ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಆಗುವಂತೆ ಬೆಳೆಸುವುದು ಅಗತ್ಯ: ನಲವಡೆ

ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಆಗುವಂತೆ ಬೆಳೆಸುವುದು ಅಗತ್ಯ: ನಲವಡೆ Rather than creating assets for children, it is necessary to raise children to become assets: Nalava


               ಬೈಲಹೊಂಗಲ 04: ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಹೆಚ್ಚು ಗಮನ ಮಕ್ಕಳನ್ನೇ ಆಸ್ತಿ ಆಗುವಂತೆ ಬೆಳೆಸುವುದು ಅಗತ.್ಯವಾಗಿದೆ. ಕಾರಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಸಮಯ ಮೀಸಲಿಡಿ ಅವರತ್ತ ಗಮನ ಕೊಡಿ ಎಂದು ನಯಾನಗರ ಸರ್ಕಾರಿ ಪ್ರೌಢಶಾಲೆಯ ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ನಾರಾಯಣ ನಲವಡೆ ನುಡಿದರು. ಸಮೀಪದ ನಯಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಜನ್ಮ ಜಯಂತಿ ಅಂಗವಾಗಿ, ಪಾಲಕ ಫೊಷಕರ ಸಭೆ, ಬಿಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗಾಗಿ ಆಸ್ತಿ ಮಾಡುವ ಬರದಲ್ಲಿ ಅವರ ಬಗ್ಗೆ ಗಮನ ನೀಡದಿದ್ದಲ್ಲಿ ಮಕ್ಕಳು ಸಹವಾಸ ದೋಷದಿಂದ ತಮ್ಮ ಅಮೂಲ್ಯ ಜೀವನ ಹಾಗೂ ತಾವು ದುಡಿದು ಗಳಿಸಿದ ಆಸ್ತಿಗೆ ಹಾನಿಮಾಡುವ ಸಾದ್ಯತೆ ಹೆಚ್ಚು ಇರುವುದರಿಂದ ಮಕ್ಕಳತ್ತ ಗಮನವಿರಲಿ, ಮಕ್ಕಳ ಶಿಕ್ಷಣದ ಬಗ್ಗೆ ಆಗಾಗ ಶಾಲೆಗೆ ಬಂದು ವಿಚಾರಿಸಿ ಶಿಕ್ಷಕರ ಸಲಹೆ ಸೂಚನೆ ಪಾಲನೆ ಮಾಡಿ ಮಕ್ಕಳನ್ನು ತಿದ್ದಿ ತೀಡಿ ನಡೆಸಿದಲ್ಲಿ ಮಕ್ಕಳ ಭವಿಷ್ಯ ಸುಂದರ ಹಂದರವಾಗುವುದರಲ್ಲಿ ಸಂದೇಹವಿಲ್ಲ ಅದರಂತೆ ಮಕ್ಕಳು ಕೂಡಾ ಕಠಿಣ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಅದ್ಯಯನ ಕೈಗೊಂಡು ತಂದೆ-ತಾಯಿ ಹಾಗೂ ಗುರು-ಹಿರಿಯರ ಕನಸು ಸಾಕಾರಗೊಳಿಸಬೇಕೆಂದರು.  

      ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಪ್ರಸ್ತುತ ಬೆಳಗಾವಿ ನಗರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬ್ರಹ್ಮಾನಂದ ಕಡ್ಲಿಬುಡ್ಡಿ ಹಾಗೂ ಹಣ್ಣಿಕೇರಿ ಶಾಲೆಯ ಪ್ರಧಾನ ಗುರುಗಳಾಗಿ ಪದೋನ್ನತಿ ಹೊಂದಿದ ಮಹಾಂತೇಶ ಪಾಟೀಲ ಅವರು ಗ್ರಾಮದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ತಮ್ಮ ಶಾಲೆಯಲ್ಲಿನ ಸುಧೀರ್ಘ ಸೇವೆಯಲ್ಲಿ ಮಕ್ಕಳ ಪ್ರೀತಿ ಪಾಲಕರ ವಿಶ್ವಾಸ ಸಹೋದ್ಯೊಗಿಗಳ ಸಹಕಾರ ಪ್ರಧಾನ ಗುರುಗಳ ಮಾರ್ಗದರ್ಶನ, ಗ್ರಾಮದ ಜನರ ಪ್ರೀತಿ  ಮರೆಯಲಾರದ್ದು ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗೇಶ ಮಾಳನ್ನವರ ಮಾತನಾಡಿ ನಾವು ನಮ್ಮ ಸೇವೆಯ ಕ್ಷೇತ್ರವನ್ನು ಪ್ರೀತಿಸಿ ವೃತ್ತಿಯನ್ನು ಗೌರವಿಸುವ ಕೆಲಸವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಪೋಷಕರು ಪ್ರತಿಯೊಬ್ಬ ನಾಗರೀಕರು ಮಾಡಿದಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದರು. 

      ಸಮಾರಂಭದ ವೇದಿಕೆಯಲ್ಲಿ ಹಿರಿಯರಾದ ದೇಮನಗೌಡ ಶೀಲವಂತರ, ಕಲ್ಲಪ್ಪ ಏಣಗಿ, ಎಸ್‌.ಡಿ.ಎಮ್‌.ಸಿ ಉಪಾಧ್ಯಕ್ಷೆ ಗೀತಾ ಚಂದರಗಿ ಸದಸ್ಯರಾದ ನಿಂಗಪ್ಪ ಅಳಗೋಡಿ, ರವಿ ಬಡಿಗೇರ, ಮಲ್ಲಪ್ಪ ಕಾಂಬಳೆ, ನಿವೃತ್ತ ಪ್ರಾಚಾರ್ಯರಾದ ಮಹಾಂತೇಶ ಇಂಗಳಗಿ, ಸುವರ್ಣಾ ಅಂಗಡಿ, ಶಂಕರ ಯಳ್ಳೂರ, ಆನಂದ ಬಡಿಗೇರ, ಬಸವರಾಜ ಪತ್ತಾರ, ಮಂಜನಾಥ ಬೈಲಪ್ಪನವರ, ಎಸ್‌.ಎಮ್‌.ಕೊಳ್ಳಿ, ಸುನಿತಾ ಪತ್ತಾರ, ಮೊಬಾಸಿರಿ ಮುಲ್ಲಾನವರ, ಮಂಜುಳಾ ಕರವಿನಕೊಪ್ಪ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಪೋಷಕರು ಮುಂತಾದವರು ಉಪಸ್ಥಿತರಿದ್ದರು.  ಒಂಬತ್ತನೇಯ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಸಿದ್ದಯ್ಯಾ ಹಿರೇಮಠ ನಿರೂಪಿಸಿದರು. ಶಿಕ್ಷಕ ರವೀಂದ್ರಕುಮಾರ ಹಾದಿಮನಿ ಸ್ವಾಗತಿಸಿದರು. ಸೃಷ್ಠಿ ಯಲಿಗಾರ ವಂದಿಸಿದರು.