ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ

ಬೆಂಗಳೂರು, ಏ.12 ,ಕೊರೊನಾ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವುದಾಗಿ ಘೋಷಿಸಿದೆ. ಸರ್ಕಾರದಿಂದ ಮಹತ್ವದ ಘೋಷಣೆಯಾಗಿದ್ದು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಏಪ್ರಿಲ್ ನಿಂದ ಜೂನ್ ವರೆಗೆ ಅಕ್ಕಿ ವಿತರಣೆ ಮಾಡಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.ಬಿಪಿಎಲ್  ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಣೆ, ಎಪಿಎಲ್  ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಕೆಜಿ ಗೆ ರೂ 15 ರಂತೆ 10 ಕೆಜಿ ಅಕ್ಕಿ  ವಿತರಿಸುವುದಾಗಿ ಹೇಳಿದೆ.ಬಿಪಿಎಲ್ ಕಾರ್ಡ್ ಗೆ 1,88,152 ಅರ್ಜಿಗಳು ಬಂದಿದ್ದು,ಎಪಿಎಲ್ ಕಾರ್ಡ್ ಗೆ  61,333 ಅರ್ಜಿ ಸಲ್ಲಿಸಿದ್ದಾರೆ