ಸಹೋದರತ್ವ-ಸಾಮರಸ್ಯ ಉಳಿಯಲಿ ಘೋಷಣೆ ಅಡಿ ರಕ್ಷಬಂಧನಾ ಅಭಿಯಾನ
Rakshabandhan campaign- Haveri News
ಹಾವೇರಿ 11: ಸಹೋದರಿ ಮತ್ತು ಸಹೋದರರ ಬಾಂಧವ್ಯ ಹಬ್ಬವೆಂದು ಪ್ರಸಿದ್ಧಿ ಪಡೆದ ಈ ರಕ್ಷಬಂಧನಾ ಹಬ್ಬವನ್ನು ಕಾಲೇಜ್ ಕ್ಯಾಂಪಸ್ ಗಳಲ್ಲಿ ನಡೆಯುವ ರಾ್ಯಗಿಂಗ್, ಕೋಮು ಗಲಭೆ, ಜಾತಿ ತಾರತಮ್ಯ, ವಿದ್ಯಾರ್ಥಿನಿಯರು ಮೇಲಿನ ದಾಳಿ, ದೌರ್ಜನ್ಯ ವಿರೋಧಿಸಿ. ವಿದ್ಯಾರ್ಥಿಗಳ ರಕ್ಷಣೆಗಾಗಿ, ಕ್ಯಾಂಪಸ್ ಡೆಮಾಕ್ರಸಿ ಉಳಿವಿಗಾಗಿ, ಕೋಮು ದ್ವೇಷ ಅಳಿಯಲಿ, ಸಹೋದರತ್ವ-ಸಾಮರಸ್ಯ ಉಳಿಯಲಿ ಎಂಬ ಘೋಷಣೆ ಅಡಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲ್ಲೂಕು ಸಮಿತಿ ಕಾರ್ಯಕರ್ತರು ನಗರದ ವಿವಿಧ ಕಾಲೇಜ್ ಕ್ಯಾಂಪಸ್ ಗಳಲ್ಲಿ ಸೌಹಾರ್ದ ಐಕ್ಯತಾ ರಕ್ಷಬಂಧನಾ ಅಭಿಯಾನವನ್ನು ಮಾಡಿದರು.
ಸಹೋದರಿ ಮತ್ತು ಸಹೋದರರ ಬಾಂಧವ್ಯವು ಪ್ರೀತಿ, ಕಾಳಜಿ ಮತ್ತು ಪರಸ್ಪರ ರಕ್ಷಣೆಯ ಬಲವಾದ ಬಾಂಧವ್ಯವಾಗಿದೆ.ಈ ಸಂಬಂಧವು ನೆನಪುಗಳು, ಹಂಚಿಕೆಯ ನಗು ಮತ್ತು ಬೆಂಬಲದ ಭಾವನೆಯಿಂದ ಕೂಡಿದೆ. ಅಣ್ಣ-ತಂಗಿ ಅಥವಾ ಅಕ್ಕ-ತಮ್ಮಂದಿರ ನಡುವಿನ ಬಾಂಧವ್ಯವು ರಕ್ಷಾಬಂಧನ ಹಬ್ಬಗಳ ಮೂಲಕ ಆಚರಿಸಲಾಗುತ್ತದೆ, ಈ ಸಂದರ್ಭಗಳಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ ಮತ್ತು ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸಲು ಮತ್ತು ಆರೈಕೆ ಮಾಡಲು ಪ್ರತಿಜ್ಞೆ ಮಾಡುತ್ತಾರೆ.
ಕೇವಲ ಸಹೋದರ ಸಹೋದರಿಯ ರಕ್ಷಣೆವಲ್ಲದೆ ಇಡೀ ಸಮಾಜದ ಪ್ರತಿಯೊಬ್ಬ ಮನುಷ್ಯನನ್ನು ಜಾತಿ, ಧರ್ಮ ಗಡಿ, ರೇಖೆಗಳನ್ನು ಮೀರಿ ಪರಸ್ಪರ ಪ್ರೀತಿ,ಸ್ನೇಹದಿಂದ ರಕ್ಷಣೆ ಮಾಡುವ ಮೂಲಕ ಸ್ನೇಹ, ಸಹೋದರತ್ವ, ಸಾಮರಸ್ಯ ಬೆಳೆಸುವ ಉದ್ದೇಶಿಸಿದಿಂದ ಎಸ್‌ಎಫ್‌ಐ ನೇತೃತ್ವದಲ್ಲಿ ಸೌಹಾರ್ದ ಐಕ್ಯತಾ ರಕ್ಷಬಂಧನಾ ಎಂಬ ಅಭಿಯಾನ ಪ್ರಾರಂಭಿಸುತ್ತಿದೆ.ಕಾಲೇಜ್,ಹಾಸ್ಟೆಲ್, ಮನೆ, ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು ಮಹಿಳೆಯರ, ಸಹೋದರಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಹಿಂಸೆಗಳು, ಜಾತಿ ಧರ್ಮದ ಹೆಸರಿನಲ್ಲಿ ನಡೆಯುವ ಬೇದ ಬಾವ, ಗಲಭೆಗಳ ಅಳಿಯಲಿ ಎಂಬ ಉದ್ದೇಶದಿಂದ ಪರಸ್ಪರ ರಾಖಿ ಕಟ್ಟುವ ಮೂಲಕ ಭಯಮುಕ್ತ ವಾತಾವರಣ ಕ್ಯಾಂಪಸ್ ಡೆಮಾಕ್ರಸಿ ನಿರ್ಮಿಸಬೇಕಾಗಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೊರವರ, ಕಾರ್ಯದರ್ಶಿ ಗಂಗಾ ಯಲ್ಲಾಪುರ, ಮುಖಂಡರಾದ ಅರುಣ್ ನಾಗವತ್, ಮೇಘನಾ ತುಮ್ಮಿನಕಟ್ಟಿ, ಹಜರತಬಿ ಓಲೇಕಾರ, ದೀಪಾ ಬಿ ಕೆ, ಧನುಷ್ ದೊಡ್ಡಮನಿ, ತುಕಾರಾಮ್ ನಾಯಕ, ಗಂಗಾಧರ ಎನ್, ಚೇತನ ಲಮಾಣಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 