ಕುರಿತು ಅದರಲ್ಲಿ ವಿಕಲಚೇತರಿಗೆ ಅನ್ಯಾಯ ಮಾಡಿದಾರೆ. ವಿಕಲಚೇತನರಿಗೆ ನ್ಯಾಯ ದೊರೆಯುವ ಬಗ್ಗೆ ಉಚ್ಛ ನ್ಯಾಯಾಲದಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿ ನ್ಯಾಯವನ್ನು ಪಡೆಯುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ವಕೀಲರಾದ ಶಂಕರ ಲೀಲೆ ಮಾತನಾಡಿ, ಅರ್ಬನ್ ಬ್ಯಾಂಕ್‌ನಲ್ಲಿ ಹುದ್ದೆಗಳಲ್ಲಿ ಬಾರಿ ಗೋಲಾಮಾಲ್ ನಡೆದಿದ್ದು. ಅದರ ವಿರುದ್ದ ಉಚ್ಛ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿ. ಅನ್ಯಾಯಕ್ಕೆ ಒಳಪಟ್ಟವರಿಗೆ ನ್ಯಾಯವನ್ನು ದೊರೆಕಿಸಿಕೊಡುವ ಕೆಲವನ್ನು ಮಾಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿಕಲಚೇತನ ಹನುಮಂತ ಕಟ್ಟಿ ಉಪಸ್ಥಿತರಿದರು.
ಪೋಟೋ : ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ನಡೆಸಲಾಗಿದ್ದು. ಅದರಲ್ಲಿ ವಿಕಲಚೇತನರ ಹುದ್ದೆಗಳನ್ನು ತುಂಬದೆ ಬಾರಿ ಅನ್ಯಾಯವನ್ನು ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಗೀರಮಲ್ಲಪ್ಪ ಕಡಪಟ್ಟಿ ಅವರು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದರು,
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 