ರಾಣೇಬೆನ್ನೂರು ಕೋರಂ ಕೊರತೆ: ನಗರಸಭೆ ಸಭೆ
Ranebennur Municipal Council meeting: Quorum lacking
ರಾಣೇಬೆನ್ನೂರು ಕೋರಂ ಕೊರತೆ: ನಗರಸಭೆ ಸಭೆ
ರಾಣಿಬೆನ್ನೂರ: 20 ಅಂದಾಜು 25 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳಿಗೆ ಮಂಜೂರಾತಿಗಾಗಿ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಶನಿವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಬೆಳಗ್ಗೆ 11ಕ್ಕೆ ಸಭೆ ನಿಗದಿಪಡಿಸಲಾಗಿದ್ದರೂ ಸದಸ್ಯರ ಬರುವಿಕೆಯ ನೀರೀಕ್ಷೆಯಲ್ಲಿ 11.30ಕ್ಕೆ ಸಭೆಯನ್ನು ಪ್ರಾರಂಭಿಸಲಾಯಿತು. ಆಗ ಆಡಳಿತ ಕಾಂಗ್ರೆಸ್ ಪಕ್ಷದ 9 ಸದಸ್ಯರ ಪೈಕಿ 8 ಸದಸ್ಯರು (ಅಧ್ಯಕ್ಷೆ ಸೇರಿದಂತೆ) ಹಾಗೂ 4 ನಾಮಕರಣ ಸದಸ್ಯರು ಹಾಜರಿದ್ದರು. ನಗರಸಭೆಯಲ್ಲಿ ಒಟ್ಟು35 ಸದಸ್ಯರಿದ್ದು , ಕೋರಂ ಭರ್ತಿಗೆ 13 ಸದಸ್ಯರ ಹಾಜರಾತಿ ಅಗತ್ಯವಿತ್ತು. ಆದರೆ ಸಭೆಯಲ್ಲಿ ಕೇವಲ 8 ಸದಸ್ಯರು ಮಾತ್ರ ಹಾಜರಿದ್ದರು. 12 ಘಂಟೆವರೆಗೂ ಕಾಯ್ದರೂ ಕೋರಂ ಭರ್ತಿಯಾಗದ ಕಾರಣ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಸಭೆಯನ್ನು ಒಂದು ಗಂಟೆ ಮುಂದೂಡಿದರು. ಕೋರಂ ಅಭಾವದ ಕಾರಣ ಮುಂದೂಡಲಾಗಿದ್ದ ಸಭೆಯನ್ನು ಎರಡನೇ ಬಾರಿಗೆ ಮಧ್ಯಾಹ್ನ 1.20ಕ್ಕೆ ಪ್ರಾರಂಭಿಸಲಾಯಿತು. ಆಗಲೂ ಕೂಡ ಕೋರಂ ಭರ್ತಿಯಾಗಲಿಲ್ಲ. ಆಗ 7 ಸದಸ್ಯರುಗಳು ಹಾಜರಿದ್ದ ಕಾರಣ ಸಭೆ ಮುಂದೂಡಲಾಯಿತು.ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ 27ಚುನಾಯಿತ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಅನಿವಾರ್ಯವಾಗಿ ಅಧ್ಯಕ್ಷರು ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಪೌರಾಯುಕ್ತ ಎಫ್ ಐ ಇಂಗಳಗಿ ಇದ್ದರು.ಸಭೆ ಮುಂದೂಡಿಕೆಯಾದ ನಂತರ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಳ್ಳಿ ಮತ್ತು ಆಡಳಿತ ಪಕ್ಷದ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಸಭೆಯಲ್ಲಿ ನಗರದ ಅಭಿವೃದ್ಧಿ ಹಾಗೂ ಕೆಲವು ಪ್ರಮುಖ ವೃತ್ತಗಳಿಗೆ ಮಹಾನ್ ನಾಯಕರುಗಳ ಹೆಸರಿಡುವ ಕುರಿತು ನಿರ್ಣಯ ಕೈಗೊಳ್ಳುವ ಕುರಿತು ಅಜೆಂಡಾ ರೂಪಿಸಲಾಗಿತ್ತು. ಈಗಿರುವ ಬಿಜೆಪಿ ಕಾರ್ಯಾಲಯ ಕಾಂಗ್ರೆಸ್ ಗೆ ಸೇರಿದ್ದು ಎಂಬ ವಿಷಯ ನ್ಯಾಯಾಲಯದಲ್ಲಿದ್ದು, ಈ ಕುರಿತು ಅನೇಕ ವದಂತಿಗಳು ಹರಡುತ್ತಿದ್ದು, ಅದರ ಬಗ್ಗೆ ಮಾತನಾಡುವುದಿಲ್ಲ. ನಮಗೆ ಇದುವರೆಗೂ ಸಹಕಾರ ನೀಡಿದ್ದ ಬಿಜೆಪಿ ಸದಸ್ಯರುಗಳು ಇಂದಿನ ಸಭೆಗೆ ಗೈರು ಹಾಜರಾಗಿ ಮೋಸ ಮಾಡಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿ ಸದಸ್ಯರಿಗೆ ನಗರದ ಅಭಿವೃದ್ಧಿಗೆ ಇಷ್ಟವಿಲ್ಲದಂತೆ ಕಾಣುತ್ತದೆ ಎಂದು ಆರೋಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 