ರಾಣಿ ರುದ್ರಮ್ಮ ಮುಖ್ಯ ವೇದಿಕೆಯಲಿ ತಲ್ಲೂರಿನ ಸ್ವಾತಂತ್ರ್ಯ ಯೋಧರ ಯಶೋಗಾಥೆ
Rani Rudramma on the main stage, the success story of the freedom fighters of Tallur
ವರದಿ ಈರಣ್ಣಾ ಹುಲ್ಲೂರ, ಯರಗಟ್ಟಿ
ಯರಗಟ್ಟಿ, 17 : ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಈ ಐತಿಹಾಸಿಕ ಸಂದರ್ಭದಲ್ಲಿ, ರಾಣಿ ರುದ್ರಮ್ಮ ಮುಖ್ಯ ವೇದಿಕೆಯಲ್ಲಿ ತಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಚಿಂತನಗೋಷ್ಠಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇತಿಹಾಸವೆಂದರೆ ಕೇವಲ ದಿನಾಂಕಗಳ ಪಟ್ಟಿ ಅಲ್ಲ; ಅದು ರಕ್ತದಲ್ಲಿ ಹರಿದ ದೇಶಭಕ್ತಿ, ಹೃದಯದಲ್ಲಿ ಹೊತ್ತ ತ್ಯಾಗ, ಕಣ್ಣಲ್ಲಿ ಕಂಗೊಳಿಸಿದ ಸ್ವಾತಂತ್ರ್ಯದ ಕನಸಿನ ಜೀವಂತ ಸಾಕ್ಷಿ.
ತಲ್ಲೂರಿನ ಮಣ್ಣಿನಲ್ಲಿ ಹುಟ್ಟಿ, ರಾಷ್ಟ್ರೇ್ರಮದ ಜ್ವಾಲೆಯನ್ನು ಹೊತ್ತಿ ಉರಿಸಿದ ಅನೇಕ ವೀರಪುತ್ರರಲ್ಲಿ ಪ್ರಮುಖರು ರಾಯನಗೌಡ ಲಿಂಗನಗೌಡ ಪಾಟೀಲ. ಅವರೊಂದಿಗೆ ಹೆಜ್ಜೆ ಹಾಕಿದ ದಿವಂಗತ *ಕುಬೇಂದ್ರ್ಪ ಬಾಳಪ್ಪ ಪೂಜೇರ* ಹಾಗೂ ಇತರ ಹೋರಾಟಗಾರರ ಸಾಹಸಗಾಥೆ ತಲ್ಲೂರಿನ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಲಿಖಿತಗೊಳಿಸಿದೆ.
1. ರಕ್ತದಲ್ಲಿ ದೇಶಭಕ್ತಿ ಹಿ ಕುಬೇಂದ್ರಪ್ಪ ಪೂಜೇರರ ಸಾಹಸಗಾಥೆ
ತಲ್ಲೂರಿನ ಹೆಮ್ಮೆಯ ಸ್ವಾತಂತ್ರ್ಯ ಯೋಧ ದಿವಂಗತ *ಕುಬೇಂದ್ರ್ಪ ಬಾಳಪ್ಪ ಪೂಜೇರರು* ಕೇವಲ ಹೋರಾಟಗಾರರಲ್ಲ; ಅವರು ಗ್ರಾಮದೇವತೆಯ ಅರ್ಚಕರಾಗಿಯೂ ಸೇವೆ ಸಲ್ಲಿಸಿದ ಧರ್ಮನಿಷ್ಠ ವ್ಯಕ್ತಿ. 25ನೇ ವಯಸ್ಸಿನಲ್ಲಿ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟರು.
15-10-1942 ರಂದು ಬ್ರಿಟಿಷರ ಕೇಂದ್ರ ಕಚೇರಿ ಇದ್ದ ಸಂಪಗಾವ ಗ್ರಾಮದಲ್ಲಿ ದಾಖಲೆಗಳನ್ನು ನಾಶಮಾಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಯಿತು. ಬೆಳಗಾವಿಯ ಹಿಂಡಲಗ ಜೈಲು, ಬಳ್ಳಾರಿ ಜೈಲು ಹಾಗೂ ನಂತರ ಮಹಾರಾಷ್ಟ್ರದ ಯರವಾಡಾ ಕೇಂದ್ರ ಕಾರಾಗೃಹದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಿದರು.
03-03-1944 ರಂದು ಹಲವು ಶರತ್ತುಗಳನ್ನು ವಿಧಿಸಿ ಬಿಡುಗಡೆಗೊಳಿಸಲಾಯಿತು. ಶರತ್ತುಗಳನ್ನು ಉಲ್ಲಂಘಿಸಿದರೆ ರೂ. 50 ದಂಡ ಹಾಗೂ ನಾಲ್ಕು ತಿಂಗಳ ಕಠಿಣ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ನೀಡಲಾಯಿತು.
ಕುಬೇಂದ್ರ್ಪನವರ ಹೋರಾಟಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರ ತಲ್ಲೂರಿನಲ್ಲಿ ಕುಡಿಯುವ ನೀರಿನ ಬಾವಿಗಳಿಗೆ ಕಾವಲು ಹಾಕಿ ಮೂರು ವರ್ಷಗಳ ಕಾಲ ನೀರು ಮುಟ್ಟದಂತೆ ನಿಬಂರ್ಧ ಹೇರಿತು. ತೋರಣಗಟ್ಟಿ, ಕಡಕೋಳ ಗ್ರಾಮಗಳಿಂದ ಮಣ್ಣಿನ ಮಡಕೆಗಳಲ್ಲಿ ನೀರು ತಂದು ಬದುಕು ಸಾಗಿಸಿದ ಘಟನಾವಳಿಗಳು ತಲ್ಲೂರಿನ ತ್ಯಾಗದ ಸಾಕ್ಷಿಗಳಾಗಿವೆ.
1972ರಲ್ಲಿ, ಸ್ವಾತಂತ್ರ್ಯದ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾರತ ಸರ್ಕಾರವು ಅವರ ದೇಶಸೇವೆಯನ್ನು ಗುರುತಿಸಿ ತಾಮ್ರಪತ್ರ ನೀಡಿ ಗೌರವಿಸಿತು.
2. ತಲ್ಲೂರಿನ ಇತರೆ ಧೀರರು
ಕುಬೇಂದ್ರಪ್ಪನವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇನ್ನಿತರ ತಲ್ಲೂರಿನ ವೀರರುಶ್ರಿ
ಶ್ರೀ ಬಸಲಿಂಗಪ್ಪ ಸಾಲಿ, ಶ್ರೀ ಬಸಪ್ಪ ಉಪ್ಪಾರ ಶ್ರೀ ಜಂಗ್ಲಿಸಾಬ ಜಂಗ್ಲೆಪ್ಪನವರ, ಶ್ರೀ ಬಸಪ್ಪ ಬೆನಕಟ್ಟಿ, ಶ್ರೀ ನಿಂಗಪ್ಪ ಶಿವಪೂಜಿ
ಇವರುಗಳೆಲ್ಲರೂ ಸ್ವಯಂಪ್ರೇರಣೆಯಿಂದ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದರು. ಹಿಂಡಲಗಾ ಮತ್ತು ಬಳ್ಳಾರಿ ಜೈಲುಗಳ ಗೋಡೆಗಳು ಅವರ ತ್ಯಾಗದ ಸಾಕ್ಷಿಗಳಾಗಿವೆ,
ತಲ್ಲೂರಿನ ಒಂಬತ್ತು ಧೀರಕುಡಿಗಳು ತಮ್ಮ ಜೀವನವನ್ನು ಸ್ವಾತಂತ್ರ್ಯದ ಕನಸಿಗೆ ಅರ್ಿಸಿದರು. ಅವರು ಅನುಭವಿಸಿದ ಕಷ್ಟಗಳು, ತ್ಯಾಗಗಳು ಇಂದಿನ ಪೀಳಿಗೆಗೆ ದೀಪಸ್ತಂಭ.
ಭಾರತಾಂಬೆಯ ಕೈಗಳಲ್ಲಿದ್ದ ಸಂಕೋಲೆಗಳನ್ನು ಕಳಚಲು ತಲ್ಲೂರಿನ ಪುತ್ರರು ತ್ಯಾಗಬಲಿದಾನ ಮಾಡಿದ ಗಾಥೆ ಇತಿಹಾಸದ ಸುವರ್ಣಪುಟಗಳಲ್ಲಿ ಶಾಶ್ವತ.
ತಲ್ಲೂರಿನ ಸ್ವಾತಂತ್ರ್ಯ ಯೋಧರ ಪರವಾಗಿ ಯರಗಟ್ಟಿ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾರ್ದಿಕ ಶುಭಾಶಯಗಳು.
ತಲ್ಲೂರಿನ ವೀರರು ಹಿ ನಮ್ಮ ಹೆಮ್ಮೆ, ನಮ್ಮ ಗೌರವ, ನಮ್ಮ ಇತಿಹಾಸ. ಕವನ ರಚಿಸಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 