ಕೃಷಿ ಮೇಳದಲ್ಲಿನ ಅದ್ಭುತ ಅನುಭವ ಪಡೆದುಕೊಳ್ಳಲು ರವೀಂದ್ರಗೌಡ ಕರೆ
Ravindra Gowda calls for a wonderful experience at the Krishi Mela
ಕೃಷಿ ಮೇಳದಲ್ಲಿನ ಅದ್ಭುತ ಅನುಭವ ಪಡೆದುಕೊಳ್ಳಲು ರವೀಂದ್ರಗೌಡ ಕರೆ
ರಾಣೇಬೆನ್ನೂರು 15: ಪ್ರತಿವರ್ಷ ಧಾರವಾಡದಲ್ಲಿ ನಡೆಯುತ್ತಿರುವ ವಿಶೇಷವಾದ, ವಿಶಿಷ್ಟವಾದ ಕೃಷಿಮೇಳದಲ್ಲಿ ರೈತರು ಭಾಗವಹಿಸಿ ಕೃಷಿಮೇಳದಲ್ಲಿನ ಅದ್ಭತವಾದ ಅನುಭವ ಪಡೆದುಕೊಳ್ಳುವುದರೆ ಜೊತೆಗೆ ಅಲ್ಲಿ ನಡೆಯುವ ಅಧ್ಯಯನ ಶಿಬಿರದಲ್ಲಿಯೂ ಕೂಡ ಪಾಲ್ಗೊಳ್ಳಬೇಕೆಂದು ರವೀಂದ್ರಗೌಡ ಎಫ್. ಪಾಟೀಲ ಕರೆ ನೀಡಿದರು.
ಅವರು ಇಂದು ಬೆಳಗ್ಗೆ 7 ಘಂಟೆಗೆ ರಾಣೇಬೆನ್ನೂರಿನ ಆಂಗ್ಲೊ ಉರ್ದು ಮೈದಾನದಲ್ಲಿ ಕೃಷಿ ಇಲಾಖೆ ರಾಣೇಬೆನ್ನೂರು 2025-26 ನೇ ಸಾಲಿನ ಆತ್ಮ ಯೋಜನೆ ಮತ್ತು ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡರ ಅನುದಾನದಡಿಯಲ್ಲಿ ರೈತರ ಅಧ್ಯಯನ ಪ್ರವಾಸ, ಕೃಷಿಮೇಳ ಧಾರವಾಡಕ್ಕೆ ಹೊರಟಿದ್ದ ರೈತರ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕ ಪ್ರಕಾಶ ಕೋಳಿವಾಡರವರ ರೈತರ ಸರ್ವೋತೋಮುಖ ಅಭಿವೃದ್ಧಿಯ ದೂರದೃಷ್ಟಿಯ ಯೋಜನೆಗಳಲ್ಲಿ ಒಂದಾದ ಎಫ್.ಪಿ.ಓ (ಫಾರ್ಮರ್ ಪ್ರೋಡುಜರ್ ಆರ್ಗಾನಿಜೇಶನ್) ನ ಮೂಲ ಉದ್ದೇಶಗಳಾದ ಆದಾಯ ದ್ವಿಗುಣ, ತಾನು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವುದು, ಗೊಬ್ಬರ, ಬೀಜ, ಓಷಧಿ ಕಡಿಮೆ ಬೆಲೆಗೆ ಸಿಗುವ ಬಗ್ಗೆ, ಬೆಳೆ ಸಂರಕ್ಷಣೆ ಹಾಗೂ ಮೌಲ್ಯವರ್ಧನೆ, ಬ್ಯಾಂಕ್ ಸಾಲ ಹಾಗೂ ಸರ್ಕಾರಿ ಸಬ್ಸಿಡಿ ಪಡೆಯುವ ಬಗ್ಗೆ, ಮಧ್ಯವರ್ತಿಗಳಿಲ್ಲದೆ ನೇರ ಮಾರುಕಟ್ಟೆ ಪ್ರವೇಶ, ಆಧುನಿಕ ಕೃಷಿಜ್ಞಾನ ಮತ್ತು ತರಬೇತಿ, ಗ್ರಾಮದಲ್ಲಿ ಉದ್ಯೋಗ ಸೃಷಿ ಸೇರಿದಂತೆ ಸುಮಾರು 8 ಅತ್ಯುಪಯುಕ್ತವಾದ ಯೋಜನೆಗಳ ಮಾಹಿತಿ ಪಡೆಯಲು ರಾಣೇಬೆನ್ನೂರು ತಾಲೂಕಿನ ಕಾಕೋಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿ.ಎಫ್.ಓ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭ ಮಾಡುತ್ತಿದ್ದು ಅದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷರಾದ ಚನ್ನಬಸನಗೌಡ ದೊಡ್ಡಗೌಡ್ರ, ಕಾಂಗ್ರೆಸ್ ಮುಖಂಡರಾದ ಯಲ್ಲಪ್ಪರಡ್ಡಿ ರಡ್ಡೇರ, ಯುವ ಮುಖಂಡರು, ಪಿ.ಕೆ.ಕೆ. ಸಂಸ್ಥೆಯ ಪ್ರಮುಖರಾದ ಇರ್ಫಾನ ದಿಡಗೂರ, ನಾಗರಾಜ ಮರಿಯಮ್ಮನವರ, ಬಸವರಾಜ ಯಲ್ಲಕ್ಕನವರ, ಇಕ್ಬಾಲ್‌ಸಾಬ್ ರಾಣೇಬೆನ್ನೂರು, ಸಂಗನಗೌಡ ಕರೇಗೌಡ್ರ, ಶಾಸಕರ ಆಪ್ತ ಸಹಾಯಕರಾದ ಮಹೇಶ ಕೆಂಚರಡ್ಡಿ, ಕೃಷಿ ಅಧಿಕಾರಿಗಳಾದ ಎಂ. ಅರವಿಂದ, ಎಂ.ಕೆ. ಬಣಕಾರ, ಬಸವರಾಜ, ಬಾಷಾಸಾಬ ಸೇರಿದಂತೆ ತಾಲೂಕಿನ 150 ಕ್ಕೂ ಹೆಚ್ಚು ರೈತರು ಧಾರವಾಡದಲ್ಲಿ ನಡೆಯುವ ಕೃಷಿ ಅಧ್ಯಯನ ಮತ್ತು ಕೃಷಿಮೇಳಕ್ಕೆ ತೆರಳಿದರು. ಇವರನ್ನು ಪ್ರಗತಿಪರ ರೈತರು, ರೈತ ಮುಖಂಡರು, ಅಧಿಕಾರಿಗಳು, ಶಾಸಕರ ಆಪ್ತರು ಬೀಳ್ಕೊಟ್ಟು ಶುಭಹಾರೈಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 