ಹಿರೇಕೊಳಚಿ ಪ್ರೌಢಶಾಲೆಗೆ ದಾಖಲೆಯ ಫಲಿತಾಂಶ: ಎಂ ನಾಗರಾಜ ಶಾಲೆಗೆ ಟಾಪರ್

ಹಿರೇಕೊಳಚಿ ಪ್ರೌಢಶಾಲೆಗೆ ದಾಖಲೆಯ ಫಲಿತಾಂಶ: ಎಂ ನಾಗರಾಜ ಶಾಲೆಗೆ ಟಾಪರ್   Record results for Hirekolachi High School: M Nagaraja's school is the topper

ಹೂವಿನಹಡಗಲಿ 27 : ತಾಲೂಕಿನ  ಎಸ್ ಎಸ್ ಬಿ ಎಚ್ ಸರ್ಕಾರಿ ಪ್ರೌಢಶಾಲೆ ಹಿರೇಕೊಳಚಿ.ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100ಕ್ಕೆ 92.68 ಅ ರ ದಾಖಲೆ ಫಲಿತಾಂಶ ಪಡೆದಿದೆ ಎಂದು ಶಾಲೆಯ ಪ್ರಭಾರಿ  ಮುಖ್ಯ ಶಿಕ್ಷಕ ಬನ್ನೆಪ್ಪ ತಿಳಿಸಿದ್ದಾರೆ.ಶಾಲೆಯ  ವಿದ್ಯಾರ್ಥಿಗಳಾದ ಎಂ.ನಾಗರಾಜ 543 ಅಂಕಗಳು. ಶೇ 86.88ಅ ಶಾಲೆಗೆ ಪ್ರಥಮ ಸ್ಥಾನಕೆ. ನಿಂಗಪ್ಪ 524 ಅಂಕ. ಶೇ 83.84 ದ್ವಿತೀಯ ಸ್ಥಾನ, ಅಂಜಲಿ ಬಾರಿಕರ 523 ಅಂಕ  ತೃತೀಯ ಸ್ಥಾನ ಶೇ 83.68ಎನ್ ಡಿ ಕಾವ್ಯ 521 ಅಂಕ  ಶೇ 83.36  ನಾಲ್ಕನೇ ಸ್ಥಾನ, ವಿಷ್ಣುಕುಮಾರ್ 519 ಅಂಕ. ಶೇ 83.04 ಐದನೆಯ ಸ್ಥಾನ, ಕೆ.ಗಂಗಮ್ಮ 514 ಅಂಕ. ಶೇ  82.24. ಆರನೇ ಸ್ಥಾನ ಪಡೆದು ಪ್ರೌಢಶಾಲೆಗೆ ಕೀರ್ತಿ ತಂದಿದ್ದಾರೆ.

ಒಬ್ಬ ವಿದ್ಯಾರ್ಥಿ ಡಿಸ್ಟಿಂಕ್ಷನ್, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 10 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಅಭಿನಂದನೆ : ಪ್ರಸಕ್ತ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಭಾರಿ ಮುಖ್ಯ ಗುರುಗಳಾದ ಬನ್ನೆಪ್ಪ, ಶಿಕ್ಷಕರಾದ ಎಂ ಎಂ ಶೆಟ್ಟರ್, ಜ್ಯೋತಿ ಎಂ ಜೆ, ಎಸ್ ರಾಮನಗೌಡ, ಪಿಎಂ ಕೊಟ್ರಸ್ವಾಮಿ, ಜಯಶ್ರೀ , ರಾಮಚಂದ್ರ ನಾಯಕ್, ಅಜ್ಜಯ್ಯ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಜಿ.ಹನುಮಂತಪ್ಪ ಮತ್ತು ಪದಾಧಿಕಾರಿಗಳು, ಗ್ರಾಮದ ಮುಖಂಡರು, ಪಾಲಕ-ಪೋಷಕರು, ಶಿಕ್ಷಣ ಪ್ರೇಮಿಗಳು, ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.