ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರಮೇಶ್ ಕಲ್ಯಾಣಿ ಸೇನೆಗೆ ನಿವೃತ್ತಿ ಹೇಳಿ ಗ್ರಾಮಕ್ಕೆ ಆಗಮನ
Ramesh Kalyani, who participated in Operation Sindoor, retires from the army and returns to his vill
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರಮೇಶ್ ಕಲ್ಯಾಣಿ ಸೇನೆಗೆ ನಿವೃತ್ತಿ ಹೇಳಿ ಗ್ರಾಮಕ್ಕೆ ಆಗಮನ
ಮಾಂಜರಿ, 04 : ಉಗ್ರಗಾಮಿಗಳು ರಾಕ್ಷಸರಿದ್ದಂತೆ. ಮಾನವೀಯತೆ ಶತೃಗಳಾಗಿರುವ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ಅತ್ಯಂತ ನೋವಿನ ಸಂಗತಿ. ಈ ಘಟನೆಯಿಂದ ಭಾರತೀ ಯರು, ಅನಿವಾಸಿ ಭಾರತೀಯರು, ವಿದೇಶಿಗರು ಕಣ್ಣೀರಿಟ್ಟಿದ್ದಾರೆ ಎಂದು ಅದಕ್ಕೆ ಪ್ರತ್ಯುತ್ತರ ನೀಡುತ್ತಿರುವಾಗ ನಮ್ಮ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಪಾಕ್ ಗೆ ತಕ್ಕ ಉತ್ತರ ನೀಡಿದೆ ಎಂದು ಓಂಕಾರ್ ಆಶ್ರಮದ ಪರಮಪೂಜ್ಯ ಶಿವಶಂಕರ್ ಸ್ವಾಮೀಜಿಗಳು ಹೇಳಿದರು
ಅವರು ಬುಧವಾರರಂದು ಸಮೀಪದ ಸೌದತ್ತಿ ಗ್ರಾಮದ ರಮೇಶ್ ಕಲ್ಯಾಣಿ ಇವರು 22 ವರ್ಷ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತ ಹೊಂದಿರುವ ಮತ್ತು ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಗ್ರಾಮಕ್ಕೆ ಬಂದಿದ ಸಂದರ್ಭದಲ್ಲಿ ಅವರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಸ್ವಾಮೀಜಿಗಳು ಮಾತನಾಡುತ್ತಿದ್ದರು
ನಮಗೆ ದೇಶವೇ ಮೊದಲು, ದೇಶವೇ ಆದ್ಯ, ನಮ್ಮ ಸೈನಿಕರು ಧೈರ್ಯ, ಪರಾಕ್ರಮಕ್ಕೆ ಹೆಸರುವಾಸಿ, ಪ್ರತಿಭೆ ಹಾಗೂ ಧೈರ್ಯದಲ್ಲಿ ಭಾರತವನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ಭಾರತೀಯ ಸೈನಿಕರ ಜೊತೆ ನಾವು ಸದಾ ಬೆನ್ನೆಲುಬಾಗಿ ನಿಲ್ಲಬೇಕು. ಅವರಿಗಾಗಿ ಪ್ರೋತ್ಸಾಹ ನೀಡಲು ಸದಾ ಬದ್ಧವಾಗಿರಬೇಕು ಎಂದು ಹೇಳಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಭಾಗಿಯಾಗಿ ಹಾಗೂ 22 ವರ್ಷಗಳ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ರಮೇಶ್ ಕಲ್ಯಾಣಿ ಇವರನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು ಈ ಕಾರ್ಯಕ್ರಮಕ್ಕೆ ರಾಯಬಾಗ್ ತಾಲೂಕ ಮಾಜಿ ಸೈನಿಕ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ್ ಕಮಲಾಕ್ಷಿ ಉಪಾಧ್ಯಕ್ಷರಾಗಿರುವ ಮಹಾದೇವ ಹೂಗಾರ್ ನಿವೃತ್ ಯೋಧರಾದ ಕಾಕಾ ಸಾಬ್ ದೇಸಾಯಿ ಶಾಮರಾವ್ ದೇಸಾಯಿ ಸೌದತ್ತಿ ಗ್ರಾಮದ ಹಾಲಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅಬಾಜಿ ಫೌಂಡೇಶನ್ ರಾಯಬಾಗನ ಎಲ್ಲ ಸದಸ್ಯರು ಗ್ರಾಮದ ಜೈ ಹನುಮಾನ್ ಯುವಕ ಸಂಘಟನೆಯ ಸದಸ್ಯರು ಮತ್ತು ಇನ್ನಿತರ ವಿವಿಧ ಸಹಕಾರಿ ಸಂಸ್ಥೆಯ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 