ಓದಿನಿಂದ ಉನ್ನತ ಸಾಧನೆ ಸಾಧ್ಯ
Reading can lead to high achievement.
ಲೋಕದರ್ಶನ ವರದಿ
ಹೂವಿನ ಹಡಗಲಿ 23: ನಿರಂತರ ಓದಿನಿಂದ ಉನ್ನತ ಸಾಧನೆ ಸಾಧ್ಯ ಎಂದು ಕವಿ ರಾಮಪ್ಪ ಕೋಟಿಹಾಳ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಜೆ ಎಸ್ ಎಸ್ ಕಾಲೇಜಿನಲ್ಲಿ ಗುರುವಾರಓದು ಅಭಿಯಾನದಲ್ಲಿ ಕಾಲೇಜಿನ ಭಾಷಾ ಸಂಘ, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಸಿಂಚನ ಪ್ರಕಾಶನ ಮೇ ಸಾಹಿತ್ಯ ಮೇಳ ಬಳಗದ ಸಹಯೋಗದಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತಸಾವಿತ್ರಿ ಬಾಯಿ ಫುಲೆ ಮತ್ತು ವೀರ ಭಗತ್ ಸಿಂಗ್ ನೂರು ಪುಸ್ತಕಗಳ ಕೊಡುಗೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹೆಚ್ಚು ಹೆಚ್ಚು ಓದಿದಾಗ ಜ್ಞಾನವನ್ನು ಮಕ್ಕಳಿಗೆ ವರ್ಗಾಯಿಸಲು ಅನುಕೂಲ.ಅಂಬೇಡ್ಕರ್ ಗಾಂಧಿ ಬಸವಣ್ಣ ಅಕ್ಕಮಹಾದೇವಿ ಕುವೆಂಪು ತಮ್ಮ ನಡೆ ನುಡಿ ಕೃತಿಗಳಿಂದ ಇಂದಿಗೂ ಸಾಹಿತ್ಯ ಲೋಕದಲ್ಲಿ ಜೀವಂತವಾಗಿದ್ದಾರೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ ಎಚ್ ಪಿ ರಮೇಶ್,ಭಾಷಾ ಸಂಘದ ಸಂಚಾಲಕ ಡಾ ಎಂ ಪಿ ಎಂ ಮಂಜುನಾಥ , ಕ.ಜಾ.ಸ.ಜಿಲ್ಲಾ ಸದಸ್ಯ ಸುರೇಶ , ಪತ್ರಕರ್ತಖಾಜಾ ಹುಸೇನ್ , ಡಾ.ಅಶೋಕ ಈಡಿಗರ, ಕೆ.ನಾಗರಾಜಮಾತನಾಡಿದರು.ಶಿಕ್ಷಕ ವಿದ್ಯಾರ್ಥಿನಿ ಲಲಿತಾ ಮೈಲಾರ ವಿಶ್ವ ಪುಸ್ತಕ ದಿನಾಚರಣೆ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಶಾಖಾ ಗ್ರಂಥಾಲಯಾಧಿಕಾರಿ ಬಿ ನಾರಾಯಣ್ ದಾಸ್ ಉಪನ್ಯಾಸಕ ಭೋಜರಾಜ್, ವಿರುಪಾಕ್ಷಪ್ಪ,ಭಾಸ್ಕರ್ ನಂದಿ ಇದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 