ರಾಮಕೃಷ್ಣ ವಿವೇಕಾನಂದ ಆಶ್ರಮ ನವರಾತ್ರಿ ಉತ್ಸವ ಅರ್ಥಪೂರ್ಣವಾಗಿ ಆಚರಣೆ

ರಾಮಕೃಷ್ಣ ವಿವೇಕಾನಂದ ಆಶ್ರಮ ನವರಾತ್ರಿ ಉತ್ಸವ  ಅರ್ಥಪೂರ್ಣವಾಗಿ ಆಚರಣೆ Ramakrishna Vivekananda Ashram celebrates Navratri festival meaningfully

ಹುಬ್ಬಳ್ಳಿ   18:  ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣನಗರ ಹುಬ್ಬಳ್ಳಿ, ಶರನ್ನವರಾತ್ರಿ ಉತ್ಸವ 2025 ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಕಳೆದ 18 ವರ್ಷಗಳಿಂದ ಶರನ್ನವರಾತ್ರಿ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವುದು ತಮಗೆ ತಿಳಿದ ವಿಚಾರ. ಆಶ್ರಮ ಉತ್ಸವದಲ್ಲಿ ಪ್ರತಿದಿನ ಮುಂಜಾನೆ ಹೋಮ, ರುದ್ರಾಭಿಷೇಕ, ದೇವಿಮಹಾತ್ಮೆ ಪ್ರವಚನ ಕಾರ್ಯಕ್ರಮ, ಸಂಜೆ ಶ್ರೀಲಲಿತಕುಂಕುಮಾರ್ಚನೆ, ಮತ್ತು ಅಂತರರಾಷ್ಟ್ರೀಯ ಕಲಾವಿದರಿಂದ ಸಂಗೀತ, ನೃತ್ಯ, ದೊಡ್ಡಾಟ, ಜನಪದ ಸಂಗೀತ, ನೃತ್ಯ ರೂಪಕ, ನಾಟಕ, ಹೊಳೆಆಲೂರಿನ ಜ್ಞಾನಸಿಂಧು ಅಂಧರ ಶಾಲೆಯ ವಿದ್ಯಾರ್ಥಗಳಿಂದ ಮಲ್ಲಕಂಬ ಹಾಗೂ ಸ್ಥಳೀಯ ಬಾಲ ಯುವ ಪ್ರತಿಭೆಗಳಿಗೆ ಕಲಾವಿದರಿಗೆ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 ಆಶ್ರಮವು ಯುವಕರಿಗಾಗಿ ಹಲವಾರು ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಸದ್ಯದ ಆಶ್ರಮದ ಕಟ್ಟಡ 30 ವರ್ಷಕ್ಕೂ ಹಳೆಯ ಕಟ್ಟಡವಾಗಿದ್ದು ನೂತನ ಪ್ರಾರ್ಥನಾ ಮಂದಿರ, ಸಾಧುನಿವಾಸ, ಅತಿಥಿ ಗೃಹ, ಗ್ರಂಥಾಲಯ, ಪುಸ್ತಕ ಭಂಡಾರ, ವಿವೇಕಾನಂದರ ಜೀವನ ದರ್ಶನದ ಮ್ಯೂಸಿಯಂ ನಿರ್ಮಿಸುವ ಯೋಜನೆ ಹೊಂದಿದ್ದು ಒಟ್ಟಾರೆ ನಿರ್ಮಾಣ ಕಾರ್ಯ ಶರನ್ನವರಾತ್ರಿ ನಂತರ ಪ್ರಾರಂಭವಾಗಲಿದೆ ಈ ಕಾರ್ಯಕ್ಕೂ ಭಕ್ತರು ಜನತೆ ತನು ಮನ ಧನದ ಮೂಲಕ ತಮ್ಮ ಸಹಾಯ ಸಹಕಾರ ನೀಡಿ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಈ ಮೂಲಕ ವಿನಂತಿ. ಆಶ್ರಮದ ಶಾಖಾ ಕೇಂದ್ರವಾದ ತಡಸನ ಕಮಲಾನಗರದ ಪಂಚವಟಿ ಕ್ಷೇತ್ರದಲ್ಲಿ ಈಗಾಗಲೇ 5000 ಚದುರ ಅಡಿ ವಿಸ್ತೀರ್ಣದ ಸುಸಜ್ಜಿತ ಗೋಶಾಲೆ ನಿರ್ಮಿಸಲಾಗಿದೆ ಸದ್ಯ 45 ಹಸುಗಳ ಪಾಲನೆ ಮಾಡಲಾಗುತ್ತಿದೆ ಎಂದು ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸ್ವಾಮಿ ತೇಜಸಾನಂದಜೀ ಮಹಾರಾಜ್ ತಿಳಿಸಿದರು.

ಶರನ್ನವರಾತ್ರಿ ಉತ್ಸವ ಪ್ರಯುಕ್ತ ಆಯೋಜಿಸಲಾದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಡಾ. ನಾಗಲಿಂಗ ಮುರಗಿ ವಿಸ್ತಾರವಾಗಿ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸ್ವಾಮಿ ತೇಜಸಾನಂದಜೀ ಮಹಾರಾಜ್, ಧರ್ಮದರ್ಶಿಗಳಾದ ಸಂಭಾಜಿ ಕಲಾಲ, ಬಸವರಾಜ ಬಿಳೆ ಅಂಗಡಿ, ದಯಾನಂದ ರಾವ್, ಡಾ. ನಾಗಲಿಂಗ ಮುರಗಿ ಉಪಸ್ಥಿತರಿದ್ದರು. ಟ,ಊಣಛಟ, ಕ: