ಸಮುದಾಯ ಭವನ ಕಾಮಗಾರಿಗೆ ರಾವಸಾಬ್ ಬೇವನೂರ್ ಚಾಲನೆ
Ravasabh Bevanur launches the community hall work
ಸಂಬರಗಿ, 18 ; ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಗ್ರಾಮೀಣ ಕೃಷಿಭೂಮಿಗಳ ಸಂಪರ್ಕ ರಸ್ತೆಗಳನ್ನು ಡಾಂಬರೀಕರಣ ಗೊಳಿಸಲಾಗಿದೆ ರೈತರು ರಸ್ತೆಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದೆ. ಶಾಸಕ ರಾಜು ಕಾಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ, ಆದ್ದರಿಂದ ಮತದಾರರು ಅವರ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಮತ್ತು ಹಲಮತ ಸಮಾಜದ ಅಥಣಿ ತಾಲೂಕು ಅಧ್ಯಕ್ಷ ಹಾಲಮತ, ಕಾಂಗ್ರೆಸ್ ನಾಯಕ, ರಾವಸಾಬ ಬೇವನೂರ್ ಹೇಳಿದರು.
ಶಿವನೂರ ಗ್ರಾಮದ ಹಾರವಲಯ ಕರಿಯಪ್ಪನ ತೋಟದಲ್ಲಿ ಸಮುದಯ ಭವನ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು ಈ ಕಟ್ಟಡಕ್ಕೆ 10 ಲಕ್ಷ ರೂ. ಅನುದಾನವನ್ನು ಅನುಮೋದಿಸಲಾಗಿದೆ. ತೋಟದ ವಸ್ತಿಯಿಂದ ಎರಡು ಕಿಲೋಮೀಟರ್ ದೂರದವರೆಗೆ ಜಂಬಗಿ ಸಂಪರ್ಕ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುವುದು. ರಸ್ತೆ ಮುತ್ತಿನ ಇರುವ ರೈತರು ಸಹಕರಿಸುವಂತೆ ಅವರು ವಿನಂತಿಸಿದರು.
ನಮ್ಮ ಹಳ್ಳಿಗಳಲ್ಲಿ ಹೆಚ್ಚಿನ ಕೆಲಸಗಳು ನಡೆದಿವೆ. ಯುವ ಪೀಳಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕರಿಸಬೇಕು. ಇಲ್ಲಿಯವರೆಗೆ, ಬಹಳಷ್ಟು ಕೆಲಸಗಳು ನಡೆದಿವೆ. ಕರ್ನಾಟಕದ ಗಡಿಯಿಂದ ಕೃಷ್ಣಾ ನದಿಯವರೆಗೆ ಅಗ್ರಣಿ ನದಿಯಲ್ಲಿ ಅನೇಕ ಸ್ಥಳಗಳಲ್ಲಿ ಬಂದರ ನಿರ್ಮಿಸಿದ್ದಾರೆ ಅದರಿಂದ ನೀರು ಸಂಗ್ರಹ ವಾಗಿದೆ ಅಗ್ರಣೆ ನದಿ ಮೇಲೆ ಸುಮಾರು 20 ಲಕ್ಷ ಅಂತಿರವರಿಗೆ ಪ್ರತಿ ಗ್ರಾಮದಲ್ಲಿ ಎರಡು ಬಾಂದರ ನಿರ್ಮಾಣ ಮಾಡಿದ್ದಾರೆ ಬಂಗಾರದಿಂದ ನೀರು ಸಂಗ್ರ ಆಗಿದೆ ಭಾಗದ ಬಾವಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಅವರ ನೀರಾವರಿ ಕೆಲಸವನ್ನು ಶಾಶ್ವತವಾಗಿ ಉಳಿದಿದೆ.ಈ ಸಂದರ್ಭದಲ್ಲಿ ತಮ್ಮನ ಪೂಜಾರಿ ಕರಣ್ ಬೇವನೂರ, ಶಿವಾನಂದ ಬೇವನೂರ, ಕರಣ್ ಬೇವನೂರ, ಸಂಗಪ್ಪ ಬೇವನೂರ, ರಾವ್ಸಾಹೇಬ ಬಂಡಗಾರ, ಸಂಭಾಜಿ ವಾಘಮೋಡೆ ಸಾಗರ್ ಬೇವನೂರ ಅರುಣ ವಾಘಮೋಡೆ, ಭಗವಂತ ಬೇವನೂರ ವಿನಾಯಕ ಬೇವನೂರ, ಸಿದ್ರಾಮ ಮಗ್ದಂ, ಸುನೀಲ ಚಮಕೇರಿ ಚಮಕೇರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 