ಇಲಿ ಹಿಕ್ಕಿ ಶಂಕೆ: ಬಿಸಿಯೂಟ ಸೇವಿಸಿ 26ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು, ಆಸ್ಪತ್ರೆಗೆ ಭೇಟಿ

ಇಲಿ ಹಿಕ್ಕಿ ಶಂಕೆ: ಬಿಸಿಯೂಟ ಸೇವಿಸಿ 26ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು, ಆಸ್ಪತ್ರೆಗೆ ಭೇಟಿ Rat poisoning suspected: More than 26 children fall ill after eating hot food, admitted to hospital,

                         ಮುಂಡಗೋಡ 29 :ತಾಲೂಕಿನಲ್ಲಿಯೇ ಅತ್ಯಧೀಕ ವಿದ್ಯಾರ್ಥಿಗಳನ್ನು ಹೊಂದಿರುವಂತ ಪಟ್ಟಣದ  ಶಾಸಕರ ಸರ್ಕಾರಿ  ಮಾದರಿ ಶಾಲೆಯಲ್ಲಿ  ಶುಕ್ರವಾರ  ಮಧ್ಯಾಹ್ನದ  ಬಿಸಿಯೂಟ  ಮಾಡಿದ ಶಾಲಾ ವಿದ್ಯಾರ್ಥಿಗಳಲ್ಲಿ ಸುಮಾರು 26 ವಿದ್ಯಾರ್ಥಿಗಳು ವಾಂತಿ ಮಾಡಿ ಅಸ್ವಸ್ಥಗೊಂಡು ತಾಲೂಕಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗುತ್ತಿದ್ದಂತೆ ಪಟ್ಟಣದ ತುಂಬೆಲ್ಲಾ ಮಾದರಿ ಶಾಲೆಯಲ್ಲಿ  ಊಟಮಾಡಿದ ವಿದ್ಯಾರ್ಥಿಗಳಿಗೆ  ಹೀಗಾಗಿದೆ ಹಾಗಾಗಿದೆ ಎಂದು ಪೂಖಾಂ ಪೂಖ ಸುದ್ದಿ ಹರಡುತ್ತಿದ್ದಂತೆ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು  ಆತಂಕಗೊಂಡು ಶಾಲೆಗೆ ದೌಡಾಯಿಸಿದ್ದಾರೆ.

                      ಶಾಲಾ ಶಿಕ್ಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಬಿಸಿಯೂಟದ ಸಾಂಬರನಲ್ಲಿ ಇಲಿ ಹಿಕ್ಕಿ ಬಿದ್ದಿದೆ ಎಂದು ಹೇಳಲಾಗುತ್ತಿದ್ದು ಅದನ್ನು ಊಟಮಾಡಿದ  ಶಾಲಾ ವಿದ್ಯಾರ್ಥಿಗಳಲ್ಲಿ  26 ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಶಿಕ್ಷಕ ವಿನೋಧ ನಾಯಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಶಾಲಾ ಮಕ್ಕಳ ಆರೋಗದ ಸ್ಥಿತಿಗತಿ ನೋಡಲು ಆಸ್ಪತ್ರೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಇಲಿ ಹಿಕ್ಕಿಯ ಶಂಕೆ ಮತ್ತು ಪೋಷಕರು ಆಕ್ರೋಶ: ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ 26ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥರಾಗಿದ್ದಾರೆ.ಊಟದಲ್ಲಿ ಇಲಿ ಹಿಕ್ಕಿ ಬಿದ್ದಿರುವ ಕುರಿತು ತೀವ್ರ ಶಂಕೆ ವ್ಯಕ್ತವಾಗಿದ್ದು, ಘಟನೆಯಿಂದ ಪೋಷಕರು ಮತ್ತು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ! ತಾಲೂಕಾ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ  ಪತ್ರಕರ್ತರ ಜೊತೆ ಮಾತಾಡುತ್ತಾ  ಮಕ್ಕಳ ಆರೋಗ್ಯ ವಿಚಾರಿಸಿ  ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.  ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಕ್ಕಳ ಜೀವಕ್ಕೆ ಯಾವುದೇ ತೊಂದರೆಯಿಲ್ಲಾ. ಶಾಲೆಯಲ್ಲಿ ಮಾಡಿರುವ ಅಡಿಗೆ ಸ್ಯಾಂಪಲ್ ಹಾಗೂ ದಿನಸಿಗಳ ಸ್ಯಾಂಪಲ್ ಅದನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಸುಮಾರು750 ವಿದ್ಯಾರ್ಥಿಗಳು ಬಿಸಿಯೂಟವನ್ನು ಸೇವಿಸಿದ್ದಾರೆ.

                   ಸೇವಿಸಿದವರೆಗೆಲ್ಲಾ ವಾಂತಿಯಾಗಬೇಕಾಗಿತ್ತು ಆದರೂ ನಾವು ಊಟ ಹಾಗೂ ದಿನಸಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದನಂತರ ನಿಖರವಾದ ಸಂಗತಿ ತಿಳಿಯಲಿದೆ ಎಂದರು. ಮಾದರಿ ಶಾಲೆಯ ಮುಖ್ಯಶಿಕ್ಷಕ ಹೇಳಿದ್ದೇನು : ನಮ್ಮ ಶಾಲೆಯಿಂದ ಬಿಸಿಯೂಟವನ್ನು ಆಝಾದ ಶಾಲೆಗೆ ಕಳಿಸಿಕೊಡುತ್ತೇವೆ ಇಂದು ಆಝಾದ ಶಾಲೆಯ ಸುಮಾರು 235 ವಿದ್ಯಾರ್ಥಿಗಳು ಆಹಾರ ಸೇವಿಸಿದ್ದಾರೆ  ಹಾಗೂ ನಮ್ಮ ಶಾಲೆಯಲ್ಲಿ ಎಲ್‌.ಕೆ.ಜಿ ಹಾಗೂ ಯುಕೆಜಿ ಮಕ್ಕಳು ಬಿಸಿಯೂಟ ಸೇವಿಸಿದ್ದಾರೆ ಅವರಿಗೇನೂ ಆರೋಗ್ಯ ಸಮಸ್ಯ ಕಂಡು ಬಂದಿಲ್ಲಾ. ಅಧಿಕಾರಿಗಳು ಮತ್ತು ಶಾಸಕರು ಭೇಟಿ : ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಸುದ್ದಿ ತಿಳಿದು ಶಾಸಕ ಶಿವರಾಮ ಹೆಬ್ಬಾರ, ಶಿರಸಿ ಉಪವಿಭಾಗಧಿಕಾರಿ ಕಾವ್ಯಾರಾಣಿ, ತಹಶೀಲ್ದಾರ  ಶಂಕರ ಗೌಡಿ, ತಾ.ಪಂ ಕಾ.ನಿ ಅಧಿಕಾರಿ ಟಿ.ವಾಯ್‌.ದಾಸನಕೊಪ್ಪ ಮುಂತಾದ ಅಧಿಕಾರಿಗಳು ಆಸ್ಪತ್ರೆಗೆ ಭೇಟೀನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.