ರಾಣೆಬೆನ್ನೂರು ಸರ್ಕಾರಿ ಶಾಲಾ ನಂ: 6 ಕಲಿಕಾ ಹಬ್ಬ : ಸಂಸ್ಕೃತಿ ಪ್ರತಿಬಿಂಬಿಸಿದ ವಿದ್ಯಾರ್ಥಿಗಳು

ರಾಣೆಬೆನ್ನೂರು ಸರ್ಕಾರಿ ಶಾಲಾ ನಂ: 6  ಕಲಿಕಾ ಹಬ್ಬ : ಸಂಸ್ಕೃತಿ ಪ್ರತಿಬಿಂಬಿಸಿದ ವಿದ್ಯಾರ್ಥಿಗಳು  Ranebennur Government School No. 6 Learning Festival: Students reflect culture

           ರಾಣೆಬೆನ್ನೂರು  17: ಇಂದಿನ ಮಕ್ಕಳಲ್ಲಿ ವೈಜ್ಞಾನಿಕವಾಗಿ ಅಗಾಧವಾದ ಪ್ರತಿಭೆ ಇದೆ ಅವುಗಳನ್ನು ಅವರಲ್ಲಿ ವೈಚಾರಿಕವಾಗಿ ಪ್ರತಿಬಿಂಬಿಸಿ ಅವರಲ್ಲಿರುವ ನೈಜತೆಯನ್ನು ಹೊರ ತರುವ ಪ್ರಯತ್ನ ನಡೆಯಬೇಕಾದ ನಡೆಯಬೇಕಾದ ಇಂದಿನ ಅಗತ್ಯವಿದೆ ಎಂದು ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಹೇಳಿದರು. ಅವರು ಇಲ್ಲಿನ ಗೌರಿಶಂಕರ್ ನಗರದ ಸರ್ಕಾರಿ ಶಾಲೆ ನಂ: 6 ರಲ್ಲಿ, ಸಮೂಹ ಸಂಪನ್ಮೂಲ ಕೇಂದ್ರ  ಆಯೋಜಿಸಿದ್ದ, ಕ್ಲಸ್ಟರ್ ಮಟ್ಟದ,ಕಲಿಕಾ ಹಬ್ಬ -2026 ಮಕ್ಕಳ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಕುಣಿಯಬೇಕು, ಜೊತೆಗೆ ನಲಿಯಬೇಕು. ಕುಣಿ ಮತ್ತು ನಲಿಯುವುದರ ಮೂಲಕ, ಅವರಲ್ಲಿವ ಪ್ರಬುದ್ಧತೆ ಮತ್ತು ಶಿಕ್ಷಣ ಜೊತೆಗೆ ಶಿಕ್ಷಣವನ್ನು ಪ್ರಬುದ್ಧವಾಗಿ ಪೂರೈಸಲು ಇಂತಹ ಕಲಿಕಾ ಹಬ್ಬವು ತುಂಬಾ ಸಹಕಾರಿಯಾಗಲಿದೆ ಎಂದರು.    

           ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಯಾವ ಮಟ್ಟಕ್ಕಾದರೂ ತೆಗೆದುಕೊಂಡು ಹೋಗಬಲ್ಲರು ಎನ್ನುವುದಕ್ಕೆ ಇಂದು ನಡೆಯುತ್ತಿರುವ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಾಕ್ಷಿಯಾಗಿದೆ ಎಂದ ಅವರು ಸಂಪನ್ಮೂಲ ವ್ಯಕ್ತಿಗಳ ಮತ್ತು ಶಿಕ್ಷಕರ ಕಾರ್ಯವನ್ನು ಪ್ರಶಂಶಿಸಿ ಅವರು ಮಾತನಾಡಿದರು. ಕಲಿಕಾ ಹಬ್ಬದಲ್ಲಿ ಮಕ್ಕಳೇ ತಯಾರಿಸಿದ  ಅಕ್ಷರ ಯಾತ್ರೆ ಕಲಿಕಾ ಟೋಪಿ,ಕಲಿಕಾ ಮಾಲೆ,ಅಕ್ಷರ ಅಂಬ್ರೆಲಾ,ಕಲಿಕಾ ಸ್ವಫೋಟೋ ಮೂಲೆ,ಮಕ್ಕಳ ಡ್ರಮ್ ಬ್ಯಾಂಡ್  ಮತ್ತು ಅಕ್ಷರದವ್ವ ಮತ್ತಿತರೆ ಕರಕುಶಲ ವಸ್ತುಗಳು ಸಾರ್ವಜನಿಕರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿ ಮಂಜು ನಾಯಕ, ಬಿ. ಆರಿ​‍್ಸ ಗಳಾದ ಎಸ್‌. ಎಂ.ಬನ್ನಿಕೋಡ, ಕೆ.ಎಸ್‌. ಮಾಗನೂರ, ಬಿ. ಆರ್‌. ಪಿ,ಗಂಗಪ್ಪ ನಾಯಕ,ಶ್ರೀಮತಿ ಎಸ್‌. ಎಸ್‌.  ಹಾದಿಮನಿ,  ನಾಗರಾಜ, ಬಿ.ಆರ್‌. ಕಬಾಡಿ, ಬಸವರಾಜ ಕೂಸನೂರ, ಮಾಜಿ ಸಿಆರಿ​‍್ಪ ರಾಜೇಂದ್ರ, ಶ್ರೀಮತಿ ಗುರುಬಸಮ್ಮ ಸುರಳಿಕೇರಿಮಠ, ಸೇರಿದಂತೆ ಇಲಾಖೆಯ ಸಿಬ್ಬಂದಿ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು , ಸಹ ಶಿಕ್ಷಕರು, ಕ್ಲಸ್ಟರ್ ವ್ಯಾಪ್ತಿಯ 5 ಶಾಲೆಗಳ ಮುಖ್ಯೋಪಾಧ್ಯಾಯರು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಗೀತ ಸಂಗಡಿಗರು ಪ್ರಾರ್ಥಿಸಿದರು ಮುಖ್ಯ ಶಿಕ್ಷಕಿ ಕೆ.ಎಸ್‌. ಗುಡಿಗುಡಿ ಸ್ವಾಗತಿಸಿದರು.ಉಸ್ತುವಾರಿ ಅಧಿಕಾರಿ ಆರ್‌. ವಿ. ಪಾಟೀಲ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಧಕ ಗಣ್ಯರ  ಅಭಿನಂದನಾ ಸನ್ಮಾನ ನಡೆಯಿತು. ಸಾರ್ವಜನಿಕವಾಗಿ ನಡೆದ ಮೆರವಣಿಗೆಯಲ್ಲಿ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿ ಚಪ್ಪಾಳೆ ತಟ್ಟುತ್ತಿರುವುದು ಸಾಮಾನ್ಯವಾಗಿತ್ತು.