ರಾಮಣ್ಣ ಮೇಗಿಲಮನಿ ಕುಟುಂಬದವರಿಂದ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರಿಗೆ ಸನ್ಮಾನ

ರಾಮಣ್ಣ ಮೇಗಿಲಮನಿ ಕುಟುಂಬದವರಿಂದ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರಿಗೆ ಸನ್ಮಾನ Ramanna Megilamani's family felicitates B.B. Asuti, Chairman of Gadag District Guarantee Implementat

ಲೋಕದರ್ಶನ ವರದಿ 

ಗದಗ 18:- ಹಿರಿಯರನ್ನು ನೆನೆಯುವ ಅಗಲಿದ ಹಿರಿಯರ ಸವಿ ನೆನಪಿಗಾಗಿ ಅವಿಸ್ಮರಣೀಯ ಓತಣಕೂಟ ಹಾಗೂ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅವರ ಸಾಧನೆಗೆ ಒಂದು ಗೌರವವನ್ನು ವ್ಯಕ್ತಪಡಿಸುವ ಮೂಲಕ ಸೈಕ್ಷಣಿಕ, ಕ್ರೀಡಾ ಚಟುವಟಿಕೆ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದರನ್ನು ಪ್ರೋತ್ಸಾಹಿಸುವ ಅಗಲಿದ ಹಿರಿಯರಿಗೆ ನಮನವನ್ನು ಸಲ್ಲಿಸುವಂತಹ ವಿಶಿಷ್ಟ ಕಾರ್ಯಕ್ರಮವನ್ನು ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದ ಕಾಂಗ್ರೇಸ್ ಮುಖಂಡರು ಹಾಗೂ ಮುಂಡರಗಿ ತಾಲೂಕಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ರಾಮಣ್ಣ ಮೇಗಿಲಮನಿಯವರು ಇದೇ ದಿನಾಂಕ 18/04/2026 ರಂದು ಅತ್ತಿಕಟ್ಟಿ ಗ್ರಾಮದಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆ ಪ್ರಯುಕ್ತ ಕಾರ್ಯಕ್ರಮದ ಕೇಂದ್ರ ಬಿಂದುವಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರನ್ನು ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದ ರಾಮಣ್ಣ ಮೇಗಿಲಮನಿಯವರ ಕುಟುಂಬದವರ ವತಿಯಿಂದ ಅವಿಸ್ಮರಣೀಯ ನೆನಪಿನ ಕಾಣಿಕೆ, ಅರ​‍್ಿಸಿ, ಶಾಲು ಪೇಠಾ ತೋಡಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂಧರ್ಭದಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಖನಿಜ ನಿಗಮದ ಅಧ್ಯಕ್ಷರಾದ ಜಿ ಎಸ್ ಪಾಟೀಲ್, ಮಾಜೀ ಶಾಸಕರಾದ ಎಸ್ ಎಸ್ ಪಾಟೀಲ್, ಮುಂಡರಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗದಗ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕಾ ಸಮಿತಿಯ ಸದಸ್ಯರಾದ ಶ್ರೀಮತಿ ಸಾವಿತ್ರಿ ಹೂಗಾರ ಮುಂಡರಗಿ ತಾಲೂಕಾ ಗ್ಯಾರಂಟಿ ಯೋಜನೆಗಳ ಸದಸ್ಯರಾದ ಅನುಷ್ಠಾನ ಪ್ರಾಧಿಕಾರದ ಜೈಲಾನಸಾಬ್ ಕೆ ವಡ್ಡಟ್ಟಿ,ನಾಗರಾಜ ಟಿ ಸಜ್ಜನ, ವಿಶ್ವನಾಥ  ಪಾಟೀಲ್, ರಾಮಣ್ಣ ಮೇಗಿಲಮನಿ, ಮುತ್ತುರಾಜ್ ಮಾರುತಿ ಹೊಸಮನಿ, ಗಣೇಶ ರಾಠೋಡ್, ಗೀತಾ ಕೆ ನಾಡಗೌಡರ, ಕಾಶಪ್ಪ ಹೊನ್ನೂರ, ನಿಂಗಪ್ಪ ಎಮ್ ಮಜ್ಜಿಗೆ, ಸುರೇಶ ಮೇಗಿಲಮನಿ, ಶರಣಪ್ಪ ಮಲ್ಲಾಪುರ, ಉಮೇಶ ಕಲಾಲ್, ಭುವನೇಶ್ವರಿ ಕಲ್ಲಕುಟಿಗ, ಮಹೇಶಕುಮಾರ ದ್ರಾಕ್ಷಿ, ಗದಗ ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿಯ ಮಾಧ್ಯಮ ವಕ್ತಾರರಾದ ರಾಘವೇಂದ್ರ ಪಾಲನಕರ ಹಾಗೂ ಸಮಸ್ತ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.