ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರಗೆ ಸತ್ಕಾರ
Reception for Standing Committee Chairman Datta Vastar
ಅಥಣಿ 26: ಜನಸೇವೆಯೇ ನನಗೆ ಶ್ರೀರಕ್ಷೆಯಾಗಿದ್ದು, ಪುರಸಭಾ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರದಿಂದ ನಾನು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿರುವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಹೇಳಿದರು. ಅವರು ಚುನಾಯಿತ ಪ್ರತಿನಿಧಿಗಳಿಂದ, ಗಣ್ಯರಿಂದ, ಗುತ್ತಿಗೆದಾರರಿಂದ, ಸಾಮಾಜಿಕ ಕಾರ್ಯಕರ್ತರಿಂದ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು. ಪುರಸಭೆಯ ಮೂಲಕ ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದ ಅವರು ಸಣ್ಣ ಪುಟ್ಟ ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ ತಕ್ಷಣ ಪರಿಹಾರ ಕೊಡುವುದಾಗಿ ಹೇಳಿದರು.
ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಮತ್ತು ಸರ್ವ ಸದಸ್ಯರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿರುವೆ ಎಂದ ಅವರು ಪಟ್ಟಣದ ಸ್ವಚ್ಛತೆ ದೃಷ್ಟಿಯಿಂದ ಸಾರ್ವಜನಿಕರು ಕೂಡ ಪುರಸಭೆ ಸಿಬ್ಬಂದಿಗೆ ಸಹಕರಿಸಬೇಕೆಂದು ಕೋರಿದರು.
ದತ್ತಾ ವಾಸ್ಟರ ಇವರನ್ನು ಸತ್ಕರಿಸಿ ಮಾತನಾಡಿದ ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ಶಿವು ನಾಯಿಕ, ಪುರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ದತ್ತಾ ವಾಸ್ಟರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಜನಪರ, ಅಭಿವೃದ್ಧಿ ಯೋಜನೆಗಳು ಅನುಷ್ಠಾನ ಗೊಳ್ಳಲಿ ಎಂದು ಶುಭ ಹಾರೈಸಿದರು.
ತಿಪ್ಪಣ್ಣಾ ಬಜಂತ್ರಿ, ಮಯೂರ ಸಿಂಗೆ, ಬಿ.ಕೆ.ಚನ್ನರಡ್ಡಿ ,ಅರ್ಜುನ ನಾಯಿಕ, ಶಿವಪುತ್ರ ನಾಯಿಕ, ಬಸವರಾಜ ಮಗದುಮ್ ,ರಾಜು ಮರಡಿ, ಅಪ್ಪಾಸಾಬ ಆಲಬಾಳ, ರಮೇಶ ಧುಮಾಳೆ, ಅನೀಲ ಗೊಂದಳಿ, ದೀಲಿಪ ಲೋನಾರೆ, ರಾಜು ಗುಡೋಡಗಿ , ಮಲ್ಲೇಶ ಸವದಿ, ಬಸವರಾಜ ಪಾಟೀಲ, ಶಶಿಕಾಂತ ಹುಕುಂದ, ವಿಶ್ವನಾಥ ಗಡದೆ, ವಿಲಿನರಾಜ ಯಳಮಲ್ಲೆ, ವೆಂಕಟೇಶ ದೇಶಪಾಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 