ಹಿರೇಕೊಡಿ ಗ್ರಾಪಂ ಅಧ್ಯಕ್ಷರಾಗಿ ರಮಾದೇವಿ ಮುಕುಂದ ಅವಿರೋಧ ಆಯ್ಕೆ
Ramaadevi Mukunda was elected unopposed as Hirekodi Village President
ಚಿಕ್ಕೋಡಿ 02: ತಾಲೂಕಿನ ಹಿರೇಕೊಡಿ ಗ್ರಾಮ ಪಂಚಾಯತಿಗೆ ಎರಡನೆ ಅವಧಿಗೆ ಅಧ್ಯಕ್ಷ ಸ್ಥಾನದ ಚುನಾವಣೆ ಬುಧವಾರ ನಡೆಯಿತು. ಅಧ್ಯಕ್ಷರಾಗಿ ರಮಾದೇವಿ ಮುಕುಂದ ಅವಿರೋಧವಾಗಿ ಆಯ್ಕೆಯಾದರು.
30 ಸದಸ್ಯರನ್ನು ಹೊಂದಿರುವ ಹಿರೇಕೊಡಿ ಗ್ರಾಮ ಪಂಚಾಯತಿಯಲ್ಲಿ 19 ಜನ ಸದಸ್ಯರು ಒಂದು ಕಡೆಯಾದರೆ ಉಳಿದ 11 ಜನ ಮತ್ತೊಂದು ಬಣದಲ್ಲಿ ಗುರ್ತಿಸಿಕೊಂಡಿದ್ದರು. ಹೀಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ನೇತೃತ್ವದಲ್ಲಿ 19 ಜನ ಸದಸ್ಯರು ರಮಾದೇವಿ ಮುಕುಂದ ಅವರ ಜೊತೆ ಗುರ್ತಿಸಿಕೊಂಡಿದ್ದರಿಂದ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಬೃಹತ್ ವಿಜಯೋತ್ಸವ: ಗ್ರಾಮ ಪಂಚಾಯತಿಗೆ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಒಂದೇ ಒಂದು ನಾಮಪತ್ರ ಸಲ್ಲಿಕೆಯಾದ್ದರಿಂದ ರಮಾದೇವಿ ಆಯ್ಕೆಯಾಗುತ್ತಿದ್ದಂತೆ ಮಹಾವೀರ ಮೋಹಿತೆ ಬಣದ ಸದಸ್ಯರು ಮತ್ತು ಬೆಂಬಲಿಗರು ಗುಲಾಲ ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಧುರೀಣ ಗಣೇಶ ಮೋಹಿತೆ, ಶಂಕರ ಟೋಣ್ಣೆ ಸೇರಿದಂತೆ 19 ಜನ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 