ಹಿರಿಯ ಸಾಹಿತಿಗಳ ಓದೇ ನಮಗೊಂದು ಟಾನಿಕ್ ಇದ್ದಂತೆ : ಶಾಸ್ತ್ರಿ
Reading the works of great writers is like a tonic for us: Shastri
ಲೋಕದರ್ಶನ ವರದಿ
ಹಿರಿಯ ಸಾಹಿತಿಗಳ ಓದೇ ನಮಗೊಂದು ಟಾನಿಕ್ ಇದ್ದಂತೆ : ಶಾಸ್ತ್ರಿ
ಬೆಳಗಾವಿ 27: ಹಿಂದಿನ ಕವಿಗಳು ನಮಗೆ ಪ್ರೀತಿ ಮತ್ತು ಸಹೃದಯತೆಯನ್ನು ಕೊಟ್ಟಿದ್ದಾರೆ. ನಾವು ಕಿರಿಯರು ಎಂಬಂತೆ ಅವರೆಂದು ನಡೆದುಕೊಳ್ಳಲಿಲ್ಲ. ಅಂಥ ಹಿರಿಯರನ್ನು ನೆನಪಿಸಿಕೊಳ್ಳುವುದೇ ನಮಗೊಂದು ಟಾನಿಕ್ ಇದ್ದ ಹಾಗೆ. ಜೀವನೋತ್ಸಾಹವನ್ನು ಉಳಿಸಿಕೊಳ್ಳಬೇಕಾದರೆ ನಾವು ಹಿರಿಯ ಕವಿಗಳ ಸಾಹಿತ್ಯವನ್ನು ಓದಬೇಕು. ಕವಿತೆಗಳನ್ನು ಕೇಳಬೇಕು, ಹಾಡಬೇಕು. ಕವಿ ಎಚ್.ಎಸ್.ವಿ. ನುಡಿ ಗಾನ ನಮನ ಕಾರ‌್ಯಕ್ರಮವನ್ನು ಹಮ್ಮಿಕೊಂಡಿರುವ ಸಮಾಸದವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಸಾಹಿತಿ ಎಲ್. ಎಸ್. ಶಾಸ್ತ್ರಿಯವರು ಇಂದಿಲ್ಲಿ ಹೇಳಿದರು.
ರಂಗಸಂಪದದ ಸಮಾಸ ಸಂಘಟನೆಯವರು ದಿ. 25 ಗುರುವಾರದಂದು ಹಿಂದವಾಡಿಯ ಐಎಂ.ಇ.ಆರ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕವಿ ಎಚ್.ಎಸ್.ವ್ಹಿ.ಯವರ ನುಡಿ ಮತ್ತು ಗಾಯನ ನಮನ ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಡಾ. ರಾಘವೇಂದ್ರ ಪಾಟೀಲ ಅವರು ಮಾತನಾಡಿ ಲೇಖಕ ವಿಫುಲತೆ ಮತ್ತು ಸಾಂದ್ರತೆ ಎರಡನ್ನೂ ಒಂದುಗೂಡಿಸಿಕೊಂಡು ಹೋಗುವುದು ತುಂಬ ಕಷ್ಟದ ಕೆಲಸ. ಎಚ್.ಎಸ್. ವೆಂಕಟೇಶಮೂರ್ತಿಯವರು ಎರಡನ್ನೂ ಕೂಡಿಸಿಕೊಂಡು ಬಂದಿದ್ದರು. ಇವರ ಕವಿತೆಗಳು ಜನರ ಪ್ರೀತಿಯನ್ನು ಗಳಿಸಿದ್ದವು ಎಂದು ಹೇಳಿದರು.
ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರು ಎಚ್.ಎಸ್.ವಿ. ಅವರು ರಚಿಸಿದ ಎರಡು ಕವಿತೆಗಳ ವಾಚನ ಮಾಡಿದರು. ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟವನ್ನು ಹಂಚಿಕೊಂಡರು. ತುಂಬ ಭಾವುಕರಾದ ಅವರ ಕಣ್ಣುಗಳು ತೇವಗೊಂಡವು.
ಗಾನ ನಮನದಲ್ಲಿ ಕಲಾವಿದೆಯರಾದ ಸ್ನೇಹಾ ಕುಲಕರ್ಣಿ ಮತ್ತು ಪೂರ್ವೀ ರಾಜಪುರೋಹಿತ ಸೇರಿಕೊಂಡು ದಿ. ಎಚ್. ಎಸ್. ವೆಂಕಟೇಶಮೂರ್ತಿಯವರ ಇರಬೇಕು ಇರುವಂತೆ..., ಲೋಕದ ಕಣ್ಣಿಗೆ ರಾಧೆಯೂ ಕೂಡ..., ಹೇಗೆ ನಿನ್ನ ಹುಡುಕಲಿ..., ಹುಚ್ಚಖೋಡಿ ಮನಸು ಅದು ಹದಿನಾರರ ವಯಸ್ಸು..., ಇಷ್ಟುದಿನ ಒಟ್ಟಿಗಿದ್ದು..., ಹಸಿರ ಉಡಿ ಚಿಗುರ ಮುಡಿ.., ತಾನೇ ತಂದಾನ..., ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ...., ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ... ರಚನೆಗಳನ್ನು ತುಂಬ ಸುಶ್ರಾವ್ಯವಾಗಿ ಹಾಡಿ ಶೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದರು. ನಾರಾಯಣ ಗಣಾಚಾರಿ ತಬಲಾ ಮತ್ತು ಮುಕುಂದ ಗೋರೆ ಹಾರ್ಮೋನಿಯಂ ಸಾಥ ನೀಡಿದರು.
ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರ ಭಾವಚಿತ್ರಕ್ಕೆ ಪುಷ್ಾರೆ್ಪಣಯೊಂದಿಗೆ ಕಾರ‌್ಯಕ್ರಮ ಪ್ರಾರಂಭವಾಯಿತು. ಡಾ. ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಸಾದ ಕಾರಜೋಳ ಸ್ವಾಗತಿಸಿದರು. ಮಂಜುನಾಥ ಕಲಾಲ ಪರಿಚಯಿಸಿದರು. ಸ್ನೇಹಾ ಜೋಶಿ ವಂದಿಸಿದರು. ಪದ್ಮಾ ಕುಲಕರ್ಣಿ ಮತ್ತು ವೀಣಾ ಹೆಗಡೆ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ‌್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ‌್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 