ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶ ರಂಜಾನ ಉಪವಾಸ : ಶಾಸಕ ವಿಶ್ವಾಸ ವೈದೈ
Ramzan fast is a message of brotherhood and harmony: MLA Vishwas Vaidai
ಲೋಕದರ್ಶನ ವರದಿ
ಯರಗಟ್ಟಿ 16: ಮುಸ್ಲಿಂ ಸಮುದಾಯದ ವತಿಯಿಂದ ಪಟ್ಟಣದ ಅಕ್ಸಾ ಮಸೀದಿಯದ ಸಭಾಂಗಣದಲ್ಲಿ ರವಿವಾರ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಮುಸ್ಲಿಂ ಸಮಾಜದ ಮುಖಂಡರಾದ ಇಮ್ತಿಯಾಜ ಖಾದ್ರಿ ಮಾತನಾಡಿ, ಇಂದು ಜಗತ್ತು ನೆನಪಿಟ್ಟುಕೊಳ್ಳುವ ಅತ್ಯಾಧುನಿಕ ಅವಿಷ್ಕಾರಗಳನ್ನು ಸಂಶೋಧಿಸಿದವರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಮನಃಶಾಂತಿಗಾಗಿ ಧರ್ಮದ ಪಾಲನೆ ಮೊರೆ ಹೋದರು. ಎಲ್ಲರೂ ತಮ್ಮ ಧರ್ಮ ಪಾಲನೆಯೊಂದಿಗೆ ಶಾಂತಿ ಸೌಹಾರ್ದಕ್ಕೆ ಮಹತ್ವ ನೀಡಬೇಕು ಎಂದರು. ಡಿ. ಕೆ. ರಫೀಕ ಮಾತನಾಡಿ, ನಾವೆಲ್ಲರೂ ದೇವರ ಮಕ್ಕಳು, ಜಾತಿ ಧರ್ಮಗಳ ಭೇದವು ನಮ್ಮನ್ನು ಒಡೆಯದಂತೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದರು. ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ, ಜಾಗತಿಕವಾಗಿ ಯುದ್ಧದ ಕಾರ್ಮೋಡ ಕವಿದಿದ್ದು, ಇನ್ನು ಮುಂದೆ ಜಗತ್ತಿನಲ್ಲಿ ಶಾಂತಿ ನೆಲೆಸುವಂತಾಗಲಿ ಎಂದರು.
‘ಸಮಾನತೆ ಸಾರಿದ ಸಂತ ಶಿಶುನಾಳ ಶರೀಫರ ಮಾತಿನಂತೆ ಎಲ್ಲಾ ಮತ ಧರ್ಮಗಳ ಜನರು ಇಂದು ಒಂದಾಗಿದ್ದೇವೆ. ಎಲ್ಲರಿಗೂ ಉಪವಾಸದ ತಿಂಗಳು ಶುಭವನ್ನುಂಟು ಮಾಡಲಿ’ ಎಂದು ಹೇಳಿದರು. ಮಾಜಿ ಪ. ಪಂ. ಸದಸ್ಯ ವಿಶಾಲಗೌಡ ಪಾಟೀಲ ಮಾತನಾಡಿ ಸರ್ವ ಧರ್ಮವನ್ನೂ ಒಗ್ಗೂಡಿಸಿ ಸೌಹಾರ್ದ ಸಾರುವ ನಿಟ್ಟಿನಲ್ಲಿ ಸೌಹಾರ್ದ ಇಪ್ತಾರ್ ಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಈ ವೇಳೆ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನಮಂತ ಹಾರುಗೊಪ್ಪ, ಸಲಿಂಬೇಗ ಜಮಾದಾರ, ವಿಠ್ಠಲಗೌಡ ದೇವರಡ್ಡಿ, ಮಹಾಂತೇಶ ಜಕಾತಿ, ರಮೇಶ ದೇವರಡ್ಡಿ, ಬಾಸ್ಕರ ಹಿರೇಮೆತ್ರಿ, ಸಂತೋಷ ಚನ್ನಮೇತ್ರಿ, ಶಿವಾನಂದ ಕರಿಗೊಣ್ಣವರ, ಸುರೇಶ ಭಜಂತ್ರಿ, ಪ್ರಕಾಶ ವಾಲಿ, ಉಮೇಶ ಮಾಗುಂಡನ್ನವರ, ರಾಜು ಬಿರ್ಜಿ, ವಿಠ್ಠಲ ಹಾರುಗೊಪ್ಪ, ಕಾಶೀಮಸಾಬ ಹೊರಟ್ಟಿ, ಮಲಿಕಸಾಬ ಬಾಗವಾನ, ಕೆ. ಎಫ್. ನದಾಫ, ಪಿರೋಜ ಖಾದ್ರಿ, ಹುಸೇನ ದಿಲಾವರನಾಯ್ಕ, ಕಾಶಿಮಅಲಿ ನದಾಫ, ನಜೀರ ನದಾಫ, ಇಮಾಮಸಾಬ ಹುಸೇನಾಯ್ಕರ ಸೇರಿದಂತೆ ಅನೇಕ ಹಿಂದೂ-ಮುಸ್ಲಿಂ ಬಾಂಧವರು ಇದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 