ಕಾಳಗ ಸ್ಪರ್ಧೆಯಲ್ಲಿ ಗೆದ್ದ ಟಗರು ಮಧ್ಯರಾತ್ರಿ ಕಳ್ಳತನ
Ram midnight theft
ರಾಣೇಬೆನ್ನೂರು 23: ತಾಲೂಕಿನ ಹರನಗಿರಿ ಗ್ರಾಮದ ನಿಂಗಪ್ಪ ಛತ್ರದ ಎಂಬುವರ 50,000 ಮೌಲ್ಯದ ಎರಡು ವರ್ಷದ 4 ಹಲ್ಲಿನ ಟಗರು ಯಾರೋ ಕಿಡಿಗೇಡಿಗಳು ಮಧ್ಯರಾತ್ರಿಯಲ್ಲಿ ಕಳ್ಳತನ ಮಾಡಿದ್ದಾರೆ.
ಈ ಟಗರು ಮರಿಯು ವಿವಿಧ ಕಾಳಗ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿತ್ತು ಟಗರಿನ ಕಾಳಗದಲ್ಲಿ ಸ್ಪರ್ಧೆಗಿಳಿದರೆ ನೋಡುಗ ಪ್ರೇಕ್ಷಕರ ಸೀಳ್ಳೆ ಚಪ್ಪಾಳೆ ಮುಗಿಲು ಮುಟ್ಟುತ್ತಿತ್ತು ಅನೇಕ ತಾಲೂಕ ಮತ್ತು ಜಿಲ್ಲಾಮಟ್ಟದಲ್ಲಿ ಟಗರಿನ ಕಾಳಗದಲ್ಲಿ ಹೆಸರು ಮಾಡಿತ್ತು ಈ ಟಗರು ಮರಿಯನ್ನ ಮನೆ ಮಗನಂತೆ ಸಾಕಿದ್ದೆ ಪ್ರತಿದಿನ ಸ್ನಾನ ಮಾಡಿಸಿ ತಿಂಡಿ ತಿನಿಸಿ ತತ್ತಿ ಹಾಲು ಕುಡಿಸಿ ಸಾಕಿದ ಮರಿಯನ್ನು ಕಳ್ಳತನಮಾಡಿದ್ದಾರೆ ತಮ್ಮ ಅಳಲನ್ನು ಮಾಧ್ಯಮದವರೆದುರು ತೋಡಿಕೊಂಡಿದ್ದಾರೆ. ಟೆಗರು ಕಳೆದುಕೊಂಡ ನಮಗೆ ಮನೆ ಮಗನನ್ನ ಕಳೆದುಕೊಂಡಂತಾಗಿದೆ ಈ ಟೆಗರು ಮರಿಯಿಂದ ಉಪಜೀವನ ಸಾಗಿಸುತ್ತಿದ್ದೇ ಎನ್ನುತ್ತಾನೆನಿಂಗಪ್ಪ ಛತ್ರದ ಇಂದು ಮನೆಯಲ್ಲಿ ಟಗರಿಲ್ಲದೆ ಗೋಳಾಡುವಂತಾಗಿದೆ. ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹರನಗಿರಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು ನಂತರ ಅಂಬೇಡ್ಕರ್ ಅಭಿಮಾನಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಗ್ರಾಮದಲ್ಲಿ ದಲಿತ ಮುಖಂಡರ ಸಭೆ ನಡೆಸಿ ಅಂಬೇಡ್ಕರ್ ಭಾವಚಿತ್ರವಿರುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿದ್ದರು. ಸದರಿ ಸ್ಥಳದ ಮುಂಭಾಗದಲ್ಲಿ ಕುರಿ ಇದೀಗ ಕಳ್ಳತನವಾಗಿದೆ. ಪ್ರಕರಣದ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು ಸಹಿತ ಪೊಲೀಸರು ಸ್ಥಳಕ್ಕೆ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಕುರಿ ಕಳ್ಳತನ ಹೆಚ್ಚಾಗುತ್ತಿವೆ ಇದರಿಂದಾಗಿ ಕುರಿಗಾಯಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಆದ್ದರಿಂದ ಇನ್ನಾದರೂ ಪೊಲೀಸರು ಹರನಗಿರಿ ಗ್ರಾಮಕ್ಕೆ ಆಗಮಿಸಿ ಸಿಸಿಟಿವಿ ಪುಟಿಜ್ ಓಪನ್ ಮಾಡಿದರೆ ಕುರಿ ಕಳ್ಳತನ ಮಾಡಿರುವ ಕಳ್ಳರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎನ್ನುವುದು ನಿಂಗಪ್ಪ ಛತ್ರ ಅವರ ಅಳಲಿನ ಮನವಿ.
ಒಂದು ವೇಳೆ ರಾಣೇಬೆನ್ನೂರು ಗ್ರಾಮಾಂತರ ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ನಾನು ನ್ಯಾಯಕ್ಕಾಗಿ ಒತ್ತಾಯಿಸಿ ಹರನಗಿರಿ ಗ್ರಾಮದಿಂದ ದಾವಣಗೆರೆಯ ಐಜಿಪಿ ಕಚೇರಿಯವರೆಗೂ ಪಾದಯಾತ್ರೆ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 