ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿ  Ready to fight against crimes against women and children

                     ಕೊಪ್ಪಳ 25:  ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ  ನ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ನಗರದ ಕನಕದಾಸ ವೃತ್ತದ ಬಳಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಹಿರಿಯ ಸಾಹಿತಿಗಳು ಹಾಗೂ ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು ಮತ್ತು ಂಋಖಖ ನ ರಾಜ್ಯಾಧ್ಯಕ್ಷರಾದ ಎಂ. ಎನ್‌. ಮಂಜುಳಾ ಅವರು ಸಹಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡುತ್ತಾ "ಂಋಖಖ ವತಿಯಿಂದ ನಡೆಯುತ್ತಿರುವ ’ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ರಾಜ್ಯವ್ಯಾಪಿ ಸಹಿ ಸಂಗ್ರಹ ಅಭಿಯಾನ’ಕ್ಕೆ ಎಲ್ಲಾ ಜನತೆ ಬೆಂಬಲಿಸಬೇಕು. ಜಾಗತೀಕರಣದ ನಂತರ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಟಿವಿ, ಮೊಬೈಲ್ ಗಳಲ್ಲಿ ಬರುವ ಹಿಂಸೆ, ಅಶ್ಲೀಲ ದೃಶ್ಯಗಳು ಯುವಕರ ಭಾವನೆಗಳನ್ನು ಕೆರಳಿಸಿ ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಅವರನ್ನು ಇಳಿಸುತ್ತಿವೆ. ದೇಶ-ವಿದೇಶಗಳಲ್ಲಿ ಅಶ್ಲೀಲತೆಯ ಸೃಷ್ಟಿ ಒಂದು ದಂದೆಯಾಗಿದೆ.  

               ಸಮಾಜದಲ್ಲಿ ಮಹಿಳೆಯರಿಗೆ ಭದ್ರತೆ ಕಾಣೆಯಾಗಿದೆ. ಪ್ರೀತಿಸಿದ ಯುವಕನಿಂದ ಕೊಲೆ, ಬಸ್ಸಿನಲ್ಲಿ, ದೇವಸ್ಥಾನದಲ್ಲಿ ದಿನೇ ದಿನೇ ಅತ್ಯಾಚಾರದಂತಹ ಪ್ರಕರಣಗಳು ವರದಿಯಾಗುತ್ತಿವೆ. ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚಾಗುತ್ತಿದೆ. ಮಕ್ಕಳನ್ನು ಕಳ್ಳಸಾಗಣೆ ಮಾಡಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನೋಡುದ್ದೇವೆ. ಇಂತಹ ಎಲ್ಲಾ ಅಮಾನವೀಯ ಕೃತ್ಯಗಳ ವಿರುದ್ಧ ಜನತೆ ಒಂದಾಗಬೇಕು" ಎಂದು ಹೇಳಿದರು. ನಂತರ ಂಋಖಖ ನ ರಾಜ್ಯಾಧ್ಯಕ್ಷರಾದ ಶ್ರೀಮತಿ ಎಂ. ಎನ್‌. ಮಂಜುಳಾ ಅವರು "ರಾಜ್ಯದಲ್ಲಿ ಸೌಜನ್ಯ,ದಾನಮ್ಮ, ನೇಹಾ ಹಿರೇಮಠ್, ಅಂಜಲಿ, ಮಹಾಲಕ್ಷ್ಮಿ, ಯಾಮಿನಿಯಂತವರ ಘೋರ ಸಾವುಗಳು ನಾಗರಿಕರನ್ನು ಅಘಾತಕ್ಕೀಡು ಮಾಡಿದವು. ಇತ್ತೀಚೆಗೆ ಹುಬ್ಬಳ್ಳಿ, ತೋರಣಗಲ್ಲು ಮತ್ತು ಮೈಸೂರಿನಲ್ಲಿ ಕಂದಮ್ಮಗಳ ಮೇಲಿನ ಅಪರಾಧಗಳು ಎಲ್ಲರ ಮನಸ್ಸನ್ನು ಕಲಕಿದವು. ಇಂತಹ ಅಪರಾಧಗಳಿಗೆ ಕೊನೆ ಹಾಕುವಲ್ಲಿ ಇಂದಿನ ಪೊಲೀಸ್, ಆಡಳಿತಾಂಗ ಮತ್ತು ನ್ಯಾಯಾಂಗ ಸಂಪೂರ್ಣವಾಗಿ ಸೋತಿವೆ.

         ಈ ಅಮಾನವೀಯ ವ್ಯವಸ್ಥೆಯ ವಿರುದ್ಧ ನಾವೆಲ್ಲ ಸುಧೀರ್ಘವಾದ ಸಂಗ್ರಾಮಕ್ಕೆ ಸಜ್ಜಾಗಬೇಕಾಗಿದೆ. ಸಕಲ ಮಹಿಳೆಯರನ್ನು ಜಾಗೃತರನ್ನಾಗಿಸಿ ಸಂಘಟಿಸಬೇಕಾಗಿದೆ. ಎಲ್ಲಾ ರೀತಿಯ ಶೋಷಣೆಗಳಿಗೆ ಮಂಗಳ ಹಾಡುವ ಕ್ರಾಂತಿಕಾರಿ ಕಹಳೆ ಊದಿರುವ ಕಾರ್ಮಿಕ ವರ್ಗಗದೊಂದಿಗೆ ಮಹಿಳಾ ವಿಮುಕ್ತಿ ಹೋರಾಟವನ್ನು ಬೆಸೆಯುತ್ತಾ, ಮಹಿಳೆಗೆ ನೈಜ ಘನತೆ, ಗೌರವ ಖಾತ್ರಿಪಡಿಸುವ ಹೊಸ ಸಮಾಜವನ್ನು ತರಲು ಎಲ್ಲರೂ ಸಜ್ಜಾಗಿ" ಎಂದು ಕರೆ ನೀಡಿದರು. ಂಋಖಖ ನ ಜಿಲ್ಲಾ ಸಂಘಟನಾ ಸಮಿತಿಯ ಅಧ್ಯಕ್ಷರಾದ ಮಂಜುಳಾ ಮಜ್ಜಿಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಶಾರದಾ ಗಡ್ಡಿ, ಹುಸೇನ್ ಬಿ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಸಿದ್ದರು. ಜನತೆ ನೂರಾರು ಸಹಿ ನೀಡುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.