ಸಮುದಾಯ ಭವನ ಕಾಮಗಾರಿಗೆ ರಾವಸಾಬ ಬೇವಿನೂರ ಚಾಲನೆ

ಸಮುದಾಯ ಭವನ ಕಾಮಗಾರಿಗೆ ರಾವಸಾಬ ಬೇವಿನೂರ ಚಾಲನೆ Ravasabha Bevinura launches the community hall work

ಸಂಬರಗಿ, 15 ;ಗಡಿ ಭಾಗದ ಗ್ರಾಮಗಳಲ್ಲಿ ಶಾಸಕರಾದ ರಾಜು ಕಾಗೆಯವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಸಾಗುತ್ತಿದ್ದು ರಸ್ತೆ ಸಮುದಾಯ ಭವನ ಶಾಲಾ ಕಟ್ಟಡ ಹೆಚ್ಚು ಒತ್ತು ನೀಡಿದ್ದಾರೆ. ಈ ಭಾಗದ ರೈತರ ಕನಸಾಗಿರುವ ನೀರಾವರಿ ಯೋಜನೆ ಮೊದಲನೇ ಹಂತದಲ್ಲಿ ರೈತರ ಜಮೀನಿಗೆ ನೀರು ತಲುಪಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯಪಿಕೆಪಿಎಸ್‌ ಸಂಘದ ಅಧ್ಯಕ್ಷರಾದ ರಾವಸಾಬ ಬೇವಿನೂರು ಹೇಳಿದರು. 

ಶಿವನೂರು ಗ್ರಾಮದ ಅಂಬೇಡ್ಕರ್ ನಗರದಲ್ಲಿ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಅವರು ಚುನಾವಣೆಯಲ್ಲಿ ನೀಡಿರುವ ಭರವಸೆಗಳು ಪೂರ್ಣಗೊಳಿಸಿದ್ದು ನಮ್ಮ ಗ್ರಾಮದಲ್ಲಿ ಕರಿಯಪ್ಪ ತೋಟದಲ್ಲಿ ಸಮುದಾಯ ಭವನ್ ಸದಾಶಿವ್ ಮುತ್ಯ ಮಂದಿರದಲ್ಲಿ ಸಮುದಾಯ ಭವನ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಹಲವಾರು ಕಾಮಗಾರಿ ಕೈಗೊಂಡಿದ್ದಾರೆ ಅವರು ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ನಮ್ಮ ಗ್ರಾಮದಲಿ 90/ ಕಾಮಗಾರಿ ಪೂರ್ಣಗೊಂಡಿವೆ ಎಂದು ಹೇಳಿದರು. 

ಈ ವೇಳೆ ಕರಣ್ ಬೇವನೂರ್, ಶಿವಾನಂದ ಬೇವನೂರು, ಪಂಡಿತ್ ಕಾಂಬಳೆ ಸಿದ್ದರಾಯ್ ಕಾಂಬ್ಳೆ ಪ್ರಜ್ವಲ್ ಕಸ್ತೂರಿ, ಸಂಭಾಜಿ ವಾಗಮೊಡೆ, ಸಿದ್ದರಾಮಯ್ಯ ಕಾಂಬಳೀ, ಅನ್ನ ಸಾಹೇಬ್‌ ಅಢಹಳ್ಳಿವಿಜಯ ಅಡಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಲಲಿತಾ ಬಸವರಾಜ್ ಕಾಂಬಳೆ ಗುತ್ತಿಗೆದಾರ ಸುನೀಲ್ ಚಮಕೇರಿ ಪ್ರಶಾಂತ್ ಅಜಿರ ಸಿರಿವಂತ ಕಾರ್ಯಕರ್ತರು ಗಣ್ಯರು ಉಪಸ್ಥಿತಿ ಇದ್ದರು.