ಆ.09 ರಂದು ರಕ್ಷಾ ಬಂದನ
Raksha Bandhan on August 9th
ಆ.09 ರಂದು ರಕ್ಷಾ ಬಂದನ
ತಾಂಬಾ 07: ಅಣ್ಣ-ತಂಗಿಯರ ಈ ಬಂದ ಜನುಮ ಜನುಮದ ಅನುಬಂದ ಜೀವಕ್ಕೆ ನೆರಳು ದೇಹಕ್ಕೆ ಕೊರಳು ನಾವಾಗಲ್ಲೆಂದು ಹರಸುತ್ತಿದೆ. ಈ ರಕ್ಷಾ ಬಂದನ ಅಣ್ಣ ತಂಗಿಯರ ಈ ಪ್ರಿತಿಯ ಬಂದನ. ಕ್ರಿಪೂ 300 ರಲ್ಲಿ ಕಂಡು ಬಂದಿದೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಲೇಗ್ಝಾಂಡರನ್ನು ಭಾರತದ ಮೇಲೆ ದಂಡೆತ್ತಿ ಬಂದಂತ್ತ ಸಮಯದಲ್ಲಿ ಇಲ್ಲಿನ ರಾಜ ಪುರೋನೊಂದಿಗೆ ಯುದ್ದಕ್ಕೆ ನಿಂತು ಪರಾಜಯ ಹೊಂದುತ್ತಾನೆ. ಆಗ ಪುರ ಭಾರತದ ಪರಾಕ್ರಮಿ ರಾಜನಾಗಿದ್ದು ಆತನಿಂದ ಅಲೇಗ್ಝಾಂಡರ ಬದುಕುಳಿಯುವದು ಕಷ್ಟಕರವಾಗಿರುತ್ತದೆ. ಅಂತಹ ಸಮಯದಲ್ಲಿ ಅಲೇಗ್ಝಾಂಡರನ್ನು ಸ್ಯೆನ್ಯದಲ್ಲಿದ್ದ್ ಗುಪ್ತ ಜನರು ಪುರುವಿಗೆ ರಕ್ಷಾ ಬಂದನ ಮಾಡಿದರೆ ಅಲೇಗ್ಝಾಂಡರನ್ನು ಬದುಕಿಸಿಕೊಳ್ಳ ಬಹುದು ಎಂಬ ಮಾಹಿತಿ ಅಲೇಗ್ಝಾಂಡರನ ಪತ್ನಿಗೆ ತಿಳಿಸುತ್ತಾರೆ. ಆಗ ಆತನ ಪತ್ನಿ ಪುರುಗೆ ರಕ್ಷಾ ಬಂದನ ಮಾಡುವದಾಗಿ ಹಾಗೂ ತನ್ನ ಪತಿಯ ಪ್ರಾಣ ಬೀಕ್ಷೆಯನ್ನು ಬೇಡಿ ರಾಕಿಯನ್ನು ಕೊಟ್ಟು ಕಳುಹಿಸುತ್ತಾಳೆ. ತಂಗಿಯ ರಕ್ಷಣೆಯನ್ನು ಮಾಡಬೇಕಾದ ಮಹತ್ತರ ಹೊಣೆಯನ್ನು ಹೊತ್ತ ಪುರು ಅಲೇಗ್ಝಾಂಡರನನ್ನು ಬಿಟ್ಟು ಕಳಿಹಿಸುತ್ತಾನೆ ಎಂಬ ಕಥೆಯು ರಕ್ಷಾ ಬಂದನದ ಹಿಂದೆ ಇದೆ. ಆದ್ದರಿಂದ ಈ ರಕ್ಷಾ ಬಂದನಕ್ಕೆ 2320 ವರ್ಷಗಳ ಇತಿಹಾಸ ಇದೆ ಎಂಬುವದು ತೀಳಿದು ಬರುತ್ತದೆ.
ಶ್ರಾವಣ ಮಾಸದ ಪೂಣಿಮೆಯಂದು ಆಚರಿಸುವ ಈ ಹಬ್ಬಕ್ಕೆ ಶ್ರಾವಣಿ ಪರ್ವ ಎಂದು ಹಾಗೂ ನಾರಿಯರ ಪೂರ್ಣಿಮಾ ಎಂದು ಕರೆಯುತ್ತಾರೆ. ಇದು ಪ್ರತಿ ವರ್ಷ ಅಗಸ್ಟ ತಿಂಗಳಿನ ಆಸು ಪಾಸಿನಲ್ಲಿ ಬರುವದರಿಂದ ಪಂಚಮಿಯು ಸಹ ಬಂದು ಹೊಗಿರುತ್ತದೆ. ಪಂಚಮಿಯಲ್ಲಿ ತಂಗಿಯರು ಅಣ್ಣನಿಂದ ಆಶಿರ್ವಾದವನ್ನು ಪಡೆದುಕೊಂಡರೆ ರಕ್ಷಾ ಬಂದನದಲ್ಲಿ ತಂಗಿಯರು ಅಣ್ಣನಿಗೆ ನೂರು ವರ್ಷ ಆಯುಷ ಆರೋಗ್ಯವನ್ನು ಕೊಟ್ಟು ಕಾಪಾಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದು ಪ್ರಾಚಿನ ಕಾಲದಿಂದಲು ನಡೆದು ಬಂದಿದೆ ಆದರು ಇದು ಆಗಿನ ಕಾಲದಲ್ಲಿ ಬ್ರಾಹ್ಮಣರ ಮುಖ್ಯವಾದ ಹಬ್ಬವಾಗಿತ್ತು. ದ್ವಾಪರ ಯುಗದಲ್ಲಿ ಅರ್ಜುನನ್ನು ವರವಾಗಿ ಪಡೆಯಲು ಸುಬದ್ರೆ ಶ್ರೀಕೃಷ್ಣನಿಗೆ ರಕ್ಷಾ ಬಂದನ ಮಾಡಿದ್ದಾಳೆ ಎಂದು ಭಗವಾನ ವಿಷ್ಣುವಾಮನನ ಅವತರಾದಲ್ಲಿ ರಾಜ ಬಲಿ ಚಕ್ರವರ್ತಿಗೆ ರಕ್ಷಾ ಬಂದನ ಮಾಡಿದ ನಂತರವೆ ಪಾಥಾಳಕ್ಕೆ ಹೊಗಲು ಆದೇಶ ಸಿಕ್ಕಿಂತಂತೆ ಎಂಬ ಕಥೆಗಳು ರಕ್ಷಾ ಬಂದನದ ಹಿಂದೆ ತಳಕು ಹಾಕಿವೆ ಆದರು ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಅಣ್ಣ ತಂಗಿಯರು ನೂರು ವರ್ಷ ಸುಖವಾಗಿ ಪ್ರಿತಿಯಿಂದ ಬಾಳಲೆಂದು ಆಚರಿಸಲಾಗುತ್ತಿದೆ. ಸ್ನೇಹ ಶಾಂತಿ ರಕ್ಷಣೆ ಸತ್ತ ಸಂಕಲ್ಪ ಸಂಕೇತವೆ ಈ ರಕ್ಷಾ ಬಂದನ ಇಲ್ಲಿ ತನ್ನ ಅಣ್ಣನು ಎಂದಾಹದೆ ಸಂದರ್ಭದಲ್ಲಿ. ಯಾರಿಗು ತಲೆ ಬಾಗದೆ ಎಂಥದೆ ಪರಾಕ್ರಮಿಯು ಎದುರು ದಿಗ್ವಿಜಯ ಸಾದಿಸಲಿ ಎಂಬುದಾಗಿದೆ ಅದಕ್ಕ ತಕ್ಕಂತ್ತೆ ಈ ದಿನ ತಂಗಿಯ ಕೈಯಿಂದ ಹಣೆಗೆ ಸಿಂದುರ ಇಡಿಸಿಕೊಂಡು ನಂತರ ಆಕೆಗೆ ಒಂದಿಷ್ಟು ಪ್ರಿತಿಯ ಕಾಣಿಕೆ ಸಲ್ಲಿಸುತ್ತಾನೆ.
ಇಲ್ಲಿ ರಾಕಿ ಎಂಬುದು ಎರಡು ಎಳೆಯ ದಾರವಾಗಿರದೆ. ಅದು ಅಣ್ಣನ ಮಾನ ಪ್ರಾಣ ಕಾಪಾಡುವ ಸರಪಳಿ ಎಂದು ತಂಗೆಯಂದ್ದಿರು ಬಾವಿಸುತ್ತಾರೆ. ಈ ಹಿಂದೆ ರಕ್ಷಾ ಬಂದನದಂದು ಬೆಹೆನಾನೆ ಬಾಯಿಕಿ ಕಲಾಯಿ ಸೆ ಪ್ಯಾರ ಬಾಂದಾ ಹೈ ಎಂದು ಹಾಡನ್ನು ಹಾಡತ್ತಾ ಅಣ್ಣನಿಗೆ ರಕ್ಷಾ ಬಂದನ ಮಾಡಲು ಬರುತ್ತಿದ್ದ ತಂಗಿಯರು ಬದಲಾದ ವರ್ತಮಾನದಲ್ಲಿ ಇಂದು ಇಂಟರನೆಟ ಮುಖಾಂತರ ರಾಕಿಯನ್ನು ಕಳಿಸುವಂತ್ತಾಗಿದೆ. ರಕ್ಷಾ ಬಂದನಕ್ಕಾಗಿ ರಾಷ್ಟ್ರದ ಹಲವಾರು ರಾಜ್ಯಗಳು ರಾಖಿಗಳನ್ನು ತಯಾರಿಸುತ್ತಿದ್ದು ಇದರಲ್ಲಿನ ಮೈಸೂರಿನ ಸ್ಯಾಂಡಲವುಡ್ ರಾಖಿ, ಮುಂಬಯಿನ ಕಾರ್ಟೂನ ರಾಖಿ, ಗುಜರಾತಿನ ಸಿಲ್ವರ ರಾಖಿ. ಪಂಜಾಬಿನ ರೆಷ್ಮೇ ರಾಖಿ, ಕೊಲ್ಕಾತ್ತಾದ ಹಸ್ತಕವೆ ರಾಖಿ ಸುದ್ದಿ ಮಾಡುತ್ತವೆ. ಸಮುದರ ಬಾಂದವ್ಯ ಬೆಸೆಯುವ ರಾಖಿ ಪ್ರತಿ ವರ್ಷದಂತೆ ಈ ವರ್ಷವು ಆಗಷ್ಟ ತಿಂಗಳಿನ ದಿ 09 ರಂದು ಬಂದಿದ್ದು ಅಣ್ಣ ತಂಗಿಯರು ಅತ್ಯಂತ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲು ತಯಾರಿ ನಡೆಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 