ದಾಖಲೆ ಮುರಿದ ತಾಪಮಾನ, ರಣಬಿಸಿಲಿನಿಂದ ತತ್ತರಿಸಿದ ಜನತೆ, ಕಛೇರಿಗಳ ಕೆಲಸದ ವೇಳೆಯನ್ನು ಬದಲಿಸಿ, ಸಾರ್ವಜನಿಕರಿಗೆ ಅನಕೂಲಮಾಡಿಕೊಡಲು ಜಿಲ್ಲಾಡಳಿತಕ್ಕೆ ರವೀಂದ್ರಗೌಡ ಎಫ್. ಪಾಟೀಲ ಒತ್ತಾಯ
Record-breaking temperatures, people reeling under scorching heat, Ravindra Gowda F. Patil urges the
ರಾಣೇಬೆನ್ನೂರು 15: ಹಿಂದೆಂದೂ ಕಂಡು ಕೇಳರಿಯದ ಬಿಸಿನ ತಾಪಮಾನ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಕಂಡುಬರುತ್ತಿದೆ, ರಣಬಿಸಿಲಿನ ತಾಪಕ್ಕೆ ಜನತೆ ತತ್ತರಿಸಿ ಹೋಗಿದ್ದಾರೆ. 40 ರಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಮ್ಮ ಹಾವೇರಿ ಜಿಲ್ಲೆಯಲ್ಲಿ ಕಂಡುಬರುತ್ತಿರುವುದರಿಂದ ವಯೋವೃದ್ಧರು, ಉಸಿರಾಟದ ತೊಂದರೆಯಿಂದ ಬಳಲುವವರು, ಹೃದಯಕ್ಕೆ ಸಂಬಂಧಿಸಿದ ಖಾಯಿಲೆ ಇರುವವರು ಚರ್ಮ ರೋಗಕ್ಕೆ ಸಂಬಂಧಿಸಿದವರು, ಅಸ್ತಮಾ ಖಾಯಿಲೆಯಿಂದ ನರಳುತ್ತಿರುವವರಿಗೆ ತುಂಬಾ ತೊಂದರೆಯಾಗಿರುವುದರಿಂದ ಕಲ್ಯಾಣ ಕರ್ನಾಟಕದ ರಾಯಚೂರು, ಬಳ್ಳಾರಿ, ಬೀದರ, ಕಲಬುರ್ಗಿ ಜಿಲ್ಲೆಗಳಲ್ಲಿ ಅತಿಯಾದ ಉಷ್ಣಾಂಶ ಇರುವುದರಿಂದ ಪ್ರತಿ ವರ್ಷದ ಬೇಸಿಗೆಯ ಈ ಸಂದರ್ಭದಲ್ಲಿ ‘3’ ತಿಂಗಳು ಕಛೇರಿಗಳ ವೇಳೆಯನ್ನು ಬದಲಾಯಿಸಿದಂತೆ ನಮ್ಮ ಹಾವೇರಿ ಜಿಲ್ಲೆಯಲ್ಲಿಯೂ ಆ ಜಿಲ್ಲೆಗಳ ಮಾದರಿಯಂತೆ ಕಛೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಬೇಕೆಂದು ರೈತ ಮುಂಖಂಡ ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಜಿಲ್ಲಾಡಳಿತಕ್ಕೆ, ರಾಣೇಬೆನ್ನೂರು ತಹಶೀಲ್ದಾರ್ ಆರ್.ಎಚ್. ಭಗವಾನ್ ರವರ ಮೂಲಕ ಒತ್ತಾಯಿಸಿದ್ದಾರೆ.
ಅವರು ಇಂದು ನಗರದ ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್‌ರವರ 135 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಶೀಲ್ದಾರ್. ಆರ್.ಎಚ್. ಭಗವಾನ್‌ರವರಿಗೆ ಈ ಬಗ್ಗೆ ಮನವಿ ಮಾಡಿ ಮಾತನಾಡಿದ ಅವರು ಪ್ರಸಕ್ತ ಬೇಸಿಗೆ ಆರಂಭವಾದ ಮೇಲೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ವಾತವರಣದಲ್ಲಿ ಧಿಡೀರನೆ ಬದಲಾವಣೆ ಕಂಡುಬಂದಿದೆ. ಜಿಲ್ಲಾಡಳಿತ ಮತ್ತು ಹವಮಾನ ತಜ್ಞರು ಈ ಸಂದರ್ಭದಲ್ಲಿ ಜನತೆ ಹೊರಗಡೆ ಓಡಾಡುವುದನ್ನು ತಪ್ಪಿಸಬೇಕು. ವಯಾಸ್ಸಾದವರು ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ಬಿಸಿಲಿಂದ ರಕ್ಷಿಸಬೇಕೆಂದು ಸಲಹೆ ನೀಡುತ್ತೀರಿ. ಆದರೆ ಪರ್ಯಾಯ ಮಾರ್ಗ ಹುಡುಕುವುದಿಲ್ಲ.
ಕೂಡಲೇ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಂತೆ ಕಛೇರಿಯ ವೇಳೆಯ ಅವಧಿಯನ್ನು ಬದಲಾಯಿಸಿ ಸಾರ್ವಜನಿಕರಿಗೆ, ರೋಗಿಗಳಿಗೆ, ಮಕ್ಕಳಿಗೆ ಅನುಕೂಲಮಾಡಿಕೊಡಬೇಕು, ಜಿಲ್ಲಾಡಳಿತ ಮನಸ್ಸು ಮಾಡಿದರೆ ಇದೇನು ದೊಡ್ಡಮಾತಲ್ಲ, ಈ ಹಿಂದೆ ಜಿಲ್ಲಾಡಳಿತ ಎಸ್.ಎಸ್.ಎಲ್.ಸಿ,- ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಚನ್ನಾಗಿ ಬರಲಿ ಎಂದು ರಾತ್ರಿವೇಳೆ ಟಿ.ವಿ. ಮತ್ತು ಮೊಬೈಲ್ ಸ್ವಿಚ್‌ಚ್‌ಆಫ್ ಮಾಡುವ ಕಾನೂನು ತಂದಿದ್ದೀರಿ. ಆದರೆ ಅದು ಮೊನ್ನೆಯ ಎಸ್.ಎಸ್.ಎಲ್.ಸಿ,- ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ಕೀರ್ತಿ ತರಲಿಲ್ಲ. ಆದರೆ ಈ ಸಂದರ್ಭದಲ್ಲಿ ಈ ಬಿಡು ಬಿಸಿಲಿನಿಂದ ಸಾರ್ವಜನಿಕರನ್ನು, ಮಕ್ಕಳನ್ನು, ವಯೋವೃದ್ಧರನ್ನು, ಅಸ್ತಮಾ ಖಾಯಿಲೆಯಿಂದ ಬಳಲುತ್ತಿರುವವರನ್ನು, ಮಹಿಳೆಯರನ್ನು ಚರ್ಮರೋಗದಿಂದ ಬಳಲುತ್ತಿರುವವರ ರಕ್ಷಣೆಗಾಗಿ ನಾಳೆಯಿಂದಲೇ ಮಳೆ ಬಂದು ತಾಪಮಾನ ಕಡಿಮೆಯಾಗುವವರೆಗೆ ಈ ಕಛೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಬೇಕೆಮದು ರವೀಂದ್ರೌಡ ಪಾಟೀಲರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 