ಎಲ್ಲ ಅಕ್ರಮ ವಲಸಿಗರ ಗಡೀಪಾರಿಗೆ ಸಿದ್ಧ: ಪರಮ್
ಬೆಂಗಳೂರು: ಕನರ್ಾಟಕದಲ್ಲಿ ವಾಸಿಸುತ್ತಿರುವ ಎಲ್ಲಾ ಅಕ್ರಮ ವಲಸಿಗರನ್ನು ರಾಜ್ಯದಿಂದ ಗಡೀಪಾರು ಮಾಡಲಾಗುತ್ತದೆ.ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದಾರೆ. ಆಯಾ ದೇಶದ ರಾಯಭಾರಿಗಳಿಂದ ಸೂಕ್ತ ಮಾಹಿತಿ ಪಡೆದ ಬಳಿಕ ಈ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳಿದರು.
ಶುಕ್ರವಾರ ಮಾಧ್ಯಮ ಮಿತ್ರರ ಜತೆ ಮಾತನಾಡಿದ ಪರಮೇಶ್ವರ್ ರಾಜ್ಯದಲ್ಲಿ ಎಷ್ಟು ಅಕ್ರಮ ವಲಸಿಗರು ವೀಸಾ ಇಲ್ಲದೆ ಅಥವಾ ವೀಸಾ ಅವಧಿ ಮುಕ್ತಾಯದ ಬಳಿಕವೂ ಉಳಿದುಕೊಂಡಿದ್ದಾರೆ ಎನ್ನುವುದನ್ನು ರಾಜ್ಯ ಸಕರ್ಾರ ಅಂದಾಜಿಸಿದೆ ಎಂದಿದ್ದಾರೆ.
"ಅಧಿಕೃತ ವೀಸಾ ಮತ್ತು ದಾಖಲೆಗಳಿಲ್ಲದ ಯಾವುದೇ ವಲಸಿಗರು ಅವರ ದೇಶಕ್ಕೆ ಹಿಂತಿರುಗಬೇಕಾಗುವುದು. ಇತ್ತೀಚೆಗೆ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡ 107 ಆಫ್ರಿಕನ್ ರಾಷ್ಟ್ರಗಳ ಪ್ರಜೆಗಳು ವೀಸಾ ಇಲ್ಲದೆ ಅಥವಾ ತಮ್ಮ ವೀಸಾ ಅವಧಿ ಮುಗಿದ ಬಳಿಕ ಸಹ ಇಲ್ಲಿಯೇ ಉಳಿದಿದ್ದಾರೆ ಎನ್ನುವುದು ತಿಳಿದುಬಂದಿದೆ. ಅವರನ್ನು ಇನ್ನು ಕೆಲವೇ ದಿನಗಳಲ್ಲಿ ಗಡೀಪಾರು ಮಾಡುತ್ತೇವೆ
"ಅವರು ತಮ್ಮ ತಮ್ಮ ದೇಶಕ್ಕೆ ತೆರಳಲು ನಾವುಗಳೇ ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ ಟಿಕೆಟ್ ಖರ್ಚನ್ನು ಭರಿಸುತ್ತೇವೆ. ಇದಕ್ಕೆ ಮುನ್ನ ಸಂಬಂಧಪಟ್ಟ ದೂತಾವಾಸಕ್ಕೆ ಇವರ ಕುರಿತು ಮಾಹಿತಿ ನೀಡಲಿದ್ದೇವೆ.ಹೀಗೆ ಗಡೀಪಾರಿಗೆ ಖಚರ್ಾದ ವೆಚ್ಚವನ್ನು ಆಯಾ ರಾಷ್ಟ್ರಗಳ ರಾಯಬಾರಿಗಳಿಂದ ಸಂಗ್ರಹಿಸಲಾಗುತ್ತದೆ " ಪರಮೇಶ್ವರ್ ಹೇಳಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 