ಬೆಂಗಳೂರು, ಜ 29 : ಮಂಡ್ಯದ ಗಂಡಿನ ವಿರುದ್ಧ ಅಂಬರೀಶ್ ಅಭಿಮಾನಿಗಳೇ ರೆಬೆಲ್ ಆದ ಘಟನೆ ನಡೆದಿದೆ
ಇದೇನಪ್ಪ ಅಂಬಿ ಅಂದ್ರೆ ಪ್ರಾಣ ಅನ್ನೋ ಜನ ಹೀಗ್ಯಾಕ್ ಮಾಡಿದ್ರು ಗೊತ್ತಾ? ಅಂಬಿ ಸಮಾಧಿ ಮುಂದೆಯೇ ‘ಮಂಡ್ಯದ ಗಂಡು’ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು ಆದರೀಗ ಚಿತ್ರಕ್ಕೆ ಕಂಟಕ ಎದುರಾಗಿದೆ.
ಮಂಡ್ಯದ ಗಂಡು ಅಂದ ತಕ್ಷಣ ನೆನಪಾಗೋದು ರೆಬೆಲ್ ಸ್ಟಾರ್ ಅಂಬರೀಶ್. ಹೀಗಾಗಿ ಅಂಬರೀಶ್ ಬಿಟ್ಟರೆ ಆ ಟೈಟಲ್ ಗೆ ಹೊಸಬರನ್ನ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ ಅಂತ ಅಭಿಮಾನಿಗಳು ರೆಬಲ್ ಆಗಿದ್ದು, ಶೀರ್ಷಿಕೆ ಬದಲಿಸುವಂತೆ ಫಿಲಂ ಚೇಂಬರ್ ಗೆ ಮನವಿ ನೀಡಲು ಸಿದ್ಧವಾಗಿದ್ದಾರೆ.
ಸದ್ಯ ಲೋಕೇಶ್ ಮಂಡ್ಯದ ಗಂಡು ಟೈಟಲ್ ನಲ್ಲಿ ಸಿನಿಮಾ ಮಾಡ್ತಿದ್ರು ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಂಬಿ ಪುತ್ರ ಅಭಿಷೇಕ್ ಚಾಲನೆ ನೀಡಬೇಕಿತ್ತು
ಆರಂಭದಲ್ಲಿಯೇ ವಿಘ್ನ ಎದುರಿಸ್ತಿರೋ ಚಿತ್ರದ ಟೈಟಲ್ ಬದಲಾಗೋ ಸಾಧ್ಯತೆ ದಟ್ಟವಾಗಿದೆ.